More

    ಭಾರತದಲ್ಲಿ ಸಿಗುವಷ್ಟು ರಕ್ಷೆ ಮುಸ್ಲಿಮರಿಗೆ ಇನ್ನೆಲ್ಲಿ ಸಿಗಲು ಸಾಧ್ಯ ಎಂದ ನಖ್ವಿ: ಓಐಸಿ ಮಾತಿಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ

    ನವದೆಹಲಿ: ಭಾರತದ ನೆಲದಲ್ಲಿ ಮುಸ್ಲಿಮರು ಅನುಭವಿಸುತ್ತಿರುವಷ್ಟು ಸುರಕ್ಷಿತ ಭಾವವನ್ನು ಇನ್ಯಾವ ನೆಲದಲ್ಲಿಯೂ ಅನುಭವಿಸಲು ಸಾಧ್ಯವೇ ಇಲ್ಲ. ಆದ್ದರಿಂದಲೇ ಭಾರತವು ಮುಸ್ಲಿಂ ಸಮುದಾಯಕ್ಕೆ ಸ್ವರ್ಗವಿದ್ದಂತೆ ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

    ಭಾರತದಲ್ಲಿ ಕೊರೊನಾ ವೈರಸ್ ಹಾವಳಿಯನ್ನು ಮುಸ್ಲಿಮರ ತಲೆಗೆ ಕಟ್ಟುವ ಪ್ರಯತ್ನ ನಡೆಯುತ್ತಿದ್ದು, ಇದನ್ನೂ ಕೂಡಲೇ ತಡೆಗಟ್ಟಬೇಕು ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ (ಓಐಸಿ) ಆಗ್ರಹಿಸಿದ್ದಕ್ಕೆ ಉತ್ತರವಾಗಿ ನಖ್ವಿ ಈ ಮಾತನ್ನು ಹೇಳಿದ್ದಾರೆ.

    ಧಾರ್ಮಿಕವಾಗಿ ಹಾಗೂ ಆರ್ಥಿಕವಾಗಿ ಎರಡೂ ವಿಷಯಗಳಿಗೂ ಮುಸ್ಲಿಂ ಸಮಯದಾಯಕ್ಕೆ ಭಾರತ ಅತ್ಯಂತ ಸುರಕ್ಷಿತ ನೆಲೆಯಾಗಿದೆ. ಈ ಹಕ್ಕುಗಳು ಅವರಿಗೆ ಸಿಗುತ್ತಿವೆ. ಇದನ್ನು ಭಾರತ ಈಗಾಗಲೇ ಸಾಬೀತು ಕೂಡ ಮಾಡಿದೆ. ಪರಿಸ್ಥಿತಿ ಹೀಗಿರುವಾಗಲೂ ಇದಕ್ಕೆ ವ್ಯತಿರಿಕ್ತವಾಗಿ ಮುಸ್ಲಿಮರ ತಲೆಯಲ್ಲಿ ಇಲ್ಲಸಲ್ಲದ್ದನ್ನು ತುಂಬುವ ಪ್ರಯತ್ನವಾಗಲೀ, ಬಹುಸಂಖ್ಯಾತರ ಬಗ್ಗೆ ಮುಸ್ಲಿಮರಲ್ಲಿ ಕೆಟ್ಟ ಭಾವನೆ ಬಿತ್ತುವ ಕೆಲಸವಾಗಲೀ ಮಾಡುವುದು ತರವಲ್ಲ ಎಂದಿದ್ದಾರೆ ನಖ್ವಿ.

    ಭಾರತದಲ್ಲಿ ಇಸ್ಲಾಮೋಫೋಬಿಯಾ (ಅರ್ಥಾತ್‌ ಇಸ್ಲಾಂ ಕುರಿತ ಭಯ) ಆವರಿಸಿದೆ ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ ಹೇಳಿಕೆ ನೀಡಿತ್ತು. ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಸಚಿವ ನಖ್ವಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾರಣಾಂತಿಕ ಕರೊನಾ ವೈರಸ್‌ ತೊಲಗಿಸುವ ಕಾರ್ಯದಲ್ಲಿ ತೊಡಗಿದೆಯೇ ವಿನಾ ಜಾತಿ-ಧರ್ಮದ ಕೆಸರೆರಚಾಟದಲ್ಲಿ ಮುಳುಗಿಲ್ಲ. ಹಿಂದೂ-ಮುಸ್ಲಿಮರ ನಡುವೆ ದ್ವೇಷ ಹುಟ್ಟಿಸುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ. ಇಂಥ ಹೇಳಿಕೆ ನೀಡುವ ಮೂಲಕ ಕೋಮು ದ್ವೇಷದ ಜ್ವಾಲೆ ಬಿತ್ತುತ್ತಿದ್ದಾರೆ. ಭಿನ್ನತೆಯ ಮಾತನಾಡುವವರು ಭಾರತೀಯ ಮುಸ್ಲಿಮರ ಗೆಳೆಯರಾಗಲು ಸಾಧ್ಯವೇ ಇಲ್ಲ ಎಂದಿರುವ ನಖ್ವಿ, ಈ ರೀತ ದ್ವೇಷದ ಬೀಜ ಬಿತ್ತುವ ಪ್ರಯತ್ನ ಎಂದಿಗೂ ಕೈಗೂಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ. (ಏಜೆನ್ಸೀಸ್‌)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts