More

    ಕಿವೀಸ್ ಎದುರು ಟಿ20 ಸರಣಿ ಜಯಿಸಿದ ಭಾರತ ತಂಡ

    ರಾಂಚಿ: ಪದಾರ್ಪಣೆ ಪಂದ್ಯದಲ್ಲೇ ಮಿಂಚಿನ ನಿರ್ವಹಣೆ ತೋರಿದ ಹರ್ಷಲ್ ಪಟೇಲ್ (25ಕ್ಕೆ 2) ಮಾರಕ ದಾಳಿ ಹಾಗೂ ಆರಂಭಿಕರಾದ ಕೆಎಲ್ ರಾಹುಲ್ (65 ರನ್, 49 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ರೋಹಿತ್ ಶರ್ಮ (55 ರನ್, 36 ಎಸೆತ, 1 ಬೌಂಡರಿ, 5 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಫಲವಾಗಿ ಭಾರತ ತಂಡ 2ನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿತು. ಇದರಿಂದ ಒಂದು ಪಂದ್ಯ ಬಾಕಿ ಇರುವಂತೆಯೇ 3 ಪಂದ್ಯಗಳ ಸರಣಿಯನ್ನು ಭಾರತ 2-0ಯಿಂದ ವಶಪಡಿಸಿಕೊಂಡಿತು. ನೂತನ ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮ ಜೋಡಿ ಚೊಚ್ಚಲ ಚುಟುಕು ಸರಣಿಯನ್ನು ಮುಡಿಗೇರಿಸಿಕೊಂಡಿತು.

    ಜೆಎಸ್‌ಸಿಎ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ರೋಹಿತ್ ನಿರೀಕ್ಷೆಯಂತೆಯೇ ಪ್ರವಾಸಿಗರನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆರಂಭಿಕ ಬ್ಯಾಟರ್‌ಗಳ ಅಬ್ಬರದ ನಡುವೆಯೂ ಹರ್ಷಲ್ ದಾಳಿಗೆ ನಲುಗಿದ ಕಿವೀಸ್ 6 ವಿಕೆಟ್‌ಗೆ 153 ರನ್ ಪೇರಿಸಿತು. ಈ ಸಾಧಾರಣ ಮೊತ್ತ ಬೆನ್ನಟ್ಟಿದ ಭಾರತ ತಂಡ, ಉಪನಾಯಕ -ನಾಯಕ ಜೋಡಿ ಮೊದಲ ವಿಕೆಟ್‌ಗೆ 117 ರನ್ ಸೇರಿಸಿದ ಲವಾಗಿ 17.2 ಓವರ್‌ಗಳಲ್ಲಿ 3 ವಿಕೆಟ್‌ಗೆ 155 ರನ್ ಗಳಿಸಿ ಜಯಿಸಿತು.

    ನ್ಯೂಜಿಲೆಂಡ್: 6 ವಿಕೆಟ್‌ಗೆ 153 (ಮಾರ್ಟಿನ್ ಗುಪ್ಟಿಲ್ 31, ಡೆರಿಲ್ ಮಿಚೆಲ್ 31, ಗ್ಲೆನ್ ಫಿಲಿಪ್ಸ್ 34, ಮಾರ್ಕ್ ಚಾಪ್‌ಮನ್ 21, ಹರ್ಷಲ್ ಪಟೇಲ್ 25ಕ್ಕೆ 2, ಭುವನೇಶ್ವರ್ ಕುಮಾರ್ 39ಕ್ಕೆ 1, ದೀಪಕ್ ಚಹರ್ 42ಕ್ಕೆ 1, ಅಕ್ಷರ್ ಪಟೇಲ್ 26ಕ್ಕೆ 1, ಆರ್.ಅಶ್ವಿನ್ 19ಕ್ಕೆ 1), ಭಾರತ: 17.2 ಓವರ್‌ಗಳಲ್ಲಿ 3 ವಿಕೆಟ್‌ಗೆ 155 (ಕೆಎಲ್ ರಾಹುಲ್ 65, ರೋಹಿತ್ ಶರ್ಮ 55, ವೆಂಕಟೇಶ್ ಅಯ್ಯರ್ 12*, ರಿಷಭ್ ಪಂತ್ 12*, ಟಿಮ್ ಸೌಥಿ 16ಕ್ಕೆ 3).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts