More

    ಇಂಗ್ಲೆಂಡ್ ತಂಡವನ್ನು ಮಣಿಸಿ ಚೊಚ್ಚಲ ಡಬ್ಲ್ಯುಟಿಸಿ ಫೈನಲ್‌ಗೇರಿದ ಭಾರತ

    ಅಹಮದಾಬಾದ್: ಅನುಭವಿ ಆರ್.ಅಶ್ವಿನ್ (47ಕ್ಕೆ 5) ಹಾಗೂ ಅಕ್ಷರ್ ಪಟೇಲ್ (48ಕ್ಕೆ 5) ಸ್ಪಿನ್ ಜೋಡಿಯ ಮಾರಕ ದಾಳಿ ನೆರವಿನಿಂದ ಆತಿಥೇಯ ಭಾರತ ತಂಡ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಇನಿಂಗ್ಸ್ ಹಾಗೂ 25 ರನ್‌ಗಳಿಂದ ಮಣಿಸಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ (ಡಬ್ಲ್ಯುಟಿಸಿ) ಪ್ರಶಸ್ತಿ ಸುತ್ತಿಗೇರಿತು. ಕನಿಷ್ಠ ಡ್ರಾ ಸಾಧಿಸಿದರೂ ಡಬ್ಲ್ಯುಟಿಸಿ ಫೈನಲ್‌ಗೇರುವ ಅವಕಾಶ ಹೊಂದಿದ್ದ ಭಾರತ ತಂಡ ನಿರ್ಣಾಯಕ ಹೋರಾಟದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿತು. 4 ಪಂದ್ಯಗಳ ಸರಣಿಯನ್ನು 3-1 ರಿಂದ ವಶಪಡಿಸಿಕೊಂಡ ಭಾರತ ತಂಡ, ಐಸಿಸಿ ರ‌್ಯಾಂಕಿಂಗ್ ಅಂಕಪಟ್ಟಿಯಲ್ಲೂ ಅಗ್ರಸ್ಥಾನಕ್ಕೇರಿತು.

    ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ಮುಕ್ತಾಯಗೊಂಡ ಪಂದ್ಯದಲ್ಲಿ 7 ವಿಕೆಟ್‌ಗೆ 294 ರನ್‌ಗಳಿಂದ ದಿನದಾಟ ಆರಂಭಿಸಿದ ಭಾರತ, ಮೊದಲ ಇನಿಂಗ್ಸ್‌ನಲ್ಲಿ 365 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ ಭಾರತ ತಂಡ 160 ರನ್ ಮುನ್ನಡೆ ಸಾಧಿಸಿತು. ಬಳಿಕ ಇನಿಂಗ್ಸ್ ಸೋಲಿನ ಭೀತಿಯಿಂದ ದ್ವಿತೀಯ ಸರದಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್, ಅಶ್ವಿನ್-ಅಕ್ಷರ್ ಪಟೇಲ್ ಜೋಡಿಯ ಅಬ್ಬರಕ್ಕೆ ನಲುಗಿ 54.5 ಓವರ್‌ಗಳಲ್ಲಿ 135 ರನ್‌ಗಳಿಗೆ ಸರ್ವಪತನ ಕಂಡಿತು. ಇಂಗ್ಲೆಂಡ್ ಮೊದಲ ಇನಿಂಗ್ಸ್ 205 ರನ್‌ಗಳಿಸಿತ್ತು.

    ಇಂಗ್ಲೆಂಡ್: 205 ಮತ್ತು 54.5 ಓವರ್‌ಗಳಲ್ಲಿ 135 (ಡೇನಿಲ್ ಲಾರೆನ್ಸ್ 50, ಜೋ ರೂಟ್ 30, ಒಲಿ ಪೊಪ್ 15, ಅಕ್ಷರ್ ಪಟೇಲ್ 48ಕ್ಕೆ 5, ಆರ್.ಅಶ್ವಿನ್ 47ಕ್ಕೆ 5). ಭಾರತ : 365 (ವಾಷಿಂಗ್ಟನ್ ಸುಂದರ್ 96*, ಅಕ್ಷರ್ ಪಟೇಲ್ 43, ಜೇಮ್ಸ್ ಆಂಡರ್‌ಸನ್ 44ಕ್ಕೆ 3, ಬೆನ್ ಸ್ಟೋಕ್ಸ್ 89ಕ್ಕೆ 4, ಜಾಕ್ ಲೀಚ್ 89ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts