More

    ಅಧಿಕಾರಿಗಳ ನಿರ್ಲಕ್ಷೃಕ್ಕೆ ಸಾರ್ವಜನಿಕರ ಪರದಾಟ

    ಇಂಡಿ: ಪಟ್ಟಣದ ಪುರಸಭೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ಪುರಸಭೆ ಎದುರೇ ಫುಟ್‌ಪಾತ್ ಮತ್ತು ರಸ್ತೆ ಅತಿಕ್ರಮಣಗೊಂಡರೂ ಅದನ್ನು ತೆರವುಗೊಳಿಸುವ ಗೋಜಿಗೆ ಹೋಗದಿರುವುದು ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.

    ಈಗಾಗಲೇ ಫುಟ್‌ಪಾತ್ ಅತಿಕ್ರಮಣ ಕುರಿತು ‘ವಿಜಯವಾಣಿ’ ಪತ್ರಿಕೆ ನ.7 ರಂದೇ ‘ಇಂಡಿ ಪಟ್ಟಣದಲ್ಲಿ ಮಾಯವಾದ ಫುಟ್‌ಪಾತ್’ ಶಿರೋನಾಮೆಯಡಿ ವರದಿ ಬಿತ್ತರಿಸಿದೆ. ಆದರೂ ಪುರಸಭೆ ಅಧಿಕಾರಿಗಳು ಇದುವರೆಗೂ ಫುಟ್‌ಪಾತ್ ಅತಿಕ್ರಮಣ ತೆರವುಗೊಳಿಸುವ ಗೋಜಿಗೆ ಹೋಗಿಲ್ಲ.

    ಫುಟ್‌ಪಾತ್ ಅತಿಕ್ರಮಣವಾಗಿರುವುದರಿಂದ ಪಟ್ಟಣದ ನಾಗರಿಕರಿಗೆ ಹಾಗೂ ಗ್ರಾಮೀಣ ಭಾಗದಿಂದ ಬರುವ ಜನರಿಗೆ ನಡೆದಾಡಲು ತೊಂದರೆಯಾಗುತ್ತಿದೆ. ಕೂಡಲೇ ಅತಿಕ್ರಮಣ ತೆರವುಗೊಳಿಸುವಂತೆ ನಾಗರಿಕರು ಕೋರಿದ್ದಾರೆ.

    ಆಡಳಿತ ಮಂಡಳಿಯವರೊಂದಿಗೆ ಚರ್ಚಿಸಿ ಫುಟ್‌ಪಾತ್ ಅತಿಕ್ರಮಣ ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇವೆ. ಅಂಗಡಿಕಾರರಿಗೆ ಮೊದಲು ತಿಳಿವಳಿಕೆ ನೀಡಿ ನಂತರ ತೆರವುಗೊಳಿಸಲಾಗುವುದು.
    ಲಕ್ಷ್ಮೇಶ ಕೆ.ಎಸ್. ಮುಖ್ಯಾಧಿಕಾರಿ, ಪುರಸಭೆ ಇಂಡಿ.

    ಪುರಸಭೆ ಅಧಿಕಾರಿಗಳು ತಮ್ಮ ಕಾರ್ಯವನ್ನು ಸರಿಯಾಗಿ ಮಾಡುತ್ತಿಲ್ಲ. ಫುಟ್‌ಪಾತ್ ಅತಿಕ್ರಮಣ ಅಷ್ಟೇ ಅಲ್ಲ, ಕೆಲವರು ರಸ್ತೆಗಳನ್ನೇ ಅತಿಕ್ರಮಣ ಮಾಡಿದ್ದಾರೆ. ಅದನ್ನು ತೆರವುಗೊಳಿಸಲು ಪುರಸಭೆಯವರು ಮುಂದಾಗುತ್ತಿಲ್ಲ. ಪಟ್ಟಣದ ಅಭಿವೃದ್ಧಿ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಎದ್ದುಕಾಣುತ್ತಿದೆ.
    ಶಾಂತು ಕಂಬಾರ, ಭೀಮಾಶಂಕರ ಆಳೂರ, ನಾಗರಿಕರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts