More

    ನವದೆಹಲಿ ಪ್ರತಿನಿಧಿ ಪಾಟೀಲರಿಗೆ ಸ್ವಗ್ರಾಮದಲ್ಲಿ ಅದ್ದೂರಿ ಸನ್ಮಾನ

    ಇಂಡಿ: ತಾಲೂಕಿನ ಅಗರಖೇಡದ ಶಂಕರಗೌಡ ಪಾಟೀಲರು ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿಯಾದ ನಂತರ ಪ್ರಥಮ ಬಾರಿಗೆ ಸ್ವಗ್ರಾಮಕ್ಕೆ ಸೋಮವಾರ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ಅವರನ್ನು ಅದ್ದೂರಿಯಾಗಿ ಸ್ವಾಗತಿಸಿ, ಗೌರವಿಸಿದರು.

    ಗ್ರಾಮಸ್ಥರಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಅಗರಖೇಡ ಗ್ರಾಮ ಗಡಿ ತಾಲೂಕಿನ ಕೊನೇ ಹಳ್ಳಿಯಾಗಿದೆ. ಈ ಗ್ರಾಮದಲ್ಲಿ ಅನೇಕ ದಾರ್ಶನಿಕರು ಆಗಿ ಹೋಗಿದ್ದಾರೆ. ಅಗರಖೇಡದ ಶ್ರೀರಂಗರು ಈ ನಾಡಿಗೆ ಅನೇಕ ಕೊಡುಗೆ ನೀಡಿ ಇಂಡಿ ತಾಲೂಕನ್ನು ಹೆಸರುವಾಸಿ ಮಾಡಿದ್ದಾರೆ. ಅಂಥವರು ಜನಿಸಿದ ಈ ಗ್ರಾಮದಲ್ಲಿ ನಾನೂ ಜನಿಸಿದ್ದು ನನ್ನ ಸೌಭಾಗ್ಯ. ಹೀಗಾಗಿ ಹುಟ್ಟೂರಿನ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

    ಗ್ರಾಮದ ಶಂಕರಲಿಂಗ ದೇವಸ್ಥಾನ ಮತ್ತು ಶಂಕರಲಿಂಗ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗಾಗಿ ಗಡಿನಾಡು ಪ್ರಾಧಿಕಾರದಿಂದ 1 ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದರು.

    ಅಗರಖೇಡ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳು ಅಗರಖೇಡ ಗ್ರಾಮಕ್ಕೆ ಬಂದು ವಿದ್ಯಾಭ್ಯಾಸ ಮಾಡುತ್ತಿದ್ದು, ಅವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಸತಿ ನಿಲಯ ಮಂಜೂರು ಮಾಡಿಕೊಡುವುದಾಗಿ ಹೇಳಿದರು.

    ಗ್ರಾಮದ ಸರ್ವ ಸಮಾಜದ ಜನರು ಶಂಕರಗೌಡ ಪಾಟೀಲರನ್ನು ಸತ್ಕರಿಸಿದರು. ಗ್ರಾಪಂ ಸರ್ವ ಸದಸ್ಯರನ್ನು ಶಂಕರಗೌಡ ಪಾಟೀಲ ಸತ್ಕರಿಸಿ ಗ್ರಾಮದ ಅಭಿವೃದ್ಧಿಗೆ ಬಧ್ಧರಾಗಿರುವಂತೆ ತಿಳಿಸಿದರು.

    ತಾ.ಪಂ. ಅಧ್ಯಕ್ಷ ಅಣ್ಣಪ್ಪ ಬಿದರಕೋಟಿ, ಗ್ರಾ.ಪಂ. ಮಾಜಿ ಅಧ್ಯಕ್ಷ ವಿಠ್ಠಲಗೌಡ ಪಾಟೀಲ, ಭೀಮಣ್ಣ ಕವಲಗಿ, ಹಣಮಂತ ಖಂಡೇಕರ, ಮಲ್ಲನಗೌಡ ಬಿರಾದಾರ, ಕಾಂತುಗೌಡ ಪಾಟೀಲ, ಸಂಜೀವ ದಶವಂತ, ಗೋವಿಂದ ರಾಠೋಡ, ಭೀಮಾಶಂಕರ ಆಳುರ, ಸಂಜೀವ ಐಹೊಳೆ, ಅಶೊಕ ಕುದರೆ, ಸುನೀಲ ದೇಶಪಾಂಡೆ, ರಾಜು ಗುಂಜಟಗಿ, ಮೋಹನ ರಾಠೋಡ ಸೇರಿದಂತೆ ಮತ್ತತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts