More

    ಜಾಗತಿಕ ಒಳಿತಿಗಾಗಿ ಭಯೋತ್ಪಾದನೆ ಸವಾಲುಗಳನ್ನು ಎದುರಿಸಲು ಮಾತ್ರ ಭಾರತ ತನ್ನ ಸಾಮರ್ಥ್ಯವನ್ನು ವ್ಯಯಿಸುತ್ತದೆ: ಸಚಿವ ಜೈಶಂಕರ್​

    ನವದೆಹಲಿ: ಪ್ರಪಂಚವು ಸಾಕಷ್ಟು ಅಡ್ಡಿಪಡಿಸುವ ಶಕ್ತಿಗಳನ್ನು ಹೊಂದಿದೆ. ಆದರೆ ಭಾರತದ ದಾರಿ ಅದ್ಯಾವುದೂ ಅಲ್ಲವೆಂದು ವಿದೇಶಾಂಗ ಸಚಿವ ಎಸ್​.ಜೈಶಂಕರ್​ ಅವರು ತಿಳಿಸಿದ್ದಾರೆ.

    ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸಿದ್ಧಾಂತ ಪ್ರತಿಪಾದನೆ ಮತ್ತು ಸ್ವಯಂ ಕೇಂದ್ರಿತವೂ ಕೂಡ ಭಾರತದ ದಾರಿಯಲ್ಲ. ಜಾಗತಿಕ ಉತ್ತಮ ಮತ್ತು ಭಯೋತ್ಪಾದನೆಯಂತಹ ಸವಾಲುಗಳನ್ನು ಮೆಟ್ಟಿನಿಲ್ಲಲು ಬೇಕಾಗಿರುವ ಒಪ್ಪಂದಗಳಿಗೆ ಭಾರತ ತನ್ನ ಸಾಮರ್ಥ್ಯವನ್ನು ವ್ಯಯಿಸುತ್ತದೆ ಎಂದು ಹೇಳಿದರು.

    ಇದೇ ವೇಳೆ ಇರಾನ್​ ಮತ್ತು ಅಮೆರಿಕ ನಡುವಿನ ಬಿಕ್ಕಟ್ಟಿನ ಬಗ್ಗೆ ಮಾತನಾಡಿ, ಎರಡು ಕೂಡ ಪ್ರತ್ಯೇಕ ರಾಷ್ಟ್ರಗಳಾಗಿದ್ದು, ಬಿಕ್ಕಟ್ಟಿನ ಚೆಂಡು ಅವರ ಕೋರ್ಟ್​ನಲ್ಲಿಯೇ ಇದೆ. ಹೀಗಾಗಿ ಅಂತಿಮ ಫಲಿತಾಂಶವು ಒಳಗೊಂಡಿರುವ ಆಟಗಾರರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

    ಬಳಿಕ ಚೀನಾ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ ಅವರು ನಿರ್ಣಾಯಕ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ನೆರೆ ರಾಷ್ಟ್ರಗಳ ಉತ್ತಮ ಸಂಬಂಧ ಬಹಳ ಮುಖ್ಯವೆಂದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts