More

    ಕರೊನಾ ಲಸಿಕೆ : ಅತಿ ವೇಗದಲ್ಲಿ 10 ಕೋಟಿ ಡೋಸ್​ ನೀಡಿರುವ ಭಾರತ !

    ನವದೆಹಲಿ : ದೇಶದಲ್ಲಿ ಅತಿದೊಡ್ಡ ಲಸಿಕಾ ಕಾರ್ಯಕ್ರಮವಾಗಿ ಆರಂಭವಾದ ಕರೊನಾ ಲಸಿಕಾ ಅಭಿಯಾನದಲ್ಲಿ ಈವರೆಗೆ 10 ಕೋಟಿಗೂ ಹೆಚ್ಚು ಡೋಸ್​ಗಳನ್ನು ನೀಡಲಾಗಿದೆ. ಈ ರೀತಿಯಾಗಿ 10 ಕೋಟಿ ಡೋಸ್​ಗಳನ್ನು ಅತ್ಯಂತ ವೇಗದಲ್ಲಿ ನೀಡಿದ ದೇಶ ನಮ್ಮದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

    ಭಾರತ 85 ದಿನಗಳಲ್ಲಿ 100 ಮಿಲಿಯನ್ ಡೋಸ್​ ಮಟ್ಟ ತಲುಪಿದರೆ, ಅಮೆರಿಕ ಮತ್ತು ಚೀನಾ ಇದೇ ಸಂಖ್ಯೆಯನ್ನು ಪೂರೈಸಲು ಕ್ರಮವಾಗಿ 89 ಮತ್ತು 102 ದಿನಗಳನ್ನು ತೆಗೆದುಕೊಂಡಿದ್ದವು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಬಗ್ಗೆ ಪ್ರಧಾನ ಮಂತ್ರಿಗಳ ಕಾರ್ಯಾಲಯವೂ ಮಾಹಿತಿ ನೀಡಿ ‘ಕರೊನಾ ಮುಕ್ತ ಆರೋಗ್ಯವಂತ ಭಾರತದತ್ತ ಹೆಜ್ಜೆ’ ಎಂದು ಟ್ವೀಟ್ ಮಾಡಿದೆ.

    ಇದನ್ನೂ ಓದಿ: ‘ಮಾದರಿ ನೀತಿ ಸಂಹಿತೆ ಅಲ್ಲ, ಮೋದಿ ನೀತಿ ಸಂಹಿತೆ’ ಎಂದು ಚುನಾವಣಾ ಆಯೋಗವನ್ನು ಲೇವಡಿ ಮಾಡಿದ ದೀದಿ

    ಜಾಗತಿಕವಾಗಿ ನೀಡಲಾಗುತ್ತಿರುವ ಲಸಿಕೆಯ ದೈನಂದಿನ ಡೋಸ್​ಗಳ ಸಂಖ್ಯೆಯನ್ನು ಗಮನಿಸಿದರೆ, ಭಾರತವು ದಿನಕ್ಕೆ ಸರಾಸರಿ 38,93,288 ಡೋಸ್‌ಗಳನ್ನು ನೀಡುವುದರೊಂದಿಗೆ ಅಗ್ರಸ್ಥಾನದಲ್ಲಿದೆ. ಏಪ್ರಿಲ್ 10 ರ ಸಂಜೆ 7.30 ಕ್ಕೆ ಬಂದ ತಾತ್ಕಾಲಿಕ ವರದಿಯ ಪ್ರಕಾರ ದೇಶದಲ್ಲಿ ನೀಡಲಾಗಿರುವ ಕರೊನಾ ಲಸಿಕೆ ಡೋಸ್​​ಗಳ ಒಟ್ಟು ಸಂಖ್ಯೆ 10,12,84,282 ಆಗಿದೆ ಎಂದು ಸಚಿವಾಲಯ ತಿಳಿಸಿದೆ.

    ದೇಶದಲ್ಲಿ ಈವರೆಗೆ ನೀಡಲಾಗಿರುವ ಡೋಸ್​​ಗಳಲ್ಲಿ ಶೇ. 60.62 ರಷ್ಟನ್ನು ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಮಧ್ಯಪ್ರದೇಶ ಮತ್ತು ಕೇರಳ – ಈ ಎಂಟು ರಾಜ್ಯಗಳಲ್ಲಿ ನೀಡಲಾಗಿದೆ ಎನ್ನಲಾಗಿದೆ. (ಏಜೆನ್ಸೀಸ್)

    ಕರೊನಾ : ಸಕ್ರಿಯ ಪ್ರಕರಣಗಳಲ್ಲಿ ಇವು ಟಾಪ್​ ಟೆನ್ ಜಿಲ್ಲೆಗಳು

    ಭಾರತದಲ್ಲಿ ಇಂದಿನಿಂದ ನಾಲ್ಕು ದಿನ ‘ಲಸಿಕೆ ಉತ್ಸವ’

    ಶೇ. 99.3 ರಷ್ಟು ಮರ ಕಡಿಯುವ ಅರ್ಜಿಗಳಿಗೆ ಹಸಿರು ನಿಶಾನೆ; ಇದು ಗೋವಾದ ವೃಕ್ಷ ಪ್ರಾಧಿಕಾರಗಳ ಕಾರ್ಯವೈಖರಿ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts