More

    ನ್ಯೂಯಾರ್ಕ್‌ನಲ್ಲಿ ಭಾರತ-ಪಾಕ್ ಕಾದಾಟ: ಟಿ20 ವಿಶ್ವಕಪ್ ಪಂದ್ಯಗಳ ಆರಂಭದ ಮಾಹಿತಿ ಇಲ್ಲಿದೆ!

    ಬೆಂಗಳೂರು: ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 9ನೇ ಆವೃತ್ತಿಯ ಚುಟುಕು ಕ್ರಿಕೆಟ್ ವಿಶ್ವ ಸಮರದ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶುಕ್ರವಾರ ಬಿಡುಗಡೆ ಮಾಡಿದೆ. ಜೂನ್ 1ರಂದು ಜಂಟಿ ಆತಿಥೇಯ ಅಮೆರಿಕ ಹಾಗೂ ಕೆನಡ ತಂಡಗಳು ಡಲ್ಲಾಸ್‌ನಲ್ಲಿ ಮುಖಾಮುಖಿ ಆಗುವುದರೊಂದಿಗೆ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಚಾಲನೆ ದೊರೆಯಲಿದೆ.

    ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಹೈವೋಲ್ಟೇಜ್ ಕಾದಾಟ ಜೂನ್ 9ರಂದು ನ್ಯೂಯಾರ್ಕ್‌ನಲ್ಲಿ ನಿಗದಿಪಡಿಸಲಾಗಿದೆ. 2007ರ ೈನಲಿಸ್ಟ್‌ಗಳಾದ ಭಾರತ-ಪಾಕಿಸ್ತಾನ ತಂಡಗಳು ಎ ಗುಂಪಿನಲ್ಲಿ ಸ್ಥಾನ ಪಡೆದಿವೆ. ಉಭಯ ತಂಡಗಳ ಹೈ-ವೋಲ್ಟೇಜ್ ಕದನ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಿಗದಿಯಾಗಿದೆ. ಲಾಂಗ್ ಐಲ್ಯಾಂಡ್‌ನಲ್ಲಿರುವ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ.

    ರಾತ್ರಿ 8.30ಕ್ಕೆ ಭಾರತದ ಪಂದ್ಯ?: ಟಿ20 ವಿಶ್ವಕಪ್ ವೇಳಾಪಟ್ಟಿಯನ್ನು ಪ್ರಕಟಿಸುವಾಗ ಐಸಿಸಿ ಪಂದ್ಯಗಳ ಸಮಯವನ್ನು ಸ್ಪಷ್ಟಪಡಿಸಿಲ್ಲ. ಆದರೆ ಉಪಖಂಡದ ಕ್ರಿಕೆಟ್ ಪ್ರೇಮಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ಪಂದ್ಯಗಳು ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8.30ಕ್ಕೆ ಆರಂಭಗೊಳ್ಳಲಿವೆ ಎನ್ನಲಾಗಿದೆ. ಭಾರತವೂ ತನ್ನ ಎಲ್ಲ ಪಂದ್ಯಗಳನ್ನು ಇದೇ ಸಮಯದಲ್ಲಿ ಆಡಲಿದೆ ಎನ್ನಲಾಗಿದೆ. ಅಂದರೆ ಅಮೆರಿಕದಲ್ಲಿ ಬೆಳಗ್ಗೆ 10 ಗಂಟೆಗೆ ಪಂದ್ಯ ಆರಂಭಗೊಳ್ಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts