More

    ಇಂದು ಭಾರತ-ವೆಸ್ಟ್ ಇಂಡೀಸ್ ಮೊದಲ ಏಕದಿನ ಹಣಾಹಣಿ

    ಅಹಮದಾಬಾದ್: ನಾಯಕ ರೋಹಿತ್ ಶರ್ಮ ಆಗಮನದಿಂದಾಗಿ ಹೊಸ ಹುರುಪು ಪಡೆದಿರುವ ಭಾರತ ತಂಡ, ಹೊಸ ಯೋಜನೆ, ಹೊಸ ಸವಾಲುಗಳೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದ ತನ್ನ ಸಾವಿರದ ಪಂದ್ಯಕ್ಕೆ ಸಜ್ಜಾಗಿದೆ. ವರ್ಷದ ಮೊದಲ ತಿಂಗಳಲ್ಲೇ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ ಸೋತು, ಏಕದಿನ ಸರಣಿಯಲ್ಲಿ ವೈಟ್‌ವಾಷ್ ಮುಖಭಂಗಕ್ಕೀಡಾಗಿರುವ ಭಾರತ ತಂಡ ಭಾನುವಾರ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಮೂರು ಏಕದಿನ ಪಂದ್ಯಗಳ ಸರಣಿಗೆ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಸಜ್ಜಾಗಿದೆ. ಭಾರತದ ಪಾಲಿನ ಸಾವಿರದ ಪಂದ್ಯವನ್ನು ಅವಿಸ್ಮರಣೀಯವಾಗಿಸಲು ಟೀಮ್ ಇಂಡಿಯಾ ಆಟಗಾರರು ಸಜ್ಜಾಗಿದ್ದಾರೆ.

    ಸಾವಿರ ಏಕದಿನ ಪಂದ್ಯ ಆಡುತ್ತಿರುವ ಸಂಭ್ರಮದ ಜತೆಗೆ ಟೀಮ್ ಇಂಡಿಯಾಗೆ ಕೋವಿಡ್ ಮಾರಿಯೂ ಕಾಡುತ್ತಿದೆ. ಪ್ರಮುಖ ಆಟಗಾರರ ಅಲಭ್ಯತೆಯ ನಡುವೆಯೂ ರೋಹಿತ್ ಶರ್ಮ ಬಳಗಕ್ಕೆ ತಂಡ ಸಂಯೋಜಿಸುವುದು ಕೂಡ ದೊಡ್ಡ ಸವಾಲಾಗಿದೆ. ರೋಹಿತ್ ಶರ್ಮ ಪೂರ್ಣ ಪ್ರಮಾಣದಲ್ಲಿ ಏಕದಿನ ತಂಡದ ನಾಯಕತ್ವ ವಹಿಸಿಕೊಂಡ ಬಳಿಕ ಭಾರತಕ್ಕೆ ಎದುರಾಗಿರುವ ಮೊದಲ ಸರಣಿ ಇದಾಗಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್-ರೋಹಿತ್ ಶರ್ಮ ಜೋಡಿ ತವರಿನಲ್ಲಿ ಶುಭಾರಂಭ ಕಾಣುವ ವಿಶ್ವಾಸದಲ್ಲಿದೆ.

    ಟೀಮ್ ನ್ಯೂಸ್
    ಭಾರತ: ರೋಹಿತ್ ಶರ್ಮ ಜತೆಗೂಡಿ ಇಶಾನ್ ಕಿಶನ್ ಇನಿಂಗ್ಸ್ ಆರಂಭಿಸುವುದು ಖಚಿತವಾಗಿದ್ದು, ಕುಲದೀಪ್ ಯಾದವ್, ಚಾಹಲ್ ಜತೆಯಾಗಲಿದ್ದಾರೆ. ದೀಪಕ್ ಹೂಡಾ ಅಥವಾ ವಾಷ್ಟಿಂಗ್ಟನ್ ಸುಂದರ್ ಇಬ್ಬರಲ್ಲಿ ಒಬ್ಬರು ಕಣಕ್ಕಿಳಿಯಲಿದ್ದಾರೆ. ಕನ್ನಡಿಗ ಪ್ರಸಿದ್ಧ ಕೃಷ್ಣ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ.
    ಸಂಭಾವ್ಯ ತಂಡ: ರೋಹಿತ್ ಶರ್ಮ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೀ), ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ/ವಾಷಿಂಗ್ಟನ್ ಸುಂದರ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಪ್ರಸಿದ್ಧ ಕೃಷ್ಣ.

    ವೆಸ್ಟ್ ಇಂಡೀಸ್:
    ಬ್ರಾಂಡನ್ ಕಿಂಗ್ ಅಥವಾ ಕೃಮಹ ಬೊನ್ನೆರ್ ಇಬ್ಬರ ನಡುವೆ ಪೈಪೋಟಿ ಏರ್ಪಟ್ಟಿದ್ದು, ಮಧ್ಯಮ ಕ್ರಮಾಂಕದ ಬ್ಯಾಟರ್ ಡರೇನ್ ಬ್ರಾವೊ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಎರಡು ವರ್ಷಗಳ ಬಳಿಕ ಕೇಮರ್ ರೋಚ್ ಕಣಕ್ಕಿಳಿಯಲಿದ್ದಾರೆ.
    ಸಂಭಾವ್ಯ ತಂಡ: ಶೈ ಹೋಪ್ (ವಿಕೀ), ಬ್ರಾಂಡನ್ ಕಿಂಗ್/ಕೃಮಹ ಬೊನ್ನೆರ್, ನಿಕೋಲಸ್ ಪೂರನ್, ಶಾಮಹ ಬ್ರೂಕ್ಸ್, ಡರೇನ್ ಬ್ರಾವೊ, ಕೈರಾನ್ ಪೊಲ್ಲಾರ್ಡ್ (ನಾಯಕ), ಓಡೆನ್ ಸ್ಮಿತ್/ರೊಮಾರಿಯೊ ಶೇರ್ಡ್, ಜೇಸನ್ ಹೋಲ್ಡರ್, ಅಕೀಲ್ ಹೊಸೀನ್, ಕೇಮರ್ ರೋಚ್, ಹೇಡೆನ್ ವಾಲ್ಷ್

    * ಪಿಚ್ ರಿಪೋರ್ಟ್: ಕಳೆದ ವರ್ಷ ಇದೇ ವೇಳೆ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯಲ್ಲಿ ರನ್‌ಮಳೆಯೇ ಹರಿದಿತ್ತು. ಬ್ಯಾಟರ್‌ಗಳಿಗೆ ಪಿಚ್ ಹೆಚ್ಚು ಸಹಕಾರಿಯಾಗುವ ಸಾಧ್ಯತೆಗಳಿವೆ. ಪಂದ್ಯಕ್ಕೆ ಇಬ್ಬನಿ ಸಮಸ್ಯೆ ಕಾಡಲಿದ್ದು, ಎರಡನೇ ಸರದಿ ಬ್ಯಾಟಿಂಗ್ ಮಾಡಿದ ತಂಡಕ್ಕೆ ಹೆಚ್ಚು ಅನುಕೂಲವಾಗಲಿದೆ.

    ಮುಖಾಮುಖಿ: 133, ಭಾರತ: 64, ವೆಸ್ಟ್ ಇಂಡೀಸ್: 63, ಟೈ: 2, ರದ್ದು: 4
    ಭಾರತದಲ್ಲಿ: 58, ಭಾರತ: 29, ವೆಸ್ಟ್ ಇಂಡೀಸ್: 28, ರದ್ದು: 1
    ಪಂದ್ಯ ಆರಂಭ: ಮಧ್ಯಾಹ್ನ 1.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts