More

    ದೇಶದಲ್ಲಿ ಎಂಟೇ ದಿನಕ್ಕೆ ದುಪ್ಪಟ್ಟಾಯ್ತು ಕರೊನಾ ಸೋಂಕಿತರ ಸಂಖ್ಯೆ, ಒಂದೇ ದಿನ 52 ಜನರ ಸಾವು

    ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್​ನಿಂದಾಗಿ 52 ಜನರು ಮೃತಪಟ್ಟಿದ್ದಾರೆ. ಇದು ಕರೊನಾ ಕಾಣಿಸಿಕೊಂಡ ದಿನದಿಂದ ಈವರೆಗೆ ಒಂದೇ ದಿನದಲ್ಲಿ ಅತಿ ಹೆಚ್ಚು ಸಾವಿನ ಸಂಖ್ಯೆಯಾಗಿದೆ. ಈ ಮೂಲಕ ಮೃತರ ಸಂಖ್ಯೆ 640ಕ್ಕೆ ಏರಿದೆ.
    ಒಟ್ಟಾರೆ ಸೋಂಕಿತರ ಸಂಖ್ಯೆ 20 ಸಾವಿರಕ್ಕೆ ತಲುಪಿದೆ. ಈ ಮೂಲಕ ಎಂಟೇ ದಿನದಲ್ಲಿ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಿದೆ. ಮಂಗಳವಾರ ಒಂದೇ ದಿನ 1,510 ಹೊಸ ಪ್ರಕರಣಗಳು ವರದಿಯಾಗಿವೆ.

    ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳಿದ್ದು, 5218 ಸೋಂಕಿತರು ರಾಜ್ಯದಲ್ಲಿದ್ದಾರೆ. ದೇಶದ ಶೇ.25ಕ್ಕೂ ಅಧಿಕ ರೋಗಿಗಳು ಈ ರಾಜ್ಯದಲ್ಲೇ ಇದ್ದಂತಾಗಿದೆ. ಅದರಲ್ಲೂ ಮುಂಬೈ ಹಾಗೂ ಪುಣೆಯಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಲೇ ಸಾಗಿದೆ. ಅಲ್ಲದೇ ಕಳೆದ ಮೂರು ದಿನಗಳಿಂದ ಮಹಾರಾಷ್ಟ್ರದಲ್ಲಿಯೇ ದೇಶದಲ್ಲೇ ಅತಿ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿವೆ.

    ದೆಹಲಿಯನ್ನು ಮೀರಿಸಿರುವ ಗುಜರಾತ್​ ಸೋಂಕಿತರ ಸಂಖ್ಯೆಯಲ್ಲಿ ಎರಡನೇ ಸ್ಥಾನಕ್ಕೆ ತಲುಪಿದೆ. ಗುಜರಾತ್​ನಲ್ಲಿ 2178 ರೋಗಿಗಳಿದ್ದರೆ, ದೆಹಲಿಯಲ್ಲಿ ಇವರ ಪ್ರಮಾಣ 2156 ಆ ಗಿದೆ. ರಾಜಸ್ಥಾನ್​, ಮಧ್ಯಪ್ರದೇಶ, ತಮಿಳುನಾಡು, ಉತ್ತರಪ್ರದೇಶದಲ್ಲೂ ಹೆಚ್ಚು ಸೋಂಕಿತರಿದ್ದಾರೆ.

    ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಬೆಳವಣಿಗೆ ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ. ದೇಶಾದ್ಯಂತ ಲಾಕ್​​ಡೌನ್​ ಮುಂದುವರಿದ ಕಾರಣ ಸೋಂಕು ತೀವ್ರವಾಗಿ ವ್ಯಾಪಿಸುವುದನ್ನು ತಡೆಗಟ್ಟಿದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆರಂಭದಲ್ಲಿ ನೂರು ಪ್ರಕರಣಗಳಿಂದ ಸಾವಿರ ಪ್ರಕರಣಗಳಾಗಲು ಎರಡು ವಾರ ತೆಗೆದುಕೊಂಡಿತ್ತು. 1,000 ದಿಂದ 10,000ಕ್ಕೆ ತಲುಪಲು ಎರಡು ವಾರಕ್ಕಿಂತ ಹೆಚ್ಚಿನ ಸಮಯ ಬೇಕಾಗಿತ್ತು. ಅದೇ ವೇಗದಲ್ಲಿ ಸಾಗಿದ್ದರೆ ತಿಂಗಳ ಕೊನೆಯಲ್ಲಿ ಒಂದು ಲಕ್ಷ ಪ್ರಕರಣಗಳಾಗುತ್ತಿದ್ದವು. ಆದರೆ, ಲಾಕ್​ಡೌನ್​ ಕಾರಣದಿಂದಾಗಿ ಸೋಂಕು ಹರಡುವುದನ್ನು ನಿಯಂತ್ರಿಸಿದಂತಾಗಿದೆ. ಹೀಗಾಗಿ ತಿಂಗಳ ಕೊನೆಗೆ 25,000 ದಿಂದ 30 ಸಾವಿರ ತಲುಪುವ ನಿರೀಕ್ಷೆಯಿದೆ.

    ಬಿಟ್ಟೆನೆಂದರೂ ಬಿಡದ ಹೆಮ್ಮಾರಿ ಕರೊನಾ, 70 ದಿನಗಳಾದರೂ ದೇಹದಲ್ಲೇ ಠಿಕಾಣಿ, ಗುಣಮುಖರಾದವರಲ್ಲಿ ಪದೇಪದೆ ಸೋಂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts