More

    ಕೆನಡಾ ನಡೆ ಕುರಿತು ಅಮೆರಿಕಾಗೆ ಮನವರಿಕೆ – ಕಳವಳ ವ್ಯಕ್ತಪಡಿಸಿದ ಭಾರತ

    ನವದೆಹಲಿ: ಕೆನಡಾದಲ್ಲಿ ಖಲಿಸ್ತಾನ್ ಪರ ಚಟುವಟಿಕೆಗಳು ಹೆಚ್ಚುತ್ತಿರುವ ಬಗ್ಗೆ ಭಾರತವು ಶುಕ್ರವಾರ ಅಮೆರಿಕಾಗೆ ತನ್ನ ತೀವ್ರ ಕಳವಳವನ್ನು ತಿಳಿಸಿದೆ. ’22’ ವಿದೇಶಾಂಗ ಮತ್ತು ರಕ್ಷಣಾ ಸಚಿವರ ಸಭೆಯಲ್ಲಿ ಭಾರತವು ಕೆನಡಾ ನಡೆ ಕುರಿತು ಅಸಮಾದಾನ ಮತ್ತು ತನ್ನ ನಿಲುವು ಸ್ಪಷ್ಟಪಡಿಸಿತು.

    ಇದನ್ನೂ ಓದಿ: ಪೆಟ್ರೋಲ್-ಡೀಸೆಲ್ ಜಿಎಸ್​ಟಿ ವ್ಯಾಪ್ತಿಗೆ ತರಲು ಒಲವು ತೋರಿ ‘ಕೈ’ ಟಾರ್ಗೆಟ್​ ಮಾಡಿದ ನಿರ್ಮಲಾ ಸೀತಾರಾಮನ್​?

    “ನಾವು ನಮ್ಮ ಕಳವಳಗಳನ್ನು ಬಹಳ ಸ್ಪಷ್ಟವಾಗಿ ಹೇಳಿದ್ದೇವೆ” ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
    ’22’ ಸಚಿವರ ಸಂವಾದ ಮಾತುಕತೆಯಲ್ಲಿ ಅಮೆರಿಕದ ನಿಯೋಗದ ನೇತೃತ್ವವನ್ನು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮತ್ತು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ವಹಿಸಿದ್ದರೆ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತವನ್ನು ಮುನ್ನಡೆಸಿದರು.

    “ನಮಗೆ ಪ್ರಮುಖ ಭದ್ರತಾ ಕಾಳಜಿಗಳಿವೆ ಮತ್ತು ಅಂತಹ ವ್ಯಕ್ತಿಯಿಂದ ಹೊರಹೊಮ್ಮಿದ ಇತ್ತೀಚಿನ ವೀಡಿಯೊದ ಬಗ್ಗೆ ನಿಮಗೆ ತಿಳಿದಿದೆ ಎಂದು ನನಗೆ ಖಾತ್ರಿಯಿದೆ” ಎಂದು ಮನವರಿಕೆ ಮಾಡಿದ್ದು, ಅಮೆರಿಕಾ ಕಡೆಯವರು ನವದೆಹಲಿಯ ಕಳವಳವನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಕ್ವಾತ್ರಾ ಹೇಳಿದರು.

    ಕೆನಡಾದ ಸರ್ರೆ ಪಟ್ಟಣದಲ್ಲಿ ಜೂನ್‌ನಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಗ್ಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸೆಪ್ಟೆಂಬರ್‌ನಲ್ಲಿ ಆರೋಪಿಸಿದ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ತೀವ್ರ ಹದಗೆಟ್ಟಿದ್ದು, ಭಾರತವು ಕೆನಡಾದ ನಾಗರಿಕರಿಗೆ ವೀಸಾಗಳನ್ನು ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. ಕೆನಡಾ ಕ್ರಮಕ್ಕೆ ಪ್ರತಿರೋಧವಾಗಿ ದೇಶದಲ್ಲಿ ತನ್ನ ರಾಜತಾಂತ್ರಿಕ ಉಪಸ್ಥಿತಿಯನ್ನು ಕಡಿಮೆ ಮಾಡಲು ಒಟ್ಟಾವಾವನ್ನು ಕೇಳಿಕೊಂಡಿತು. ಕೆನಡಾ ಈಗಾಗಲೇ 41 ರಾಜತಾಂತ್ರಿಕರು ಮತ್ತು ಅವರ ಕುಟುಂಬ ಸದಸ್ಯರನ್ನು ಭಾರತದಿಂದ ಹಿಂಪಡೆದಿದೆ. ಸಂಬಂಧ ಸುಧಾರಣೆಗೆ ಭಾರತವು ಕೆಲವು ವೀಸಾ ಸೇವೆಗಳನ್ನು ಪುನರಾರಂಭಿಸಿದೆ.

    ಇಪಿಎಫ್​ಒ​ ದೀಪಾವಳಿ ಗಿಫ್ಟ್​: ನೌಕರರ ಖಾತೆಗಳಿಗೆ ಜಮೆಯಾದ ಬಡ್ಡಿ ಎಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts