More

    “ಪಾಪ ಅಶೋಕ್”: ಪದ್ಮನಾಭ ನಗರದಿಂದ ಸ್ಪರ್ಧೆ ಬಗ್ಗೆ ಡಿಕೆ ಸುರೇಶ್ ಹೇಳಿದ್ದಿಷ್ಟು…

    ಬೆಂಗಳೂರು: ಪದ್ಮನಾಭ ನಗರದಿಂದ ಡಿಕೆ ಸುರೇಶ್ ಸ್ಪರ್ಧೆ ಮಾಡುತ್ತಾರೆ ಎನ್ನುವ ರೀತಿಯ ಸುಳಿವನ್ನು ಡಿಕೆಶಿ ಹೇಳಿಕೆ ಮೂಲಕ ನೀಡಿದ್ದರು. ಇದೀಗ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಸುರೇಶ್, ಹಿರಿಯ ಮುಖಂಡರ ಮಾತಿಗೆ ಕಾಯುತ್ತಿದ್ದೇನೆ ಎಂದಿದ್ದಾರೆ.

    ಸುದ್ದಿಗಾರರೊಂದಿಗೆ ಸಂಸದ ಡಿಕೆ ಸುರೇಶ್ “ಮಲ್ಲಿಕಾರ್ಜುನ ಖರ್ಗೆ ರಾಹುಲ್ ಗಾಂಧಿ ಸೂಚನೆಗಾಗಿ ಕಾಯ್ತಿದ್ದೇನೆ. ಚರ್ಚೆಗಳು ನಡೆಯುತ್ತಿವೆ. ರಘುನಾಥ ನಾಯ್ಡು ಕೂಡ ನನ್ನ ಆಹ್ವಾನ ಮಾಡಿದ್ದಾರೆ. ನಾನು ಇವತ್ತು ಪಕ್ಷಕ್ಕಿಂತ ಹೆಚ್ಚಾಗಿ ಎಐಸಿಸಿ ಅಧ್ಯಕ್ಷರು ಹಾಗೂ ರಾಹುಲ್ ಸ್ಪರ್ಧೆ ಬಗ್ಗೆ ತಿಳಿಸಬೇಕಿದೆ. ನಾಮಿನೇಷನ್ ಫೈಲ್ ಮಾಡಬೇಕು ಅಂತ ಹೇಳಿದ್ದಾರೆ

    ಎಲ್ಲಿಗೆ ಹೋಗಬೇಕು ಗೊತ್ತಿಲ್ಲ. ಪಕ್ಷದ ವರಿಷ್ಟರ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದೆ. ರಾಜಕಾರಣ ಲೆಕ್ಕಾಚಾರ ಒಂದಿಷ್ಟು ಆಗಿದೆ. ನನಗೆ ಅಶೋಕ್ ಅವರ ಸ್ಥಿತಿ ಬಗ್ಗೆ ಮಾಹಿತಿ ಇಲ್ಲ. ನಮ್ಮ ಪಕ್ಷ ಕಾರ್ಯಕರ್ತ ಆದೇಶ ಬಹಳ ಮುಖ್ಯ ಆಗ್ತದೆ. ನೋ ಡ್ಯೂ ಸರ್ಟಿಫಿಕೇಟ್ ದೆಹಲಿಯ ಇಂದ ಬೇಕಾಗುತ್ತದೆ ತರಿಸಿಕೊಂಡಿದ್ದೇನೆ. ಎಲ್ಲ ವ್ಯವಸ್ಥೆ ಆಗ್ತಾ ಇದೆ. ಅಭ್ಯರ್ಥಿ ಬದಲಾವಣೆಗೆ ನಾಳೆ ಸಾಯಂಕಾಲ ಮೂರು ಗಂಟೆ ತನಕ ಅವಕಾಶ ಇರುತ್ತದೆ.

    “ಪಾಪ ಅಶೋಕ್”!

    ನಾಳೆ ಗ್ರಹಣ ಅಮವಾಸ್ಯೆ ಚೆನ್ನಾಗಿದೆ ಅಂತ ನನಗೆ ಎಲ್ಲ ಹೇಳಿದ್ದಾರೆ. ಮಂಡ್ಯದಿಂದ ಸ್ಪರ್ಧೆಯಾ ಎಂಬ ಬಗ್ಗೆಯೂ ಮಾಹಿತಿ ಇಲ್ಲ. ನನ್ನ ಕ್ಷೇತ್ರದಲ್ಲಿಯೇ ಅನೇಕರು ನಿಂತುಕೊಳ್ಳಿ ಅಂತ ಹೇಳಿದ್ದಾರೆ. ವೈಯಕ್ತಿಕವಾಗಿ ಚುನಾವಣೆಗೆ ನಿಲ್ಲುವ ಮನಸ್ಸಿಲ್ಲ. ಆದರೆ ಕಾರ್ಯಕರ್ತರು ಮುಖಂಡರ ಅಭಿಪ್ರಾಯ ಮುಖ್ಯ. ಡಿಕೆಶಿ ಹೇಳಿದ ಹಾಗೆ ಶುಭ ಘಳಿಗೆ ಶುಭ ಸಮಯದಲ್ಲಿ ಎಲ್ಲವೂ ನಡೆಯುತ್ತಿರುತ್ತದೆ. ಇಂದು ಏನೇ ತೀರ್ಮಾನ ತೆಗೆದುಕೊಂಡರೂ ಇಂದು ರಾತ್ರಿ ನಾಳೆಯೊಳಗೆ ತೆಗೆದುಕೊಳ್ಳಬೇಕು” ಎಂದಿದ್ದಾರೆ.

    ಈ ಸಂದರ್ಭ ಸುದ್ದಿಗಾರರು “ಅಶೋಕ್ ಭಯ ಬೀಳಿಸುವ ತಂತ್ರವಾ?” ಎಂದು ಪ್ರಶ್ನೆ ಕೇಳಿದ್ದು ಅದಕ್ಕೆ “ಪಾಪ ಅಶೋಕ್” ಎಂದು ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts