More

    ಲಡಾಖ್​ನಲ್ಲಿ ಬಿಕ್ಕಟ್ಟು ಶಮನಕ್ಕೆ ಚೀನಾದೊಂದಿಗೆ ನೇರ ಸಂಪರ್ಕ

    ನವದೆಹಲಿ: ಲಡಾಖ್​ನಲ್ಲಿನ ವಾಸ್ತವ ಗಡಿರೇಖೆ ಬಳಿ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ಭಾರತ ಪ್ರಯತ್ನಿಸುತ್ತಿದೆ. ಅದು ಚೀನಾ ಮುಖಂಡರೊಂದಿಗೆ ನೇರ ಸಂಪರ್ಕದಲ್ಲಿದೆ ಎಂದು ಸರ್ಕಾರದ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

    ಇದಕ್ಕೂ ಮುನ್ನ ವೈಟ್​ಹೌಸ್​ನಲ್ಲಿ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಚೀನಾದೊಂದಿಗಿನ ಭಾರತದ ಬಿಕ್ಕಟ್ಟು ಶಮನಕ್ಕೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಪುನರುಚ್ಚರಿಸಿದ್ದರು.

    ಆದರೆ, ಈ ವಿಷಯವಾಗಿ ಯಾವುದೇ ರೀತಿಯ ಹಾಗೂ ಯಾರ ಮಧ್ಯಸ್ಥಿಕೆಯನ್ನು ನಿರಾಕರಿಸಿರುವ ಭಾರತ, ಇದೀಗ ಬಿಕ್ಕಟ್ಟ ಶಮನಕ್ಕೆ ನೇರವಾಗಿ ಚೀನಾ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಸ್ಪಷ್ಟಪಡಿಸಿದೆ.

    ಇದನ್ನೂ ಓದಿ: ಭಾರತದ ಮೇಲೆ ದಾಳಿಗೆ ಯುದ್ಧೋಪಕರಣಗಳೊಂದಿಗೆ ಸಜ್ಜಾಗಿದೆ ಚೀನಾ

    ಭಾರತ ಮತ್ತು ಚೀನಾ ನಡುವೆ ಲಡಾಖ್​ ಪ್ರದೇಶದ ವಾಸ್ತವ ಗಡಿರೇಖೆ ಬಳಿ ತೀವ್ರ ಬಿಕ್ಕಟ್ಟು ಏರ್ಪಟ್ಟಿದ್ದು, ಚೀನಾ ಗಡಿಭಾಗಕ್ಕೆ 6 ಸಾವಿರ ಯೋಧರನ್ನು ರವಾನಿಸಿ ಯುದ್ಧಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ. ಸಾಕಷ್ಟು ಪ್ರಮಾಣದ ಯುದ್ಧೋಪಕರಣಗಳನ್ನು ಕೂಡ ಗಡಿ ಭಾಗದಲ್ಲಿ ಸಂಗ್ರಹಿಸಿದೆ ಎಂದು ಹೇಳಲಾಗುತ್ತಿದೆ.

    ಭಾರತ ಕೂಡ ಇದಕ್ಕೆ ಸರಿಸಮಾನವಾಗಿ ಗಡಿ ಭಾಗದಲ್ಲಿ ಯೋಧರನ್ನು ಜಮಾವಣೆ ಮಾಡಿದ್ದು, ಯುದ್ಧೋಪಕರಣಗಳು ಮತ್ತು ಇತರೆ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಂಡಿದೆ ಎನ್ನಲಾಗಿದೆ.

    ದೌಲತಾ ಬೇಗ್​ ಓಲ್ಡಿ ಬಳಿ ಭಾರತ ಸೇತುವೆಯನ್ನು ನಿರ್ಮಿಸುತ್ತಿದ್ದು, ಇದು ಕರಕರಂ ಪಾಸ್​ನಲ್ಲಿರುವ ಗಡಿ ಭಾಗದ ಕೊನೆಯ ಠಾಣೆಗೆ ಸುಲಭವಾಗಿ ಸಂಪರ್ಕ ಒದಗಿಸುತ್ತದೆ ಎನ್ನಲಾಗಿದೆ. ಇದರಿಂದಾಗಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟ ಸಂದರ್ಭದಲ್ಲಿ ಗಡಿಠಾಣೆಗೆ ತ್ವರಿತವಾಗಿ ಯೋಧರು ಹಾಗೂ ಯುದ್ಧೋಪಕರಣಗಳನ್ನು ಸಾಗಿಸಲು ಅನುಕೂಲವಾಗುತ್ತದೆ ಎಂದು ಹೇಳಲಾಗುತ್ತಿದೆ. ಇದರಿಂದ ಆತಂಕಗೊಂಡಿರುವ ಚೀನಾ ಈ ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿ, ಗಡಿಯಲ್ಲಿ ಸೇನೆಯನ್ನು ಜಮಾವಣೆ ಮಾಡಿದೆ.

    75 ದಿನಗಳ ಹಸುಗೂಸಿನ ಮೇಲೆ ಅತ್ಯಾಚಾರ ಎಸಗಿದ ಪಿಶಾಚಿ ಅಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts