More

    ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಇಂದು ಯಾರ ಮೇಲಿದೆ ಪದಕ ನಿರೀಕ್ಷೆ?

    ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಮೊದಲ ದಿನವೇ ಪದಕದ ಖಾತೆ ತೆರೆದ ಬಳಿಕ ಸತತ 5 ದಿನ ನಿರಾಸೆ ಅನುಭವಿಸಿರುವ ಭಾರತಕ್ಕೆ 7ನೇ ದಿನವಾದ ಶುಕ್ರವಾರ ಪದಕ ಒಲಿದು ಬರುವ ನಿರೀಕ್ಷೆಗಳಿವೆ. ಮಹಿಳಾ ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೋರ್ಗೋಹೈನ್ ಅಂತಿಮ ಎಂಟರ ಘಟ್ಟದಲ್ಲಿ ಸೆಣಸಲಿದ್ದು, ಸೆಮಿಫೈನಲ್‌ಗೇರಿದರೆ ಕನಿಷ್ಠ ಕಂಚಿನ ಪದಕ ಗೆಲುವು ಖಚಿತವಾಗಲಿದೆ. ಶೂಟಿಂಗ್‌ನಲ್ಲಿ ಮನು ಭಾಕರ್ ಮತ್ತು ರಾಹಿ ಸರ್ನೋಬಟ್ ಸ್ಪರ್ಧಿಸಲಿದ್ದು, ಪದಕದ ನಿರೀಕ್ಷೆ ಇದೆ. ಕೂಟದ ಮೊದಲೆರಡು ಸ್ಪರ್ಧೆಗಳಲ್ಲಿ ನಿರಾಸೆ ಮೂಡಿಸಿರುವ ಮನು ಭಾಕರ್ ಈ ಸಲವಾದರೂ ಪದಕ ಗೆಲುವಿನಲ್ಲಿ ಯಶಸ್ವಿಯಾಗುವರೇ ಎಂಬ ಕುತೂಹಲ ಹೆಚ್ಚಾಗಿದೆ. ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಕ್ವಾರ್ಟರ್​ಫೈನಲ್‌ನಲ್ಲಿ ಆಡಲಿದ್ದು, ಪದಕಕ್ಕೆ ಮತ್ತಷ್ಟು ಹತ್ತಿರವಾಗಲಿದ್ದಾರೆ. ಆರ್ಚರಿಯಲ್ಲಿ ದೀಪಿಕಾ ಪದಕದಾಸೆ ಹೆಚ್ಚಿಸಲು ಹೋರಾಡಲಿದ್ದಾರೆ.

    ಇಂದು ಭಾರತದ ಕ್ರೀಡಾಸ್ಪರ್ಧೆಗಳು:

    ಬ್ಯಾಡ್ಮಿಂಟನ್: ಮಧ್ಯಾಹ್ನ 1.15: ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್​ಫೈನಲ್: ಪಿವಿ ಸಿಂಧುಗೆ ಜಪಾನ್‌ನ ಅಕಾನೆ ಯಮಗುಚಿ ಎದುರಾಳಿ.

    *ಶೂಟಿಂಗ್: ಬೆಳಗ್ಗೆ 5.30: ಮಹಿಳೆಯರ 25 ಮೀ. ಪಿಸ್ತೂಲ್ ಅರ್ಹತಾ ಸುತ್ತು: ಮನು ಭಾಕರ್, ರಾಹಿ ಸರ್ನೋಬಟ್ ಸ್ಪರ್ಧೆ; ಬೆಳಗ್ಗೆ 10.30: ಫೈನಲ್ಸ್.

    ಆರ್ಚರಿ: ಬೆಳಗ್ಗೆ 6: ಮಹಿಳೆಯರ ವೈಯಕ್ತಿಕ ವಿಭಾಗ: ದೀಪಿಕಾ ಕುಮಾರಿಗೆ 16ರ ಘಟ್ಟದಲ್ಲಿ ರಷ್ಯಾದ ಸೆನಿಯಾ ಪೆರೋವಾ ಎದುರಾಳಿ.

    ಬಾಕ್ಸಿಂಗ್: ಬೆಳಗ್ಗೆ 8.18: ಮಹಿಳೆಯರ 60 ಕೆಜಿ ವಿಭಾಗ: ಸಿಮ್ರಾನ್‌ಜಿತ್ ಕೌರ್‌ಗೆ 16ರ ಘಟ್ಟದಲ್ಲಿ ಥಾಯ್ಲೆಂಡ್‌ನ ಸೀಸೊಂಡೀ ಎದುರಾಳಿ; *ಬೆಳಗ್ಗೆ 8.48: ಮಹಿಳೆಯರ 69 ಕೆಜಿ ವಿಭಾಗ: ಲವ್ಲಿನಾ ಬೋರ್ಗೋಹೈನ್‌ಗೆ ಕ್ವಾರ್ಟರ್​ಫೈನಲ್‌ನಲ್ಲಿ ಚೀನಾ ತೈಪೆಯ ಚೆನ್ ನೈನ್-ಚಿನ್ ಎದುರಾಳಿ.

    ಹಾಕಿ: ಬೆಳಗ್ಗೆ 8.15: ಮಹಿಳಾ ವಿಭಾಗದ 4ನೇ ಲೀಗ್ ಪಂದ್ಯದಲ್ಲಿ ಐರ್ಲೆಂಡ್ ಎದುರಾಳಿ; ಮಧ್ಯಾಹ್ನ 3: ಪುರುಷರ ವಿಭಾಗದ ಅಂತಿಮ ಲೀಗ್ ಪಂದ್ಯದಲ್ಲಿ ಜಪಾನ್ ಎದುರಾಳಿ.

    ಅಥ್ಲೆಟಿಕ್ಸ್: ಬೆಳಗ್ಗೆ 6.17: ಪುರುಷರ 3000 ಮೀ. ಸ್ಟೀಪಲ್‌ಚೇಸ್ ಹೀಟ್ಸ್: ಅವಿನಾಶ್ ಸಬ್ಲೆ ಕಣಕ್ಕೆ; ಬೆಳಗ್ಗೆ 8.27: ಪುರುಷರ 400 ಮೀ. ಹರ್ಡಲ್ಸ್ ಹೀಟ್ಸ್: ಎಂಪಿ ಜಬಿರ್ ಕಣಕ್ಕೆ; ಬೆಳಗ್ಗೆ 8.45: ಮಹಿಳೆಯರ 100 ಮೀ. ಹೀಟ್ಸ್: ದ್ಯುತಿಚಂದ್ ಕಣಕ್ಕೆ; ಸಂಜೆ 4.42: ಮಿಶ್ರ 4/400 ಮೀ. ರಿಲೇ ಹೀಟ್ಸ್: ಸಾರ್ಥಕ್ ಭಾಂಬ್ರಿ, ಅಲೆಕ್ಸ್ ಆಂಟನಿ, ರೇವತಿ ವೀರಮಣಿ, ಶುಭಾ ವೆಂಕಟೇಶ್ ಒಳಗೊಂಡ ತಂಡ ಕಣಕ್ಕೆ.

    ಈಕ್ವೆಸ್ಟ್ರಿಯನ್: ಬೆಳಗ್ಗೆ 5: ವೈಯಕ್ತಿಕ ವಿಭಾಗ(ಡ್ರೆಸೇಜ್): ವಾದ್ ಮಿರ್ಜಾ ಸ್ಪರ್ಧೆ.

    ಗಾಲ್ಫ್: ಬೆಳಗ್ಗೆ 4: ಪುರುಷರ ವೈಯಕ್ತಿಕ ವಿಭಾಗ ರೌಂಡ್-2: ಅನಿರ್ಬನ್ ಲಹಿರಿ, ಉದಯನ್ ಮಾನೆ ಸ್ಪರ್ಧೆ.

    ಸೈಲಿಂಗ್: ಬೆಳಗ್ಗೆ 8.35: ಮಹಿಳೆಯರ ಲೇಸರ್ ರೇಡಿಯಲ್: 9-10ನೇ ರೇಸ್: ನೇತ್ರಾ ಕುಮಾನನ್ ಸ್ಪರ್ಧೆ; ಬೆಳಗ್ಗೆ 8.35: ಪುರುಷರ 49ಇಆರ್ ವಿಭಾಗ: 7-8-9ನೇ ರೇಸ್: ಕೆಸಿ ಗಣಪತಿ, ವರುಣ್ ಠಕ್ಕರ್ ಸ್ಪರ್ಧೆ; ಬೆಳಗ್ಗೆ 11.05: ಲೇಸರ್ ವಿಭಾಗ: 9-10ನೇ ರೇಸ್: ವಿಷ್ಣು ಸರವಣನ್ ಸ್ಪರ್ಧೆ.

    *ಪದಕ ನಿರ್ಧಾರವಾಗುವ ಸ್ಪರ್ಧೆ.
    *ನೇರಪ್ರಸಾರ: ಸೋನಿ ನೆಟ್‌ವರ್ಕ್, ಡಿಡಿ ಸ್ಪೋರ್ಟ್ಸ್.

    *21: ಕ್ರೀಡಾಸ್ಪರ್ಧೆಯ 7ನೇ ದಿನವಾದ ಶುಕ್ರವಾರ ಒಟ್ಟು 21 ಸ್ವರ್ಣ ಪದಕಗಳು ಪಣಕ್ಕಿವೆ. ಈಜು, ರೋಯಿಂಗ್‌ನಲ್ಲಿ 4, ಸೈಕ್ಲಿಂಗ್, ಜುಡೋದಲ್ಲಿ ತಲಾ 2, ಅಥ್ಲೆಟಿಕ್ಸ್ (ಪುರುಷರ 10 ಸಾವಿರ ಮೀಟರ್), ಬ್ಯಾಡ್ಮಿಂಟನ್, ಆರ್ಚರಿ, ಕನೋಯಿಂಗ್, ಫೆನ್ಸಿಂಗ್, ಜಿಮ್ನಾಸ್ಟಿಕ್ಸ್, ಶೂಟಿಂಗ್, ಟೆನಿಸ್, ಟೇಬಲ್ ಟೆನಿಸ್‌ನಲ್ಲಿ ತಲಾ 1 ಚಿನ್ನದ ಪದಕ ನಿರ್ಧಾರವಾಗಲಿದೆ.

    ಅಪ್ಪನ ಇಚ್ಛೆಗೆ ವಿರುದ್ಧವಾಗಿ ಬಾಕ್ಸಿಂಗ್ ರಿಂಗ್ ಪ್ರವೇಶಿಸಿದ್ದವಳು ಈಗ ಒಲಿಂಪಿಕ್ಸ್ ಪದಕಕ್ಕೆ ಸನಿಹ!

    ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸಣ್ಣಪುಟ್ಟ ದೇಶಗಳಿಗೆ ಚಿನ್ನದ ಸಂಭ್ರಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts