More

    ಅಂಡರ್-19 ಟಿ20 ವಿಶ್ವಕಪ್​ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತ; ಇದೇ ಮೊದಲ ಸಲ ಕಪ್​ ಗೆದ್ದ ವನಿತೆಯರ ತಂಡ

    ನವದೆಹಲಿ: ಅಂಡರ್​ 19 ಟಿ20 ವಿಶ್ವಕಪ್​ ಕ್ರಿಕೆಟ್​ನಲ್ಲಿ ಭಾರತೀಯ ಮಹಿಳೆಯರ ತಂಡ ಇದೇ ಪ್ರಥಮ ಬಾರಿಗೆ ಕಪ್​ ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ಭಾರತ ಮತ್ತು ಇಂಗ್ಲೆಂಡ್​ ನಡುವೆ ದಕ್ಷಿಣ ಆಫ್ರಿಕದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ತಂಡ ಜಯ ಗಳಿಸಿದೆ.

    ಇಂಗ್ಲೆಂಡ್‌ ವಿರುದ್ಧದ ಅಂತಿಮ ಹಣಾಹಣಿಯಲ್ಲಿ ಶಫಾಲಿ ವರ್ಮಾ ನೇತೃತ್ವದ ಭಾರತೀಯ ಆಟಗಾತಿಯರು 7 ವಿಕೆಟ್‌ಗಳ ಅಂತರದಿಂದ ಗೆದ್ದು ವಿಶ್ವಕಪ್‌ ತಮ್ಮದಾಗಿಸಿಕೊಂಡಿದ್ದಾರೆ. ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ 17.1 ಓವರ್‌ಗಳಲ್ಲಿ ಎಲ್ಲ ವಿಕೆಟ್​ಗಳನ್ನು ಕಳೆದುಕೊಂಡು ಕೇವಲ 68 ರನ್‌ ಗಳಿಸಿತ್ತು. ಭಾರತೀಯ ಆಟಗಾತಿಯರು 14 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 69 ರನ್‌ ಗಳಿಸಿ ಜಯಭೇರಿ ಬಾರಿಸಿದರು.

    ಆರಂಭಿಕ ಆಟಗಾರರಾಗಿ ಶಫಾಲಿ ವರ್ಮಾ ಮತ್ತು ಶ್ವೇತಾ ಸೆಹ್ರಾವತ್ ಬೇಗ ಔಟಾದರೂ, ಬಳಿಕ ಜೊತೆಯಾಗಿ ಆಡಿದ ಸೌಮ್ಯ ತಿವಾರಿ ಮತ್ತು ಗೊಂಗಡಿ ತ್ರಿಷಾ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಭಾರತ ಪರ ಟಿಟಾಸ್ ಸಾಧು, ಅರ್ಚನಾ ದೇವಿ ಮತ್ತು ಪಾರ್ಶವಿ ಚೋಪ್ರಾ ತಲಾ 2 ವಿಕೆಟ್‌ ಪಡೆದು ಮಿಂಚಿದರೆ, ಮನ್ನತ್ ಕಶ್ಯಪ್, ಶಫಾಲಿ ಮತ್ತು ಸೋನಮ್ ಯಾದವ್ ತಲಾ 1 ವಿಕೆಟ್ ಗಳಿಸಿದರು.

    ತಲೆ ಮೇಲೇ ಆಕ್ಸಿಜನ್ ಸಿಲಿಂಡರ್ ಬಿದ್ದು ಸಾವಿಗೀಡಾದ 9 ವರ್ಷದ ಬಾಲಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts