More

    ಇಂಡಿ ಜಿಲ್ಲಾ ಕೇಂದ್ರ ಹೋರಾಟಕ್ಕೆ ಬೆಂಬಲ

    ಇಂಡಿ: ಇಂಡಿ ಜಿಲ್ಲೆ ಆಗಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಆಲಮೇಲ, ಇಂಡಿ ಮತ್ತು ಚಡಚಣ ಭಾಗದ ಮಠಾಧೀಶರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ಬೆಂಬಲ ವ್ಯಕ್ತಪಡಿಸಿದರು.

    ಸಭೆಯಲ್ಲಿ ಮಾತನಾಡಿದ ಮಠಾಧೀಶರು ಕೇವಲ ಮಠಗಳು ಮತ್ತು ಮಠಾಧೀಶರು ಧಾರ್ಮಿಕ ಕೆಲಸವಷ್ಟನ್ನೇ ಮಾಡದೇ ಶೈಕ್ಷಣಿಕ, ಸಾಮಾಜಿಕ ಮತ್ತು ಇನ್ನಿತರ ರಂಗಗಳಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಮಠಾಧೀಶರೆಲ್ಲರೂ ಇಂಡಿ ಜಿಲ್ಲಾ ಕೂಗಿಗೆ ರೂಪರೇಷೆ ನಿರ್ಮಿಸಬೇಕು ಎಂದರು.

    ಇಂಡಿ ಜಿಲ್ಲೆ ಆಗಬೇಕೆಂದು ಮಠಾಧೀಶರು ಈಗಾಗಲೇ ಅನೇಕ ದಿನಗಳಿಂದ ಬೆಂಬಲ ವ್ಯಕ್ತಪಡಿಸುತ್ತ ಬಂದಿದ್ದು, ಮುಂದಿನ ದಿನಗಳಲ್ಲಿ ನಾವು ಸಹ ಯಾವುದೇ ತ್ಯಾಗಕ್ಕೂ ಸಿದ್ಧವಾಗುತ್ತೇವೆ. ಒಮ್ಮತದ ಅಭಿಪ್ರಾಯದಿಂದ ಬೆಂಗಳೂರಿಗೆ ಹೋಗಲು ಅಥವಾ ಯಾವದೇ ರೀತಿಯ ಹೋರಾಟಕ್ಕೆ ಸಿದ್ಧರಿದ್ದೇವೆ. ಈ ಹೋರಾಟ ಪಕ್ಷಾತೀತವಾಗಿದ್ದು ಇಲ್ಲಿ ಯಾವುದೇ ರೀತಿಯ ಪಕ್ಷ, ಜಾತಿ, ಧರ್ಮ ಕಾರಣ ಮಾಡದೇ ಮಠಾಧೀಶರು ಕೇವಲ ಜಿಲ್ಲೆಗಾಗಿ ಮಾತ್ರ ಗುರಿಯಾಗಿಟ್ಟುಕೊಂಡು ಹೋರಾಟ ಮಾಡುತ್ತೇವೆ ಎಂದರು.

    ಸಭೆಯಲ್ಲಿ ಬಂಥನಾಳದ ವೃಷಭಲಿಂಗ ಮಹಾಶಿವಯೋಗಿಗಳು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು, ಹತ್ತಳ್ಳಿಯ ಗುರುಪಾದೇಶ್ವರ ಶ್ರೀಗಳು, ಗೋಳಸಾರದ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು, ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಅಥರ್ಗಾದ ಮುರಗೇಂದ್ರ ಶಿವಾಚಾರ್ಯರು, ಚಡಚಣದ ಷಡಷ್ಕರಿ ಶ್ರೀಗಳು, ಜೈನಾಪುರದ ರೇಣುಕ ಶಿವಾಚಾರ್ಯರು, ಇಂಚಗೇರಿಯ ರುದ್ರಮುನಿ ಶಿವಾಚಾರ್ಯರರು, ನಾದ ಶಿವಾನಂದ ಶಿವಾಚಾರ್ಯರು, ರೂಡಗಿಯ ಅಭಿನವ ಶಿವಲಿಂಗ ಶಿವಾಚಾರ್ಯರು, ಹಿರೇರೂಗಿಯ ಸುಗಲಾದೇವಿ, ಕುಮಸಗಿಯ ಶಿವಾನಂದ ಹಿರೇಮಠ ಶ್ರೀಗಳು, ಹಾವಿನಾಳದ ವಿಜಯಮಹಾಂತೇಶ ಶಿವಾಚಾರ್ಯರು, ಅಹಿರಸಂಗದ ಮಲ್ಲಿಕಾರ್ಜುನ ಶಿವಾಚಾರ್ಯರು, ಅರಖೇಡದ ಪ್ರಭುಲಿಂಗ ಸ್ವಾಮೀಜಿ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts