More

  ಪ್ರತಿಯೊಬ್ಬರೂ ಗುರುವಿನ ಉಪದೇಶ ಕೇಳಲಿ

  ಇಂಡಿ: ಗುರುವಿನ ಉಪದೇಶ ಕೇಳುವುದು ಮತ್ತು ದೇವರ ಸ್ಮರಿಸುವುದರಿಂದ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಹೊರಹೊಮ್ಮಬಹುದು ಎಂದು ಶಿರಶ್ಯಾಡ ಹಿರೇಮಠದ ಅಭಿನವ ಮುರಘೇಂದ್ರ ಶಿವಾಚಾರ್ಯರು ಹೇಳಿದರು.
  ತಾಲೂಕಿನ ತಡವಲಗಾ ಗ್ರಾಮದಲ್ಲಿ ಮಹಾತಪಸ್ವಿ ಗುರುಲಿಂಗೇಶ್ವರ ಶಿವಾಚಾರ್ಯರ 76ನೇ ಪುಣ್ಯಾರಾಧನೆ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ತಡವಲಗಾ ಮೂಲ ಹಿರೇಮಠ ಸಂಸ್ಥಾನದ ಶ್ರೀ ಪಪೂ ಅಭಿನವ ಶಿಯೋಗಿ ದೇವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
  ಈ ಮಠ ಪುರಾತನ ಕಾಲದಿಂದ ಬಂದಿದೆ. ಅದಕ್ಕೆ ಪ್ರತಿವರ್ಷ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ನಡೆಯತ್ತವೆ. ತಡವಲಗಾ ಗ್ರಾಮದಲ್ಲಿ ವರ್ಷದಲ್ಲಿ 8 ಸಾರಿ ಪುರಾಣ ಪ್ರವಚನಗಳು ಗ್ರಾಮದಲ್ಲಿ ನಡೆಯುತ್ತವೆ. ಆದ್ದರಿಂದ ತಡವಲಗಾ ಗ್ರಾಮದ ಜನರು ಧಾರ್ಮಿಕ ಆಚರಣೆ ದೇವರ ಭಕ್ತಿ, ಆಧ್ಯಾತ್ಮಿಕ ಚಿಂತನೆ ಮಾಡುವವವರಾಗಿದ್ದಾರೆ ಎಂದರು.
  ಇದಕ್ಕೂ ಮುನ್ನ ಲಿಂಗೈಕ್ಯ ಶಿವಯೋಗೇಂದ್ರ ಶಿವಾಚಾರ್ಯರ ಭಾವಚಿತ್ರದ ಅಡ್ಡ ಪಲ್ಲಕ್ಕಿ ಮೆರವಣಿಗೆ ವಿವಿಧ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಗ್ರಾಮದ ಮಹಿಳೆಯರಿಂದ ಕುಂಭ ಮೇಳ ನಡೆಯಿತು.
  ಇಂಚಗೇರಿಯ ರೇಣುಕ ಶಿವಾಚಾರ್ಯರು, ನಾಗಠಾಣದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಗೊರನಾಳದ ವಿರೂಪಾಕ್ಷಿ ದೇವರು, ತಡವಲಗಾದ ಶಿವಯೋಗಿ ದೇವರು, ಮಸೂತಿಯ ಪ್ರಭುಕುಮಾರ ಶಿವಾಚಾರ್ಯರು, ಇಂಗಳೇಶ್ವರದ ಬೃಂಗೇಶ್ವರ ಶಿವಾಚಾರ್ಯರು, ಬಸವನಹಟ್ಟಿಯ ವೀರಗಂಗಾಧರ ಶಿವಾಚಾರ್ಯರು, ತಮ್ಮಣ್ಣ ಪೂಜಾರಿ, ಬಾಬುಸಾಹುಕಾರ ಮೇತ್ರಿ, ಸಂಪತ್ತ ಕುಮಾರ ಹಿಳ್ಳಿ, ಶೌಕತ್‌ಅಲಿ ನಾಲಬಂದ, ರಾಜು ರಾಠೋಡ, ಶಬ್ಬೀರ್ ಪಟೇಲ, ಸಿದ್ದಣ್ಣ ಮಸಳಿ, ಕಮಲಾಕರ ಮಸಳಿ ಮತ್ತಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts