More

    ಸಂವಿಧಾನದಿಂದ ಭಾರತ ಅಗ್ರಗಣ್ಯ

    ಬಾಳೆಹೊನ್ನೂರು: ಭಾರತ ಪ್ರಪಂಚದ ಅಗ್ರಗಣ್ಯ ರಾಷ್ಟ್ರವಾಗಲು ಭದ್ರ ಬುನಾದಿ ಹಾಕಿರುವುದು ಸಂವಿಧಾನ ಎಂದು ಐಟಿಐ ಕಾಲೇಜು ಪ್ರಾಚಾರ್ಯ ಎಚ್.ಆರ್.ಆನಂದ್ ಹೇಳಿದರು.

    ಜಗದ್ಗುರು ರೇಣುಕಾಚಾರ್ಯ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ಅಂಬೇಡ್ಕರ್ ಹೊಂದಿದ್ದ ಜನಪರ ಚಿಂತನೆಗಳು ಜಾರಿಗೆ ಬಂದಿದ್ದರಿಂದ ಭಾರತ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕವಾಗಿ ಪ್ರಬುದ್ಧವಾಗಿದೆ. ಅಂಬೇಡ್ಕರ್ ಅವರು ಭಾರತೀಯರ ಒಳಿತಿಗಾಗಿ ಹಾಕಿಕೊಟ್ಟ ಯೋಜನೆಗಳು ಸ್ಮರಣೀಯ ಎಂದರು.
    ಅಂಬೇಡ್ಕರ್ ವಿಚಾರಧಾರೆಗಳನ್ನು ಯುವಜನರು ಅರ್ಥಮಾಡಿಕೊಂಡು ಮುನ್ನಡೆಯಬೇಕಾಗಿದೆ. ಅಂಬೇಡ್ಕರ್ ಅಗಾಧ ಪ್ರತಿಭೆಯಿಂದಲೇ ಉನ್ನತ ಶಿಕ್ಷಣ ಪಡೆದು ಸಂವಿಧಾನ ರಚಿಸಿದರು. ಅಂಬೇಡ್ಕರ್ ವಿದ್ಯಾರ್ಥಿ ಜೀವನದಲ್ಲಿ ಹೊಂದಿದ್ದ ಧ್ಯೇಯೋದ್ದೇಶಗಳನ್ನು ಇಂದಿನ ವಿದ್ಯಾರ್ಥಿಗಳು ಸ್ವಲ್ಪಮಟ್ಟಿಗಾದರೂ ಅಳವಡಿಸಿಕೊಂಡು ಸಾಧನೆ ಮಾಡಬೇಕು ಎಂದು ಹೇಳಿದರು.
    ಶಿಕ್ಷಕ ವಿ.ವಿ.ಚಂದ್ರಶೇಖರ್ ಮಾತನಾಡಿ, ಅಂಬೇಡ್ಕರ್ ಭಾರತೀಯರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಮೂಕನಾಯಕ, ಬಹಿಷ್ಕೃತ ಭಾರತ ಎಂಬ ಪತ್ರಿಕೆಗಳನ್ನು ಹೊರತಂದರು. ಇವುಗಳಿಂದ ಭಾರತೀಯರು ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟವನ್ನು ಇನ್ನೂ ಮುಂಚೂಣಿಗೆ ತಂದರು ಎಂದರು.
    ಮುಂಬೈನ ದಾದರ್‌ನಲ್ಲಿರುವ ಅಂಬೇಡ್ಕರ್ ಸಮಾಧಿ ಸ್ಥಳವನ್ನು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿ ಪವಿತ್ರ ಯಾತ್ರಾ ಸ್ಥಳವನ್ನಾಗಿ ಮಾರ್ಪಡಿಸಿರುವುದು ಭಾರತೀಯರಿಗೆ ಹೆಮ್ಮೆಯ ವಿಷಯ ಎಂದು ಹೇಳಿದರು.
    ಕೆ.ಎಸ್.ಅಶೋಕ್, ಎಚ್.ಜಿ.ಉಮೇಶ್, ರವಿರಾಜು, ಎಸ್.ಎಚ್.ಪ್ರಕಾಶ್, ಅಜಯ್, ಅವಿನಿಕ್, ಮೇಘನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts