More

    ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ

    ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್​ನಲ್ಲಿ ಹಡಗು ನಿರೋಧಕ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆಯನ್ನು ಭಾರತ ಮಂಗಳವಾರ ಯಶಸ್ವಿಯಾಗಿ ಪೂರೈಸಿದೆ. ಭಾರತೀಯ ನೌಕಾಪಡೆಯ ಪರೀಕ್ಷಾರ್ಥ ಪ್ರಯೋಗಗಳ ಭಾಗವಾಗಿ ಈ ಕ್ಷಿಪಣಿ ಪರೀಕ್ಷೆಯನ್ನು ನಡೆಸಲಾಗಿತ್ತು.

    ಭೂಮಿ ಮೇಲೆ ದಾಳಿ ನಡೆಸಬಲ್ಲ ಬ್ರಹ್ಮೋಸ್ ಸೂಪರ್​ಸಾನಿಕ್ ಕ್ಷಿಪಣಿಯ ಪರೀಕ್ಷೆಯನ್ನು ಕೆಲವು ದಿನಗಳ ಹಿಂದಷ್ಟೇ ಯಶಸ್ವಿಯಾಗಿ ನೆರವೇರಿಸಲಾಗಿತ್ತು. ಈ ಪರೀಕ್ಷೆ ಕೂಡ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ವ್ಯಾಪ್ತಿಯಲ್ಲೇ ನಡೆದಿತ್ತು. ಬ್ರಹ್ಮೋಸ್​ ಸೂಪರ್ ಸಾನಿಕ್ ಕ್ರೂಸ್ ಮಿಸೈಲ್​ ಜಗತ್ತಿನಲ್ಲೇ ಅತ್ಯಂತ ವೇಗದ ಆಪರೇಷನಲ್ ಸಿಸ್ಟಮ್ ಹೊಂದಿರುವಂಥದ್ದಾಗಿದೆ. 298 ಕಿ.ಮೀ.ನಿಂದ 450 ಕಿ.ಮೀ. ತನಕದ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ.

    ಇದನ್ನೂ ಓದಿ:  ಪುರುಷರೆಲ್ಲರೂ ಧರ್ಮ, ಉದ್ಯೋಗ, ಆದಾಯ ಘೋಷಿಸಿ ಮದುವೆ ಮಾತುಕತೆ ಮುಂದುವರಿಸಿ – ಅಸ್ಸಾಂ ಸಚಿವ

    ಭಾರತೀಯ ಸೇನೆ ಈ ಪರೀಕ್ಷಾ ಪ್ರಯೋಗವನ್ನು ನೆರವೇರಿಸಿದ್ದು, ಡಿಆರ್​ಡಿಒ ಅಭಿವೃದ್ಧಿ ಪಡಿಸಿದ ಹಲವು ಕ್ಷಿಪಣಿಗಳನ್ನು ಸೇನೆ ಹೊಂದಿದ್ದು ಕ್ರಮವಾಗಿ ಪರೀಕ್ಷೆ ನಡೆಸುತ್ತ ಬಂದಿದೆ. ಬ್ರಹ್ಮೋಸ್ ಕ್ಷಿಪಣಿಯ ದಾಳಿ ಗುರಿಯನ್ನು ಇದೀಗ 400 ಕಿ.ಮೀ. ದೂರಕ್ಕೆ ವಿಸ್ತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)

    ರೈತ ಪ್ರತಿಭಟನೆ – ಜೆ.ಪಿ.ನಡ್ಡಾ ಮನೆಯಲ್ಲಿ ಕೇಂದ್ರ ಸಚಿವರ ತುರ್ತುಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts