More

    ಭಾರತ-ಶ್ರೀಲಂಕಾ ಫೈನಲ್ ಟಿ-ಟ್ವೆಂಟಿ: ಟಾಸ್ ಗೆದ್ದ ಧವನ್​ ಪಡೆಯಿಂದ ಬ್ಯಾಟಿಂಗ್ ಆಯ್ಕೆ..

    ಕೊಲೊಂಬೊ: ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ-ಶ್ರೀಲಂಕಾ ಟಿ-ಟ್ವೆಂಟಿ ಸರಣಿಯ ಕೊನೆ ಪಂದ್ಯ ಇಂದು ನಡೆಯಲಿದ್ದು, ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ.
    ಮೂರು ಪಂದ್ಯಗಳ ಟಿ-ಟ್ವೆಂಟಿ ಸರಣಿಯಲ್ಲಿ ಎರಡೂ ತಂಡಗಳು 1-1 ಅಂತರದಿಂದ ಸಮಬಲ ಸಾಧಿಸಿದ್ದು, ಇಂದು ನಡೆಯುವ ಪಂದ್ಯ ನಿರ್ಣಾಯಕವಾಗಲಿದೆ.

    ಇದನ್ನೂ ಓದಿ: ಭಾರತ ಯುವ ಪಡೆಗೆ ಸೋಲು, ಟಿ20 ಸರಣಿ ಸಮಬಲ

    ಬುಧವಾರ ನಡೆದ 2ನೇ ಟಿ-ಟ್ವೆಂಟಿ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ, ನಾಯಕ ಶಿಖರ್ ಧವನ್ (40 ರನ್, 42 ಎಸೆತ, 5 ಬೌಂಡರಿ), ಋತುರಾಜ್ ಗಾಯಕ್ವಾಡ್ (21 ರನ್, 18 ಎಸೆತ, 1 ಬೌಂಡರಿ) ಹಾಗೂ ಕನ್ನಡಿಗ ದೇವದತ್ ಪಡಿಕಲ್ (29 ರನ್, 23 ಎಸೆತ, 1 ಬೌಂಡರಿ, 1 ಸಿಕ್ಸರ್) ಉಪಯುಕ್ತ ದೇಣಿಗೆಯಿಂದ 5 ವಿಕೆಟ್‌ಗೆ 132 ರನ್ ಪೇರಿಸಿತು.

    ಪ್ರತಿಯಾಗಿ ಶ್ರೀಲಂಕಾ ತಂಡ ಧನಂಜಯ ಡಿಸಿಲ್ವ (40*ರನ್, 34 ಎಸೆತ, 1 ಬೌಂಡರಿ, 1 ಸಿಕ್ಸರ್) ಕಡೇ ಹಂತದಲ್ಲಿ ತೋರಿದ ಏಕಾಂಗಿ ಹೋರಾಟದ ಫಲವಾಗಿ 19.4 ಓವರ್‌ಗಳಲ್ಲಿ 6 ವಿಕೆಟ್‌ಗೆ 133 ರನ್‌ಗಳಿಸಿ ಜಯದ ನಗೆ ಬೀರಿತು.

    ರೌಂಡ್​ ಆಫ್​ 16ನಿಂದ ಹೊರಬಿದ್ದ ಮೇರಿ ಕೋಂ; ಪದಕದ ಆಸೆ ನಿರಾಸೆ

    ಹನ್ನೊಂದರ ಬಳಗ (ಭಾರತ): ಶಿಖರ್ ಧವನ್, ರುತುರಾಜ್ ಗಾಯಕ್ವಾಡ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸ್​​ನ್, ನಿತೀಶ್ ರಾಣಾ, ಭುವನೇಶ್ವರ್, ಕುಲ್ದೀಪ್ ಯಾದವ್, ರಾಹುಲ್ ಚಹರ್, ವರುಣ್ ಚಕ್ರವರ್ತಿ, ನವದೀಪ್ ಸೈನಿ, ಚೇತನ್ ಸಕಾರಿಯಾ.

    ಹನ್ನೊಂದರ ಬಳಗ (ಶ್ರೀಲಂಕಾ): ಆವಿಷ್ಕಾ ಫರ್ನಾಂಡೋ, ಮಿನೋದ್ ಭನುಕಾ, ಧನಂಜಯಾ ಡಿಸಿಲ್ವಾ, ಚರಿತ್ ಅಸಲಂಕಾ, ಅಸೆನ್ ಭಂಡಾರ/ಭನುಕಾ ರಾಜಪಕ್ಸಾ, ಧಸುನ್ ಸನಕಾ, ವಾಣಿಂದು ಹಸರಂಗಾ, ಚನುಕಾ ಕರುಣರತ್ನೆ, ಇಸುರು ಉದಾನ, ಧುಶ್ಮಂತಾ ಚಮೀರಾ, ಅಖಿಲಾ ಧನಂಜಯಾ. (ಏಜೆನ್ಸೀಸ್)

    ಒಲಿಂಪಿಕ್ಸ್​: ಕ್ವಾರ್ಟರ್​ ಫೈನಲ್ಸ್ ತಲುಪಿದ ಸಿಂಧು, ಸತೀಶ್​ ಕುಮಾರ್​; ಅರ್ಜೆಂಟಿನಾ ವಿರುದ್ಧ ಭಾರತದ ಹಾಕಿ ತಂಡಕ್ಕೆ ಜಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts