More

    VIDEO: ಮೈದಾನದಲ್ಲೇ ಕೈಕೊಟ್ಟ ಸ್ಪೈಡರ್‌ಕ್ಯಾಮ್; ಈ ವೇಳೆ ಆಟಗಾರರು ಮಾಡಿದ ಕೀಟಲೆ ಏನು ಗೊತ್ತೇ?

    ಮುಂಬೈ: ಕ್ರಿಕೆಟ್ ಪಂದ್ಯದ ವೇಳೆ ಸಾಮಾನ್ಯವಾಗಿ ಮಳೆ, ಮಂದಬೆಳಕು, ಔಟ್‌ಫೀಲ್ಡ್ ಒದ್ದೆ, ಹೊನಲು ಬೆಳಕಿನ ಸಮಸ್ಯೆಯಂಥ ಕಾರಣಗಳಿಂದ ಆಟ ಸ್ಥಗಿತಗೊಳ್ಳುವುದನ್ನು ನೋಡಿದ್ದೇವೆ. ಭಾನುವಾರ ವಾಂಖೆಡೆ ಮೈದಾನದಲ್ಲಿ ವಿಭಿನ್ನ ಕಾರಣಕ್ಕೆ ಕೆಲಕಾಲ ಆಟ ಸ್ಥಗಿತಗೊಂಡಿತು. ನ್ಯೂಜಿಲೆಂಡ್ 2ನೇ ಇನಿಂಗ್ಸ್ ಆರಂಭಿಸಿದ 4ನೇ ಓವರ್‌ನಲ್ಲಿ ಸ್ಪೈಡರ್ ಕ್ಯಾಮೆರಾ ಮೈದಾನದಲ್ಲೇ ದಿಢೀರ್ ಸ್ಥಗಿತಗೊಂಡಿತು. ಆಟಗಾರರು ಸ್ಪೈಡರ್ ಕ್ಯಾಮೆರಾವನ್ನು ತಮಾಷೆಯಾಗಿ ನೋಡುತ್ತಾ ನಿಂತರೆ, ಪ್ರೇಕ್ಷಕರು ಮಾತ್ರ ಆಟ ಸ್ಥಗಿತಗೊಂಡಿರುವ ಬಗ್ಗೆ ಬೇಸರಿಸಿದರು. ಇದರಿಂದಾಗಿ ಇನ್ನು 20 ನಿಮಿಷ ಬೇಗನೆ ಚಹಾ ವಿರಾಮ ಘೋಷಿಸಲಾಯಿತು.

    ಬಳಿಕ ಮಾಹಿತಿ ಹಂಚಿಕೊಂಡ ವೀಕ್ಷಕ ವಿವರಣೆಗಾರ ನ್ಯೂಜಿಲೆಂಡ್‌ನ ಸಿಮೊನ್ ಡೌಲ್, ಕೇಬಲ್ ಹಾಗೂ ಬ್ಯಾಟರಿ ಸಮಸ್ಯೆಯಿಂದಾಗಿ ಹೀಗೆ ಆಗಿತ್ತು ಎಂದು ಹೇಳಿಕೊಂಡಿದ್ದಾರೆ. ಈ ವೇಳೆ ಆಟಗಾರರು ಸ್ಪೈಡರ್ ಕ್ಯಾಮೆರಾ ಬಳಿ ಆಗಮಿಸಿ, ಮೇಲೆ ಹೋಗು ಎಂದು ತಮಾಷೆಯಾಗಿ ಕೈ ಸನ್ನೆ ಮಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಪಂದ್ಯದಲ್ಲಿ ಸಂಪೂರ್ಣ ಬಿಗಿ ಹಿಡಿತ ಸಾಧಿಸಿರುವ ಭಾರತ ತಂಡ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ಎದುರು ಗೆಲುವಿನ ಹಾದಿಯಲ್ಲಿದೆ. ಇನ್ನೂ 2 ದಿನಗಳ ಆಟ ಬಾಕಿ ಉಳಿದಿರುವ ನಿರ್ಣಾಯಕ ಪಂದ್ಯವನ್ನು ಮೂರೂವರೆ ದಿನಗಳಲ್ಲೇ ಗೆಲ್ಲುವ ಅವಕಾಶ ಭಾರತದ ಮುಂದಿದೆ. ಸೋಮವಾರ ಉಳಿದ 5 ವಿಕೆಟ್ ಕಬಳಿಸಿ ಸರಣಿ ವಶಪಡಿಸಿಕೊಳ್ಳುವತ್ತ ವಿರಾಟ್ ಕೊಹ್ಲಿ ಪಡೆ ದಿಟ್ಟ ಹೆಜ್ಜೆ ಇಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts