More

    ಭಾರತ-ಚೀನಾ ಬಿಕ್ಕಟ್ಟು ಶಮನಕ್ಕೆ ಸಹಾಯ ಮಾಡಲು ಮುಂದಾದ ಟ್ರಂಪ್

    ನವದೆಹಲಿ: ಭಾರತ-ಚೀನಾ ಗಡಿ ವಿವಾದ ಲಡಾಖ್​​ನಲ್ಲಿ ಶುರುವಾದಾಗ ಎರಡೂ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸಲು ಅಮೆರಿಕ ಸಿದ್ಧವಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೇಳಿದ್ದರು.

    ಸದ್ಯ ಪೂರ್ವ ಲಡಾಖ್​ನ ಗಲ್ವಾರ್​ ಕಣಿವೆ ಬಳಿ ಎರಡೂ ದೇಶಗಳ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟಿದೆ. ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಚೀನಾದ ಸೈನಿಕರು ಸಾವನ್ನಪ್ಪಿದ್ದರೂ, ಸಂಖ್ಯೆಯನ್ನು ಇನ್ನೂ ಆ ದೇಶ ತಿಳಿಸಿಲ್ಲ.

    ಎರಡೂ ದೇಶಗಳಿಂದ ಹೇಳಿಕೆ..ಪ್ರತಿ ಹೇಳಿಕೆಗಳು ಹೊರಬರುತ್ತಿವೆ. ಹೀಗಿರುವಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಮತ್ತೊಮ್ಮೆ ಚೀನಾ, ಭಾರತ ಸಂಘರ್ಷದ ಬಗ್ಗೆ ಮಾತನಾಡಿದ್ದಾರೆ.

    ಇದೊಂದು ಕಠಿಣ ಪರಿಸ್ಥಿತಿ. ನಾವು ಭಾರತ ಮತ್ತು ಚೀನಾಗಳೊಂದಿಗೆ ಈ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಶನಿವಾರ ವೈಟ್​ಹೌಸ್​​ನಲ್ಲಿ ಮಾಧ್ಯಮಗಳಿಗೆ ಹೇಳಿದ್ದಾರೆ. ಇದನ್ನೂ ಓದಿ: ಸಚಿವೆಗೆ ‘ಕೋವಿಡ್​ ರಾಣಿ’ ಎಂದರೆ ತಪ್ಪೇನಿದೆ- ಕಾಂಗ್ರೆಸ್​ ಮುಖಂಡನ ಪ್ರಶ್ನೆ!

    ಅವರು ಹೊಡೆದಾಟಕ್ಕೆ ಇಳಿದಿದ್ದಾರೆ. ಮುಂದೆ ಏನಾಗುತ್ತದೆ ನೋಡಬೇಕು. ಎರಡೂ ದೇಶಗಳ ಬಿಕ್ಕಟ್ಟು ಶಮನಕ್ಕೆ ನಾವೂ ಅವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

    ಚೀನಾದ ಪೀಪಲ್ಸ್​ ಲಿಬರೇಶನ್​ ಆರ್ಮಿ ಭಾರತದೊಂದಿಗೆ ಗಡಿಗೆ ಸಂಬಂಧಪಟ್ಟ ಉದ್ವಿಘ್ನತೆಯನ್ನು ಹೆಚ್ಚಿಸುತ್ತಿದೆ. ದಕ್ಷಿಣ ಚೀನಾ ಸಮುದ್ರವನ್ನು ಮಿಲಿಟರೀಕರಣ ಮಾಡುತ್ತಿದೆ. ಅಲ್ಲಿನ ಹೆಚ್ಚೆಚ್ಚು ಭೂಪ್ರದೇಶಗಳು ತನ್ನದೇ ಎಂದು ಕಾನೂನು ಬಾಹಿರವಾಗಿ ಪ್ರತಿಪಾದಿಸುತ್ತಿದೆ ಎಂದು ಯುಎಸ್​ ನ ರಾಜ್ಯ ಕಾರ್ಯದರ್ಶಿ ಮೈಕ್​ ಪೊಂಪಿಯೋ ಕಳೆದೆರಡು ದಿನಗಳ ಹಿಂದೆ ಹೇಳಿದ್ದರು.(ಏಜೆನ್ಸೀಸ್​) ಇದನ್ನೂ ಓದಿ:  VIDEOS | ಕಣ್ಣಾಲಿ ಒದ್ದೆಯಾಗುತ್ತದೆ.. ಸುಶಾಂತ್​ ಸಿಂಗ್​ ಸಾಕು ನಾಯಿ ಸ್ಥಿತಿ ನೋಡಿದರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts