More

    ಆಧಾರ್ ತಿದ್ದುಪಡಿಗೆ ಹಣ ಕೊಡಬೇಕಾ?

    ಇಂಡಿ: ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಮಾಡಿದ್ದು, ಅದರಲ್ಲಾದ ತಪ್ಪುಗಳನ್ನು ತಿದ್ದುಪಡಿಯನ್ನು ಉಚಿತವಾಗಿ ಮಾಡಲಾಗುತ್ತದೆ ಎಂದು ಹೇಳಿದ್ದರೂ ಪಟ್ಟಣದ ಹಲವು ಕಡೆಗಳಲ್ಲಿ ಆಧಾರ್ ತಿದ್ದುಪಡಿಗಾಗಿ ಜನತೆ 200 ರಿಂದ 400 ರೂ. ಕೊಡಬೇಕಾಗಿದೆ.

    ಹೌದು. ಸರ್ಕಾರವೇನೋ ಉಚಿತ ಎಂದು ಹೇಳಿದರೂ, ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಆಧಾರ್ ಕಾರ್ಡ್ ಮಾಡಲು ಹಾಗೂ ತಿದ್ದುಪಡಿಗೆ ಫ್ರಾಂಚೈಸಿ ನೀಡಿದ್ದು, ಆಪರೇಟರ್ ಕೇವಲ ಮೊಬೈಲ್ ನಂಬರ್ ತಿದ್ದುಪಡಿಗೆ ಹೋದವರು ಎರಡು ನೂರು ರೂಪಾಯಿ ಹಾಗೂ ಹೆಸರು, ಮೊಬೈಲ್ ನಂಬರ್ ತಿದ್ದುಪಡಿ ಎರಡೂ ಇದ್ದಲ್ಲಿ 400 ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರು ನೇರವಾಗಿ ಆರೋಪಿಸುತ್ತಿದ್ದಾರೆ.

    ಜನರಿಗೆ ಆಧಾರ್ ಕಾರ್ಡ್ ತಿದ್ದುಪಡಿ ಈಗ ಅನಿವಾರ್ಯ ಆಗಿರುವುದರಿಂದ ಜನ ಮುಗಿಬೀಳುತ್ತಿದ್ದಾರೆ. ಹೀಗಾಗಿ ಆಪರೇಟರ್ ಹೇಳಿದಷ್ಟು ಹಣವನ್ನು ಕೊಡಲೇಬೇಕಾದ ಅನಿವಾರ್ಯ ಉಂಟಾಗಿದೆ. ಆಪರೇಟರ್‌ಗೆ ಇಷ್ಟೇಕೆ ಹಣ ನೀಡಬೇಕು? ಎಂದು ಪ್ರಶ್ನಿಸಿದರೆ, ಮೇಲೆ ಕಟ್ಟಬೇಕು ಸರ್. ಇದಕ್ಕೂ ಒಬ್ಬರು ಕಾಂಟ್ರಾಕ್ಟರ್ ಇರುತ್ತಾರೆ. ಅವರು ಹೇಳಿದಷ್ಟು ಹಣ ಪಡೆಯುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದು ಜನರು ದೂರುತ್ತಿದ್ದಾರೆ.

    ಸಿಂದಗಿ ರಸ್ತೆಯಲ್ಲಿ ಇರುವ ಬಿಎಸ್‌ಎನ್‌ಎಲ್ ಕಚೇರಿ ಆವರಣದಲ್ಲಿ ಆಧಾರ್ ತಿದ್ದುಪಡಿಗಾಗಿ ಹಣ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ನಾಳೆಯೇ ಅವರ ಫ್ರಾಂಚೈಸಿ ಬದಲಾಯಿಸಿ ಬೇರೊಬ್ಬರಿಗೆ ನೀಡಲಾಗುವುದು. ಸಾರ್ವಜನಿಕರು ಆಧಾರ್ ತಿದ್ದುಪಡಿಗೆ ಹಣ ನೀಡುವ ಅವಶ್ಯಕತೆಯಿಲ್ಲ.

    ರಾಮಚಂದ್ರ ಗಡದೆ, ಕಂದಾಯ ಉಪ ವಿಭಾಗಾಧಿಕಾರಿಗಳು ಇಂಡಿ

    ಆಧಾರ್ ಕಾರ್ಡ್‌ನಲ್ಲಿ ನನ್ನ ಹೆಸರು ತಪ್ಪಾಗಿತ್ತು. ತಿದ್ದುಪಡಿ ಮಾಡಿಕೊಳ್ಳಲು ಬಂದಿದ್ದೆ 200 ರೂಪಾಯಿ ತೆಗೆದುಕೊಂಡಿದ್ದಾರೆ.

    ಶಾಂತಾಬಾಯಿ ಬಿರಾದಾರ, ಚೋರಗಿ ಗ್ರಾಮದ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts