More

    ಚುನಾವಣಾ ಠೇವಣಿ ಮೊತ್ತವನ್ನು ಹತ್ತು ಸಾವಿರ ನಾಣ್ಯಗಳ ಮೂಲಕ ಪಾವತಿಸಿದ ಸ್ವತಂತ್ರ ಅಭ್ಯರ್ಥಿ!

    ಯಾದಗಿರಿ: ಕರ್ನಾಟಕ ವಿಧಾನಸಭಾ ಚುನಾವಣೆ 2023 ರ ಮೊದಲು, ಯಂಕಪ್ಪ ಎಂಬುವರು ತಮ್ಮ ಠೇವಣಿ ಹಣವನ್ನು 10,000 ರೂಪಾಯಿಗಳನ್ನು ಸಂಪೂರ್ಣವಾಗಿ ಒಂದು ರೂಪಾಯಿ ನಾಣ್ಯಗಳಲ್ಲಿ ತಮ್ಮ ನಾಮಪತ್ರವನ್ನು ಸಲ್ಲಿಸುವಾಗ ಪಾವತಿಸಿದರು.

    ಬುಧವಾರ ಸ್ವತಂತ್ರ ಅಭ್ಯರ್ಥಿ ಯಂಕಪ್ಪ ಕರ್ನಾಟಕದ ಯಾದಗಿರಿ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭ ಯಂಕಪ್ಪ 10,000 ರೂಪಾಯಿ ಠೇವಣಿ ಹಣವನ್ನು ಸಂಪೂರ್ಣವಾಗಿ ಒಂದು ರೂಪಾಯಿ ನಾಣ್ಯಗಳ ಮೂಲಕ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೇ 10 ರಂದು ಕರ್ನಾಟಕ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಕ್ಷೇತ್ರದಾದ್ಯಂತ ಜನರಿಂದ ನಾಣ್ಯಗಳನ್ನು ಸಂಗ್ರಹಿಸಿದ್ದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts