More

    ನ್ಯೂಲ್ಯಾಂಡ್ಸ್‌ನಲ್ಲಿ ವೇಗಿಗಳ ದರ್ಬಾರ್ ; ವಿರಾಟ್ ಕೊಹ್ಲಿಗೆ ತಪ್ಪಿದ ಶತಕ

    ಕೇಪ್‌ಟೌನ್: ಆತಿಥೇಯ ವೇಗಿಗಳ ಕರಾರುವಾಕ್ ದಾಳಿಗೆ ಕುಸಿತ ಕಂಡ ಭಾರತ ತಂಡ, ನಾಯಕ ವಿರಾಟ್ ಕೊಹ್ಲಿ (79ರನ್, 201 ಎಸೆತ, 12 ಬೌಂಡರಿ, 1 ಸಿಕ್ಸರ್) ಕಟ್ಟಿದ ಅದ್ಭುತ ಇನಿಂಗ್ಸ್ ಫಲವಾಗಿ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಗೌರವಯುತ ಮೊತ್ತ ಕಲೆಹಾಕಿತು. ಪ್ರತಿಯಾಗಿ ಭಾರತದ ವೇಗಿಗಳು ಕೂಡ ಆತಿಥೇಯರಿಗೆ ಆರಂಭಿಕ ಆಘಾತ ನೀಡುವ ಮೂಲಕ ತಿರುಗೇಟಿನ ಸಂದೇಶ ರವಾನಿಸಿದ್ದಾರೆ. ಮೊದಲ ದಿನದಾಟದಲ್ಲೇ ಉಭಯ ತಂಡಗಳಿಂದ 11 ವಿಕೆಟ್ ಪತನ ಕಂಡವು. ಈ ಮೂಲಕ ವೇಗಿಗಳ ದರ್ಬಾರ್‌ಗೆ ಕೇಪ್‌ಟೌನ್ ಅಂಗಳ ವೇದಿಕೆಯಾಯಿತು.

    ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಮಂಗಳವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಕೊಹ್ಲಿ ಆಕರ್ಷಕ ನಿರ್ವಹಣೆ ನಡುವೆಯೂ ವೇಗಿಗಳಾದ ಕಗಿಸೊ ರಬಾಡ (73ಕ್ಕೆ 4) ಹಾಗೂ ಮಾರ್ಕೋ ಜಾನ್ಸೆನ್ (55ಕ್ಕೆ 3) ಮಾರಕ ದಾಳಿಗೆ ನಲುಗಿ 77. 3 ಓವರ್‌ಗಳಲ್ಲಿ 223 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ಎಚ್ಚರಿಕೆ ನಿರ್ವಹಣೆ ನಡುವೆಯೂ ಜಸ್‌ಪ್ರೀತ್ ಬುಮ್ರಾ (0ಕ್ಕೆ 1) ದಾಳಿಗೆ ಆಘಾತ ಕಂಡಿರುವ ದ.ಆಫ್ರಿಕಾ ದಿನದಂತ್ಯಕ್ಕೆ 1 ವಿಕೆಟ್‌ಗೆ 17 ರನ್ ಗಳಿಸಿದ್ದು, ಇನ್ನೂ 206 ರನ್ ಹಿನ್ನಡೆಯಲ್ಲಿದೆ.

    ಭಾರತ: 77.3 ಓವರ್‌ಗಳಲ್ಲಿ 223 (ರಾಹುಲ್ 12, ಮಯಾಂಕ್ ಅಗರ್ವಾಲ್ 15, ಪೂಜಾರ 43, ವಿರಾಟ್ ಕೊಹ್ಲಿ 79, ರಿಷಭ್ ಪಂತ್ 27, ಕಗಿಸೊ 73ಕ್ಕೆ 4, ಮಾರ್ಕೋ ಜಾನ್ಸೆನ್ 55ಕ್ಕೆ 3, ಡುವಾನ್ನೆ ಒಲಿವೀರ್ 42ಕ್ಕೆ 1, ಲುಂಗಿ ಎನ್‌ಗಿಡಿ 33ಕ್ಕೆ 1, ಕೇಶವ್ ಮಹಾರಾಜ್ 14ಕ್ಕೆ 1), ದಕ್ಷಿಣ ಆಫ್ರಿಕಾ: 8 ಓವರ್‌ಗಳಲ್ಲಿ 1 ವಿಕೆಟ್‌ಗೆ 17 (ಏಡನ್ ಮಾರ್ಕ್ರಮ್ 8*, ಕೇಶವ್ ಮಹಾರಾಜ್ 6*, ಡೀನ್ ಎಲ್ಗರ್ 3, ಜಸ್‌ಪ್ರೀತ್ ಬುಮ್ರಾ 0ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts