More

    ಭಾರತದ ಹಿಡಿತದಲ್ಲಿ ಮುಂಬೈ ಟೆಸ್ಟ್ ; ಸೋಲಿನ ಸುಳಿಯಲ್ಲಿ ನ್ಯೂಜಿಲೆಂಡ್

    ಮುಂಬೈ: ಪ್ರವಾಸಿ ನ್ಯೂಜಿಲೆಂಡ್ ತಂಡದ ಎಡಗೈ ಸ್ಪಿನ್ನರ್ ಅಜಾಜ್ ಪಟೇಲ್ (119ಕ್ಕೆ 10) ವಿಶ್ವ ದಾಖಲೆ ನಿರ್ವಹಣೆ ನಡುವೆಯೂ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಮೇಲುಗೈ ಸಾಧಿಸಿದ ಭಾರತ ತಂಡ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ. ಇನ್ನೂ ಮೂರು ದಿನಗಳ ಆಟ ಬಾಕಿ ಉಳಿದಿದ್ದು, ಭರ್ಜರಿ ಮುನ್ನಡೆ ಸಾಧಿಸಿರುವ ವಿರಾಟ್ ಕೊಹ್ಲಿ ಪಡೆ ಸುಲಭ ಗೆಲುವಿನ ಕನಸಿನಲ್ಲಿದೆ. ಫಾಲೋ ಆನ್ ಹೇರುವ ಅವಕಾಶವಿದ್ದರೂ ವಿರಾಟ್ ಕೊಹ್ಲಿ ಎರಡನೇ ಸರದಿ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು.

    ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 4 ವಿಕೆಟ್‌ಗೆ 221 ರನ್‌ಗಳಿಂದ ಶನಿವಾರದ ಆಟ ಮುಂದುವರಿಸಿದ ಭಾರತ ತಂಡ, ಕನ್ನಡಿಗ ಮಯಾಂಕ್ ಅಗರ್ವಾಲ್ (150 ರನ್, 311 ಎಸೆತ, 17 ಬೌಂಡರಿ, 4 ಸಿಕ್ಸರ್) ಭರ್ಜರಿ ನಿರ್ವಹಣೆ ಹಾಗೂ ಅಕ್ಷರ್ ಪಟೇಲ್ (52 ರನ್, 128 ಎಸೆತ, 5 ಬೌಂಡರಿ, 1 ಸಿಕ್ಸರ್) ಅರ್ಧಶತಕದ ನೆರವಿನಿಂದ ಭಾರತ ಮೊದಲ ಇನಿಂಗ್ಸ್‌ನಲ್ಲಿ 325 ರನ್ ಪೇರಿಸಿ ಸರ್ವಪತನ ಕಂಡಿತು. ಬಳಿಕ ಮೊಹಮದ್ ಸಿರಾಜ್ (19ಕ್ಕೆ 3), ಆರ್.ಅಶ್ವಿನ್ (8ಕ್ಕೆ 4) ಹಾಗೂ ಅಕ್ಷರ್ ಪಟೇಲ್ (14ಕ್ಕೆ 2) ಮಾರಕ ದಾಳಿಗೆ ನಲುಗಿದ ಕಿವೀಸ್ 28.1 ಓವರ್‌ಗಳಲ್ಲಿ 62 ರನ್‌ಗಳಿಗೆ ಸರ್ವಪತನ ಕಂಡಿತು. 263 ರನ್ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಎರಡನೇ ದಿನದಂತ್ಯಕ್ಕೆ 21 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 69 ರನ್‌ಗಳಿಸಿದ್ದು, ಒಟ್ಟಾರೆ 332 ರನ್ ಮುನ್ನಡೆಯಲ್ಲಿದೆ.

    ಭಾರತ: 325 (ಮಯಾಂಕ್ ಅಗರ್ವಾಲ್ 150, ಅಕ್ಷರ್ ಪಟೇಲ್ 52, ಅಜಾಜ್ ಪಟೇಲ್ 119ಕ್ಕೆ 10), ಮತ್ತು 21 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 69 (ಮಯಾಂಕ್ 38, ಪೂಜಾರ 29), ನ್ಯೂಜಿಲೆಂಡ್: 28.1 ಓವರ್‌ಗಳಲ್ಲಿ 62 (ಟಾಮ್ ಲಾಥಮ್ 10, ಕೈಲ್ ಜೇಮಿಸನ್ 17, ಆರ್. ಅಶ್ವಿನ್ 8ಕ್ಕೆ 4, ಮೊಹಮದ್ ಸಿರಾಜ್ 19ಕ್ಕೆ 3, ಅಕ್ಷರ್ ಪಟೇಲ್ 14ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts