More

    ಕಾಂಗ್ರೆಸ್ ವಿಶ್ವದಿಂದ ಸಹಾಯ ಕೇಳ್ತಿತ್ತು, ಈಗ ವಿಶ್ವಕ್ಕೆ ಭಾರತ ಸಹಾಯ ಮಾಡ್ತಿದೆ: ಪ್ರಧಾನಿ ಮೋದಿ

    ಪಿಲಿಭಿತ್: ಈ ಬಾರಿ 400ಕ್ಕೂ ಹೆಚ್ಚು ಲೋಕಸಭಾ ಸ್ಥಾನ ಗೆಲ್ಲುವ ಗುರಿ ಹಾಕಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಬ್ಬರದ ಪ್ರಚಾರ ಆರಂಭಿಸಿದ್ದಾರೆ. ಸುಡು ಬಿಸಿಲನ್ನು ಲೆಕ್ಕಿಸದೆ ದೇಶದೆಲ್ಲಡೆ ಪ್ರಚಾರ ಸಭೆಗಳಲ್ಲಿ ಭಾಗಿಯಾಗುತ್ತಿದ್ದಾರೆ.

    ಇದನ್ನೂ ಓದಿ: ದೆಹಲಿ ಲಿಕ್ಕರ್‌ ಹಗರಣ: ಬಿಆರ್​ಎಸ್ ನಾಯಕಿ ಕೆ.ಕವಿತಾಗೆ 14 ದಿನಗಳ ನ್ಯಾಯಾಂಗ ಬಂಧನ ವಿಸ್ತರಣೆ

    ಉತ್ತರಪ್ರದೇಶದ ಪಿಲಿಭಿತ್‍ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಅವರು ಮಾತನಾಡಿದ ಮೋದಿ, ಪ್ರಸ್ತುತವಾಗಿ ಜಗತ್ತು ಎದುರಿಸುತ್ತಿರುವ ವಿವಿಧ ಸಂಕಷ್ಟಗಳ ನಡುವೆ ಭಾರತಕ್ಕೆ ಸಾಧಿಸಲು ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಸಾಬೀತು ಪಡಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭರವಸೆ ವ್ಯಕ್ತಪಡಿಸಿದರು.

    ಗುರಿ ಎಷ್ಟೇ ಕಠಿಣವಾಗಿದ್ದರೂ, ಅದನ್ನು ಸಾಧಿಸಲು ಭಾರತ ಸಂಕಲ್ಪ ಮಾಡಿದರೆ, ಅದು ಖಂಡಿತವಾಗಿಯೂ ಸಾಧಿಸುತ್ತದೆ. ಇಂದು, ಈ ಸ್ಫೂರ್ತಿ ಮತ್ತು ಶಕ್ತಿಯೊಂದಿಗೆ, ನಾವು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಚುನಾವಣಾ ರ್ಯಾಲಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
    ಕಾಂಗ್ರೆಸ್ ಸರ್ಕಾರ ವಿಶ್ವದಿಂದ ಸಹಾಯವನ್ನು ಕೇಳುತ್ತಿದ್ದ ಸಮಯವಿತ್ತು, ಆದರೆ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಭಾರತದಿಂದ ಇಡೀ ಜಗತ್ತಿಗೆ ಔಷಧಿಗಳನ್ನು ಲಭ್ಯವಾಗುವಂತೆ ಮಾಡಲಾಗಿತ್ತು ಎಂದು ಪ್ರಧಾನಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

    ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಶಕ್ತಿಯಾದಾಗ, ಜನರು ಅದರ ಬಗ್ಗೆ ಹೆಮ್ಮೆಪಡುತ್ತೀರಾ ಅಥವಾ ಇಲ್ಲವೇ? ಚಂದ್ರಯಾನವು ಚಂದ್ರನ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದಾಗ ನೀವು ಹೆಮ್ಮೆಪಡುತ್ತೀರಾ ಅಥವಾ ಇಲ್ಲವೇ? ಭಾರತದಲ್ಲಿ ನಡೆದ ಭವ್ಯವಾದ ಜಿ20 ಶೃಂಗಸಭೆಯನ್ನು ಎಲ್ಲೆಡೆ ಪ್ರಶಂಸಿಸಲಾಯಿತು. ದೇಶ ಬಲಿಷ್ಠವಾದಾಗ ಜಗತ್ತು ಆ ದೇಶದ ಮಾತು ಕೇಳುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

    ಏಪ್ರಿಲ್ 19 ರಂದು ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ಉತ್ತರ ಪ್ರದೇಶದ ಎಂಟು ಸಂಸದೀಯ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಸಹರಾನ್‌ಪುರ, ಕೈರಾನಾ, ಮುಜಾಫರ್‌ನಗರ, ಬಿಜ್ನೋರ್, ನಗೀನಾ (SC), ಮೊರಾದಾಬಾದ್, ರಾಂಪುರ್ ಮತ್ತು ಪಿಲಿಭಿತ್ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.

    ನಟಿ ಸಮಂತಾಗೆ 30, 40 ಅದೆಷ್ಟೇ ವಯಸ್ಸಾದ್ರೂ ಆಕೆ…. ಶಾಕಿಂಗ್ ಹೇಳಿಕೆ ನೀಡಿದ ಸ್ಟಾರ್​ ಡೈರೆಕ್ಟರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts