More

    ಸೆಂಚುರಿಯನ್ ಟೆಸ್ಟ್‌ನಲ್ಲಿ ಗೆಲುವಿನ ಹಾದಿಯಲ್ಲಿ ಭಾರತ; ಆತಿಥೇಯರಿಗೆ ಡೀನ್ ಎಲ್ಗರ್ ಆಸರೆ

    ಸೆಂಚುರಿಯನ್: ವೇಗಿಗಳ ಕರಾರುವಾಕ್ ದಾಳಿ ನೆರವಿನಿಂದ ಆತಿಥೇಯ ದಕ್ಷಿಣ ಆಫ್ರಿಕಾಕ್ಕೆ ಆಘಾತ ನೀಡಿರುವ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಗೆಲುವಿನತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಭಾರತ ನೀಡಿದ 305 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿರುವ ದಕ್ಷಿಣ ಆಫ್ರಿಕಾಕ್ಕೆ ನಾಯಕ ಡೀನ್ ಎಲ್ಗರ್ (52*ರನ್, 122 ಎಸೆತ, 7 ಬೌಂಡರಿ) ಏಕಾಂಗಿ ನಿರ್ವಹಣೆ ಮೂಲಕ ಆಸರೆಯಾದರೂ, ವೇಗಿಗಳಾದ ಜಸ್‌ಪ್ರೀತ್ ಬುಮ್ರಾ (22ಕ್ಕೆ 2), ಮೊಹಮದ್ ಶಮಿ (29ಕ್ಕೆ 1) ಹಾಗೂ ಮೊಹಮದ್ ಸಿರಾಜ್ (25ಕ್ಕೆ 1) ಒಳಗೊಂಡ ಬೌಲಿಂಗ್ ಪಡೆ ಆಘಾತ ನೀಡಿದೆ. ಅಂತಿಮ ದಿನದಾಟದಲ್ಲಿ ಭಾರತದ ಗೆಲುವಿಗೆ 6 ವಿಕೆಟ್ ಅಗತ್ಯವಿದ್ದರೆ, ದಕ್ಷಿಣ ಆಫ್ರಿಕಾ ತಂಡ ಇನ್ನೂ 211 ರನ್ ಪೇರಿಸಬೇಕಿದೆ. ಸ್ಥಳೀಯ ಹವಾಮಾನ ಮುನ್ಸೂಚನೆಯ ಪ್ರಕಾರ ಅಂತಿಮ ದಿನದಾಟಕ್ಕೆ ಮಳೆ ಅಡಚಣೆ ತರುವ ಭೀತಿ ಇದ್ದು, ಮಳೆರಾಯ ಬಿಡುವು ನೀಡಿದರೆ ವಿರಾಟ್ ಕೊಹ್ಲಿ ಬಳಗ ಜಯದ ನಗೆ ಬೀರಲಿದೆ.

    ಸೂಪರ್‌ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬುಧವಾರ 1 ವಿಕೆಟ್‌ಗೆ 16 ರನ್‌ಗಳಿಂದ 2ನೇ ಇನಿಂಗ್ಸ್ ಆರಂಭಿಸಿದ ಭಾರತ ತಂಡ, ಕಗಿಸೊ ರಬಾಡ (42ಕ್ಕೆ 4) ಹಾಗೂ ಮಾರ್ಕೊ ಜಾನ್ಸೆನ್ (55ಕ್ಕೆ4) ದಾಳಿಗೆ ನಲುಗಿ 177 ರನ್‌ಗಳಿಗೆ ಸರ್ವಪತನ ಕಂಡಿತು. ಮೊದಲ ಇನಿಂಗ್ಸ್‌ನಲ್ಲಿ 130 ರನ್ ಮುನ್ನಡೆ ಸಾಧಿಸಿದ್ದ ಭಾರತ, ಆತಿಥೇಯರಿಗೆ ಸವಾಲಿನ ಗುರಿ ನೀಡಲು ಯಶಸ್ವಿಯಾಯಿತು. ಬಳಿಕ ದಕ್ಷಿಣ ಆಫ್ರಿಕಾ ಆರಂಭಿಕ ಆಘಾತ ಎದುರಿಸಿದ್ದು, ನಾಲ್ಕನೇ ದಿನದಂತ್ಯಕ್ಕೆ 4 ವಿಕೆಟ್‌ಗೆ 94 ರನ್ ಪೇರಿಸಿದೆ.

    ಭಾರತ: 327 ಮತ್ತು 174 (ಕೆಎಲ್ ರಾಹುಲ್ 23, ಅಜಿಂಕ್ಯ ರಹಾನೆ 20, ರಿಷಭ್ ಪಂತ್ 34, ಕಗಿಸೊ ರಬಾಡ 42ಕ್ಕೆ 4, ಮಾರ್ಕೊ ಜೇಸೆನ್ 55ಕ್ಕೆ 4, ಲುಂಗಿ ಎನ್‌ಗಿಡಿ 31ಕ್ಕೆ 2), ದಕ್ಷಿಣ ಆಫ್ರಿಕಾ: 197 ಮತ್ತು 4 ವಿಕೆಟ್‌ಗೆ 94 (ಡೀನ್ ಎಲ್ಗರ್ 52, ಕೀಗನ್ ಪೀಟರ್ಸೆನ್ 11, ಜಸ್‌ಪ್ರೀತ್ ಬುಮ್ರಾ 22ಕ್ಕೆ 2, ಮೊಹಮದ್ ಶಮಿ 29ಕ್ಕೆ 1, ಮೊಹಮದ್ ಸಿರಾಜ್ 25ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts