More

    ಯುಎನ್​ಎಸ್​ಸಿಯಲ್ಲಿ ಜಮ್ಮು-ಕಾಶ್ಮೀರದ ವಿಚಾರ ಔಟ್​ಡೇಟ್​

    ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಸಭೆಯ ಭಾರತ-ಪಾಕಿಸ್ತಾನದ ಕಾರ್ಯಸೂಚಿಯಲ್ಲಿ ಇನ್ನು ಜಮ್ಮು-ಕಾಶ್ಮೀರದ ವಿಚಾರ ಮುಂದುವರಿಸಬೇಕಾದ್ದಿಲ್ಲ. ಅದು ಈಗ ಔಟ್​ಡೇಟ್​ ಆಗಿದೆ. ಅಂತಹ ತರ್ಕಬಾಹಿರ ವಿಷಯಗಳು ಘನತೆವೆತ್ತ ಜಗತ್ತಿಗೆ ಅವಶ್ಯಕತೆ ಇಲ್ಲ. ಅದು ದ್ವಿಪಕ್ಷೀಯ ವಿಚಾರವಾಗಿದೆ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಪ್ರತಿಪಾದಿಸಿದೆ.

    ಸೆಕ್ಯುರಿಟಿ ಕೌನ್ಸಿಲ್​ನ ವಾರ್ಷಿಕ ವರದಿಗಾಗಿ ಇರುವ ಯೋಜನೆ ರೂಪಿಸುವ ವರ್ಚುವಲ್ ಸಭೆಯಲ್ಲಿ ಪಾಕಿಸ್ತಾನದ ಯುಎನ್​ ಪ್ರತಿನಿಧಿ ಮುನೀರ್ ಅಕ್ರಮ್​ ಸಭೆಯಲ್ಲಿ ಜಮ್ಮು-ಕಾಶ್ಮೀರದ ವಿಚಾರವನ್ನು ಪ್ರಸ್ತಾಪಿಸಿದ್ದರು. ಅಲ್ಲದೆ, ಈ ವಿಚಾರ ಮೂರು ಸಲ ಪ್ರಸ್ತಾಪವಾದರೂ ಕೌನ್ಸಿಲ್ ತನ್ನ ನಿರ್ಧಾರಗಳನ್ನು ಅನುಷ್ಠಾನಗೊಳಿಸುತ್ತಿಲ್ಲ ಎಂದು ಆಪಾದನೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ, ಭಾರತದ ಪ್ರತಿನಿಧಿ ನೀಡಿದ ಪ್ರತಿಕ್ರಿಯೆ ತೀಕ್ಷ್ಣವಾಗಿತ್ತು.

    ಇದನ್ನೂ ಓದಿ: ವೇತನ ಪಡೆಯುತ್ತಿಲ್ಲ ರಾಜ್ಯಸಭಾ ಸದಸ್ಯ ಮಾಜಿ ಸಿಜೆಐ ರಂಜನ್ ಗೊಗೋಯ್​ !

    ಪಾಕಿಸ್ತಾನದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಭಾರತ, ಅಂತಾರಾಷ್ಟ್ರೀಯ ಶಾಂತಿಗೆ ತಾವೂ ಕೊಡುಗೆ ನೀಡುತ್ತಿದ್ದೇವೆ ಎನ್ನುತ್ತ ತಮ್ಮನ್ನು ರೀಬ್ರ್ಯಾಂಡ್ ಮಾಡಿಕೊಳ್ಳುವ ಪ್ರಯತ್ನವನ್ನು ಕೆಲವು ರಾಷ್ಟ್ರಗಳು ಮಾಡುತ್ತಲೇ ಇವೆ. ದುರದೃಷ್ಟ ಎಂದರೆ ಆ ರಾಷ್ಟ್ರಗಳು ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದನೆಯ ಕಾರಂಜಿ ಮತ್ತು ಟೆರರ್​ ಸಿಂಡಿಕೇಟ್​ಗೆ ತವರು ಎಂಬುದು ಜಗತ್ತಿಗೇ ಗೊತ್ತಿದೆ ಎಂಬುದು ಅವುಗಳಿಗೆ ಇನ್ನೂ ಅರ್ಥವಾಗಿಲ್ಲ.

    ಇದನ್ನೂ ಓದಿ: VIDEO: ಯೋಗ ಅಂತಹೇಳಿದ್ರೆ ಕುಸ್ತಿ ಅಲ್ಲ, ದೇಹವನ್ನೆಲ್ಲ ಬಗ್ಗಿಸಿ ಮೇಲೆ ಕೆಳಗೆ ಮಾಡುವುದು ಅದಲ್ಲ!

    ಅಜೆಂಡಾ ಸೇರಿದ್ದು ಹೀಗೆ: ಭಾರತ-ಪಾಕಿಸ್ತಾನ ಕ್ವಶ್ಚನ್ ಎಂಬ ವಿಷಯದೊಂದಿದೆ ಯುಎನ್​ಎಸ್​ಸಿ ಅಜೆಂಡಾಕ್ಕೆ ಜಮ್ಮು-ಕಾಶ್ಮೀರದ ವಿಚಾರ 1948ರ ಜನವರಿ 6ರ ಔಪಚಾರಿಕಸಭೆಯಲ್ಲಿ ಮೊಟ್ಟ ಮೊದಲ ಬಾರಿ ಸೇರಿಸಲ್ಪಟ್ಟಿತ್ತು. ಅಂದು ಪಾಕಿಸ್ತಾನದ ಬೆಂಬಲಕ್ಕೆ ನಿಂತದ್ದು ಅದರ ಸಾರ್ವಕಾಲಿಕ ಮಿತ್ರ ಚೀನಾ. ಅಲ್ಲಿಂದೀಚೆಗೆ ಕೆಲವು ಬಾರಿ ಚರ್ಚಿಸಲ್ಪಟ್ಟ ಈ ವಿಚಾರ 1965ರ ನವೆಂಬರ್ 5ರಂದು ಕೊನೆಯ ಬಾರಿ ಪರಿಗಣಿಸಲ್ಪಟ್ಟಿತ್ತು. ಕಳೆದ ವರ್ಷ ಆಗಸ್ಟ್ 16ರಂದು ಜಮ್ಮು-ಕಾಶ್ಮೀರದ ವಿಚಾರದ ಸಮಾಲೋಚನೆಗಳನ್ನು ಕೌನ್ಸಿಲ್ ಮುಗಿಸಿತ್ತು. ಈ ವರ್ಷ ಜನವರಿಯಲ್ಲಿ ಪಾಕಿಸ್ತಾನದ ಪರವಾಗಿ ಚೀನಾ ಮತ್ತೆ ಕಾಶ್ಮೀರದ ವಿಚಾರವನ್ನು ಇತರೆ ವಿಷಯಗಳ ಅಧೀನ ಪ್ರಸ್ತಾಪಿಸಲು ಮುಂದಾಗಿತ್ತು. ಇದು ಕ್ಲೋಸ್ಡ್​ ಡೋರ್ ಮೀಟಿಂಗ್​ನಲ್ಲಿ ಆಗಿರುವ ವಿಚಾರವಾಗಿದ್ದು ಚೀನಾ ಮಾತ್ರವೇ ಪಾಕಿಸ್ತಾನದ ಪರವಾಗಿ ನಿಂತು ಕಾಶ್ಮೀರದ ವಿಚಾರ ಪ್ರತಿಪಾದನೆ ಮಾಡಿತ್ತು. (ಏಜೆನ್ಸೀಸ್)

    ತವರಿನ ಆಸ್ತಿ ಪಾಲು ಕೇಳೆಂದು ಕಿರುಕುಳ ನೀಡ್ತಿದ್ದಾರೆನ್ನುತ್ತ ಸಾವಿಗೆ ಶರಣಾದ್ಳು- ಪ್ರೇಮವಿವಾಹದ ದುರಂತಕಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts