ತವರಿಗೆ ಆಗಮಿಸಿದ ಯೋಧನಿಗೆ ಅದ್ದೂರಿ ಸ್ವಾಗತ

1 Min Read
ತವರಿಗೆ ಆಗಮಿಸಿದ ಯೋಧನಿಗೆ ಅದ್ದೂರಿ ಸ್ವಾಗತ

ಇಂಡಿ: ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ತವರಿಗೆ ಆಗಮಿಸಿದ ಯೋಧ ಮಹಾದೇವ ಬಗಲಿ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಾಗರಿಕರು ಹಾಗೂ ಹಂಜಗಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸೇನೆಗೆ ಸೇರಿದಾಗ ತರಬೇತಿಯಲ್ಲಿ ಸಾಕಷ್ಟು ಕಷ್ಟ ಅನುಭವಿಸಿದೆ. ನಂತರ ಅಲ್ಲಿನ ವಾತಾವರಣ ಮೈಗೂಡಿಸಿಕೊಂಡು ಕೊನೆವರೆಗೂ ಸೇವೆ ಸಲ್ಲಿಸಿ ತಾಯ್ನಡಿಗೆ ಮರಳಿದ್ದು ಸಂತಸ ತಂದಿದೆ. ತವರಿಗೆ ಮರಳುತ್ತಿದ್ದಂತೆ ನೂರಾರು ಜನ ನನ್ನನ್ನು ಸತ್ಕರಿಸಿ ಮೆರವಣಿಗೆ ಮೂಲಕ ಗ್ರಾಮಕ್ಕೆ ಕರೆದುಕೊಂಡು ಹೋಗುತ್ತಿರುವುದು ಸಂತಸ ತಂದಿದೆ. ದೇಶಸೇವೆ ಮಾಡಿದ್ದು ಸಾರ್ಥಕವಾಗಿದೆ ಎಂದರು.

16 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆಗೈದು ನಿವೃತ್ತಿ ಹೊಂದಿ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದಲ್ಲಿ ಯೋಧ ಹಾಗೂ ಅವರ ಪತ್ನಿಯನ್ನು ಮೆರವಣಿಗೆ ಮೂಲಕ ಅವರ ಮನೆಗೆ ಕರೆತರಲಾಯಿತು.

ಬಿಜೆಪಿ ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಅನೀಲ ಜಮಾದಾರ, ಶ್ರೀಶೈಲ ಪೂಜಾರಿ, ಅನೀಲಗೌಡ ಬಿರಾದಾರ, ಶೀಲವಂತ ಉಮರಾಣಿ, ಬಸವರಾಜ ಕುಂಬಾರ, ದೇವೇಂದ್ರ ಕುಂಬಾರ, ಸಂಜೀವ ದಶವಂತ, ಬುದ್ದುಗೌಡ ಪಾಟೀಲ, ಮೈಬೂಬ ಬೇವನೂರ, ರಾಜಕುಮಾರ ಚಾಬುಕಸವಾರ, ಭೀಮಾಶಂಕರ ಮೂರಮನ್ ಸೇರಿದಂತೆ ನೂರಾರು ಜನರು ಯೋಧ ಮಹಾದೇವ ಅವರನ್ನು ಸತ್ಕರಿಸಿದರು.

See also  ಮೀಸಲಾತಿ ವರ್ಗೀಕರಣದಿಂದ ಅನ್ಯಾಯ; ಸರ್ಕಾರದ ವಿರುದ್ಧ ಬಲಿಜ ಸಮುದಾಯ ಆಕ್ರೋಶ
Share This Article