More

    ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡಿ

    ಇಂಡಿ: ದೇಶಪ್ರೇಮಿಗಳಾದ ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜರ ಮೂರ್ತಿಗಳಿಗೆ ಅವಮಾನ ಮಾಡಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಸೀಲ್ದಾರ್ ಆರ್.ಎಸ್. ರೇವಡಿಗಾರ ಅವರಿಗೆ ಸಲ್ಲಿಸಿದರು.

    ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ಡಿ. ಪಾಟೀಲ ಮಾತನಾಡಿ, ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜರು ಒಂದು ಜಾತಿ ಜನಾಂಗಕ್ಕೆ ಸೀಮಿತವಲ್ಲ. ಅವರು ಇಡೀ ದೇಶದ ಆಸ್ತಿ. ಆದರೆ, ಇಂದು ರಾಜಕೀಯ ಲಾಭಕ್ಕೋ ಮತ್ಯಾವುದೋ ಕಾರಣಕ್ಕೋ ಅವಮಾನ ಮಾಡುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದರು.

    ಶ್ರೀಶೈಲಗೌಡ ಪಾಟೀಲ, ಅಯ್ಯೂಬ್ ನಾಟೀಕಾರ, ಮಹಿಬೂಬ್ ಬೇನೂರ ಮಾತನಾಡಿ, ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜರಿಬ್ಬರೂ ದೇಶಾಭಿಮಾನಿಗಳಾಗಿದ್ದರು. ರಾಜಕೀಯ ಲಾಭಕ್ಕಾಗಿಯೇ ಇಂತಹ ಹೇಸಿಗೆ ಕೆಲಸ ಮಾಡಲಾಗಿದೆ. ಈ ಕೃತ್ಯ ಮಾಡಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು. ಅಲ್ಲದೆ, ಎಂಇಎಸ್ ಹಾಗೂ ಶಿವಸೇನೆ ಸಂಘಟನೆಗಳನ್ನು ರಾಜ್ಯದಿಂದ ನಿಷೇಧಿಸಬೇಕೆಂದು ಆಗ್ರಹಿಸಿದರು.

    ಸಿದ್ದು ಡಂಗಾ, ನಿಯಾಜ ಅಗರಖೇಡ, ಪವನ್ ಕೊಡಹೊನ್ನ, ಗಡ್ಡೆಪ್ಪ ಕಲ್ಮನಿ, ಮುತ್ತು ಪೂಜಾರಿ, ಸಿದ್ದು ಪೂಜಾರಿ, ಸಂತೋಷ ಹೊಸಮನಿ, ಅಮರ ತೋಡಕರ್, ದುಂಡು ಬಿರಾದಾರ, ಬಾಬು ಮೇತ್ರಿ, ಮಾಳು ಮ್ಯಾಕೇರಿ, ಮುತ್ತು ಪೈಕಾರ, ಸಂಜು ಪೈಕಾರ, ಮಾಳು ಗುಡ್ಲ, ರಾಜು ಮುಲ್ಲಾ, ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ, ಮಾನವಹಕ್ಕುಗಳ ಜನಜಾಗೃತಿ ಸಮಿತಿ, ರಾಷ್ಟ್ರೀಯ ಚರ್ಮಕಾರ ಸಂಘದ ಪದಾಧಿಕಾರಿಗಳು ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts