More

    ಕಾಶ್ಮೀರ ಸಂಘರ್ಷವನ್ನು ಮೊದಲನೇ ಮಹಾಯುದ್ಧಕ್ಕೆ ಹೋಲಿಸಿ ಪಾಕ್​ ಪರ ಮಾತನಾಡಿದ್ದ ಟರ್ಕಿ ಅಧ್ಯಕ್ಷನಿಗೆ ಭಾರತದ ತಿರುಗೇಟು; ನಮ್ಮ ಆಂತರಿಕ ವಿಚಾರ ನಿಮಗೇಕೆ ಎಂದ ವಿದೇಶಾಂಗ ಇಲಾಖೆ

    ನವದೆಹಲಿ: ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನದ ಜಂಟಿ ಅಧಿವೇಶನದಲ್ಲಿ ಮಾತನಾಡುತ್ತ ಕಾಶ್ಮೀರದ ವಿಚಾರ ಮಾತನಾಡಿದ ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಅವರನ್ನು ಭಾರತ ತರಾಟೆಗೆ ತೆಗೆದುಕೊಂಡಿದೆ.
    ಭಾರತದ ಆಂತರಿಕ ವ್ಯವಹಾರದಲ್ಲಿ ತಲೆ ಹಾಕಬೇಡಿ ಎಂದು ಎಚ್ಚರಿಕೆ ನೀಡಿದೆ.

    ಶುಕ್ರವಾರ ಪಾಕಿಸ್ತಾನದ ಸಂಸತ್ತಿನಲ್ಲಿ ಮಾತನಾಡಿದ್ದ ರಿಸೆಪ್ ತಯ್ಯಿಪ್ ಎರ್ಡೊಗನ್ ಅವರು,ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಟರ್ಕಿ ಜನರು ವಿದೇಶೀ ಪ್ರಾಬಲ್ಯದ ವಿರುದ್ಧ ಹೋರಾಟ ನಡೆಸಿದ ರೀತಿಯಲ್ಲಿಯೇ ಈಗ ಕಾಶ್ಮೀರಿ ಜನರು ತಮ್ಮ ಮೇಲೆ ಪ್ರಭುತ್ವ ಸಾಧಿಸುತ್ತಿರುವವರ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಹೇಳಿದ್ದರು. ಈ ಮೂಲಕ ಪಾಕ್​ ಮತ್ತು ಭಾರತದ ನಡುವಿನ ಕಾಶ್ಮೀರ ಸಂಘರ್ಷವನ್ನು ಮೊದಲನೇ ಮಹಾಯುದ್ಧಕ್ಕೆ ಹೋಲಿಸಿದ್ದರು.
    ಈ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ರವಿಕುಮಾರ್ ಅವರು, ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅದನ್ನು ಬೇರೆಯವರಿಗೆ ವರ್ಗಾಯಿಸಲು ಸಾಧ್ಯವಿಲ್ಲ. ವೃಥಾ ಕಾಶ್ಮೀರದ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದಿದ್ದಾರೆ.

    ಭಾರತದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ನಾವು ಟರ್ಕಿಯ ಅಧ್ಯಕ್ಷರನ್ನು ಕೋರುತ್ತಿದ್ದೇವೆ. ಪಾಕಿಸ್ತಾನಿ ಉಗ್ರರಿಂದ ಭಾರತ ಹಾಗೂ ಕಾಶ್ಮೀರದಂತಹ ಪ್ರದೇಶಗಳಿಗೆ ಗಂಭೀರ ಬೆದರಿಕೆಗಳಿರುವ ಬಗ್ಗೆ, ಕಾಶ್ಮೀರದಲ್ಲಿ ವಾಸ್ತವವಾಗಿ ಇರುವ ಪರಿಸ್ಥಿತಿಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ ಎಂದು ರವಿಕುಮಾರ್​ ತಿರುಗೇಟು ನೀಡಿದ್ದಾರೆ.

    2019ರಲ್ಲಿ ನಡೆದ ವಿಶ್ವಸಂಸ್ಥೆ ಅಧಿವೇಶನದಲ್ಲೂ ಕೂಡ ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಕಾಶ್ಮೀರದ ವಿಚಾರ ಪ್ರಸ್ತಾಪಿಸಿ ಪಾಕಿಸ್ತಾನದ ಪರ ಮಾತನಾಡಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts