More

    ಕ್ಲೀನ್‌ಸ್ವೀಪ್ ಸಾಧನೆಯೊಂದಿಗೆ ದಾಖಲೆ ಬರೆದ ಭಾರತ

    ಕೋಲ್ಕತ: ಭಾರತ ತಂಡ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 73 ರನ್‌ಗಳಿಂದ ಮಣಿಸಿದೆ. ಇದರಿಂದ 3 ಪಂದ್ಯಗಳ ಸರಣಿಯನ್ನು 3-0 ಯಿಂದ ಕ್ಲೀನ್‌ಸ್ವೀಪ್ ಮಾಡಿಕೊಂಡಿತು. ಸರಣಿ ಕ್ಲೀನ್‌ಸ್ವೀಪ್ ಸಾಧನೆಯೊಂದಿಗೆ ಹಲವು ದಾಖಲೆಗಳನ್ನು ರೋಹಿತ್ ಶರ್ಮ ಬಳಗ ಒಲಿಸಿಕೊಂಡಿತು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಸರಣಿಗಳಲ್ಲಿ ಅತಿಹೆಚ್ಚು ಕ್ಲೀನ್‌ಸ್ವೀಪ್ ಸಾಧಿಸಿದ ತಂಡಗಳ ಪೈಕಿ ಜಂಟಿ ಅಗ್ರಸ್ಥಾನಕ್ಕೇರಿತು. ಭಾರತ ಹಾಗೂ ಪಾಕಿಸ್ತಾನ ತಂಡಗಳು ತಲಾ 6 ಬಾರಿ ಈ ಸಾಧನೆ ಮಾಡಿವೆ. ಅಫ್ಘಾನಿಸ್ತಾನ ತಂಡ 5ನೇ ಈ ಸಾಧನೆ ಮಾಡಿದ್ದರೆ, ಇಂಗ್ಲೆಂಡ್ 4 ಬಾರಿ ಹಾಗೂ ದಕ್ಷಿಣ ಆಫ್ರಿಕಾ 3 ಬಾರಿ ಕ್ಲೀನ್ ಸ್ವೀಪ್ ಸಾಧನೆ ಮಾಡಿವೆ.

    ಭಾರತ ತಂಡ ಇದುವರೆಗೂ 6 ಬಾರಿ ಕ್ಲೀನ್‌ಸ್ವೀಪ್ ಸಾಧನೆ ಮಾಡಿದೆ. 2016ರಲ್ಲಿ ಆಸ್ಟ್ರೇಲಿಯಾ ಎದುರು (3-0), 2017ರಲ್ಲಿ ಶ್ರೀಲಂಕಾ ಎದುರು (3-0), 2018ರಲ್ಲಿ ವೆಸ್ಟ್ ಇಂಡೀಸ್ (3-0), 2019ರಲ್ಲಿ ವೆಸ್ಟ್ ಇಂಡೀಸ್ (3-0), 2020ರಲ್ಲಿ ನ್ಯೂಜಿಲೆಂಡ್ (5-0) ಹಾಗೂ 2021ರಲ್ಲಿ ನ್ಯೂಜಿಲೆಂಡ್ ಎದುರು (3-0) ಈ ಸಾಧನೆ ಮಾಡಿದೆ. ಅಲ್ಲದೆ, ಭಾರತ ತಂಡ ದ್ವಿಪಕ್ಷೀಯ ಟಿ20 ಸರಣಿಯಲ್ಲಿ ನ್ಯೂಜಿಲೆಂಡ್ ಎದುರು ಸತತ 8ನೇ ಜಯ ದಾಖಲಿಸಿತು.

    ನಾಯಕ ರೋಹಿತ್ ಶರ್ಮ (56 ರನ್, 31 ಎಸೆತ, 5 ಬೌಂಡರಿ, 3 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಹಾಗೂ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ (9ಕ್ಕೆ 3) ಮಾರಕ ದಾಳಿಗೆ ನಲುಗಿದ ಪ್ರವಾಸಿ ನ್ಯೂಜಿಲೆಂಡ್ ತಂಡ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡದ ಎದುರು 73 ರನ್‌ಗಳಿಂದ ಸೋಲನುಭವಿಸಿತು. ಈಡನ್ ಗಾರ್ಡನ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಮಧ್ಯಮ ಕ್ರಮಾಂಕದ ಕುಸಿತದ ನಡುವೆಯೂ 7 ವಿಕೆಟ್‌ಗೆ 184 ರನ್ ಪೇರಿಸಿತು. ಪ್ರತಿಯಾಗಿ ನ್ಯೂಜಿಲೆಂಡ್ ತಂಡ, ಆತಿಥೇಯರ ಕರಾರುವಾಕ್ ದಾಳಿಗೆ ನಲುಗಿ 17.2 ಓವರ್‌ಗಳಲ್ಲಿ 111 ರನ್‌ಗಳಿಗೆ ಸರ್ವಪತನ ಕಂಡಿತು.

    ನ್ಯೂಜಿಲೆಂಡ್ ಎದುರು ಟಿ20 ಸರಣಿ ಕ್ಲೀನ್ ಸ್ವೀಪ್ ಸಾಧಿಸಿದ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts