More

    2036, 2040ರ ಒಲಿಂಪಿಕ್ಸ್ ಕ್ರೀಡಾಕೂಟ ಆತಿಥ್ಯಕ್ಕೆ ಭಾರತ ಆಸಕ್ತಿ

    ನವದೆಹಲಿ: ಇತ್ತೀಚೆಗೆ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅಮೋಘ ನಿರ್ವಹಣೆ ತೋರಿದ ಭಾರತ ಇದೀಗ 2036 ಅಥವಾ 2040ರ ಒಲಿಂಪಿಕ್ಸ್ ಆತಿಥ್ಯಕ್ಕೆ ಆಸಕ್ತಿ ತೋರಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಅಧ್ಯಕ್ಷ ಥಾಮಸ್ ಬಾಚ್ ಈ ವಿಷಯವನ್ನು ಮಂಗಳವಾರ ಬಹಿರಂಗಪಡಿಸಿದ್ದಾರೆ. ಐಒಸಿ ಇತ್ತೀಚೆಗಷ್ಟೇ 2032ರ ಒಲಿಂಪಿಕ್ಸ್ ಆತಿಥ್ಯವನ್ನು ಆಸ್ಟ್ರೇಲಿಯಾದ ಬ್ರಿಸ್ಬೇನ್ ನಗರಕ್ಕೆ ವಹಿಸಿತ್ತು.

    2036, 2040 ಮತ್ತು ಅನಂತರದ ಒಲಿಂಪಿಕ್ಸ್ ಕ್ರೀಡಾಕೂಟಗಳ ಆತಿಥ್ಯಕ್ಕೆ ಭಾರತದ ಜತೆಗೆ ಇಂಡೋನೇಷ್ಯಾ, ಜರ್ಮನಿ, ಕತಾರ್ ದೇಶಗಳು ಕೂಡ ಆಸಕ್ತಿ ತೋರಿವೆ ಎಂದು ಥಾಮಸ್ ಬಾಚ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಒಲಿಂಪಿಕ್ಸ್ ಆತಿಥ್ಯಕ್ಕೆ ಭಾರತ ಆಸಕ್ತಿ ತೋರಿರುವುದನ್ನು ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಕಾರ್ಯದರ್ಶಿ ರಾಜೀವ್ ಮೆಹ್ತಾ ಖಚಿತಪಡಿಸಿದ್ದಾರೆ.

    ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್‌ಗೆ ಸಡಗರದ ಚಾಲನೆ, ಭಾರತ ತಂಡವನ್ನು ಮುನ್ನಡೆಸಿದ ತೆಕ್ ಚಂದ್

    ಟೋಕಿಯೊ ಒಲಿಂಪಿಕ್ಸ್‌ಗೆ ಮುನ್ನ ಐಒಸಿ ಆಯೋಗದ ಜತೆಗೆ ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ 2036 ಮತ್ತು 2040ರ ಒಲಿಂಪಿಕ್ಸ್ ಆತಿಥ್ಯದ ಬಗ್ಗೆ ಐಒಎ ಆಸಕ್ತಿ ವ್ಯಕ್ತಪಡಿಸಿತ್ತು ಎಂದು ಮೆಹ್ತಾ ತಿಳಿಸಿದ್ದಾರೆ.

    ಭಾರತದ 100ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ಸಲುವಾಗಿ 2048ರ ಒಲಿಂಪಿಕ್ಸ್ ಆತಿಥ್ಯಕ್ಕೆ ಬಿಡ್ ಸಲ್ಲಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ದೆಹಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಕಳೆದ ಮಾರ್ಚ್‌ನಲ್ಲಿ ಹೇಳಿಕೆ ನೀಡಿದ್ದರು. ಮತ್ತೊಂದೆಡೆ ಗುಜರಾತ್‌ನ ಅಹಮದಾಬಾದ್‌ನಲ್ಲೂ ಒಲಿಂಪಿಕ್ಸ್ ಆತಿಥ್ಯಕ್ಕೆ ಸಜ್ಜಾಗುವ ರೀತಿಯಲ್ಲಿ ವಿವಿಧ ಕ್ರೀಡಾಂಗಣಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಆಂಧ್ರ ಪ್ರದೇಶದ ಹೊಸ ರಾಜಧಾನಿ ಅಮರಾವತಿಯಲ್ಲಿ ಒಲಿಂಪಿಕ್ಸ್ ಆಯೋಜಿಸುವ ವ್ಯವಸ್ಥೆಗಳನ್ನು ನಿರ್ಮಿಸಬಹುದು ಎಂದು ಚಂದ್ರಬಾಬು ನಾಯ್ಡು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಹೇಳಿದ್ದರು.

    ಟೀಮ್ ಇಂಡಿಯಾ ವೇಗಿ ಸಿರಾಜ್‌ಗೆ ಬೋಲ್ಡಾದ ಪಾಕ್ ಟಿವಿ ನಿರೂಪಕಿ!

    ಚಿನ್ನದ ಹುಡುಗ ನೀರಜ್ ಚೋಪ್ರಾ ಈಗ ಇಡೀ ಜಗತ್ತಿನ ಕ್ರಶ್ ಎಂದ ಬಾಲಿವುಡ್ ಬೆಡಗಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts