More

    ಯಾರೋ ಒಬ್ಬರಿಂದ ಸ್ವಾತಂತ್ರ್ಯ ಬಂದಿದೆ ಎಂಬ ಪರಿಕಲ್ಪನೆ ತಪ್ಪು: ಸಿಎಂ ಬೊಮ್ಮಾಯಿ ಹೀಗಂದಿದ್ದೇಕೆ?

    ಬೆಂಗಳೂರು: ಯಾರೋ ಒಬ್ಬರಿಂದ ಸ್ವಾತಂತ್ರ್ಯ ಬಂದಿದೆ ಎಂಬ ಪರಿಕಲ್ಪನೆ ತಪ್ಪು ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟಿದ್ದಾರೆ. ಮಾತ್ರವಲ್ಲ, ಸ್ವಾತಂತ್ರ್ಯಕ್ಕಾಗಿ ಅನೇಕ ಮಂದಿ ಪ್ರಾಣ ಬಲಿದಾನ ಮಾಡಿದ್ದಾರೆ. 75ನೇ ಸ್ವಾತಂತ್ರ್ಯೋತ್ಸವ ಅನಾಮಧೇಯ ಹೋರಾಟಗಾರರಿಗೆ ಮೀಸಲಿಟ್ಟಿದ್ದು ಎಂಬುದಾಗಿಯೂ ಅವರು ಹೇಳಿದ್ದಾರೆ.

    ಅಷ್ಟಕ್ಕೂ ಸಿಎಂ ಹೀಗೆ ಹೇಳುವುದಕ್ಕೂ ಕಾರಣವಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಲುವಾಗಿ ನೀಡಲಾದ ಸರ್ಕಾರಿ ಜಾಹೀರಾತಿನಲ್ಲಿ ಜವಹರಲಾಲ್​ ನೆಹರು ಅವರ ಫೋಟೋ ಬಿಟ್ಟಿರುವುದಕ್ಕೆ ಪ್ರತಿಕ್ರಿಯಿಸುತ್ತ ಅವರು ಈ ಮಾತುಗಳನ್ನು ಹೇಳಿದರು. ಅವರಿಗೆ ಒಂದು ಪ್ರಶ್ನೆ ಕೇಳ್ತೀನಿ, ಅಂಬೇಡ್ಕರ್ ಅವರನ್ನೇ ಮರೆಸಿಬಿಟ್ಟಿದ್ರಲ್ಲ. ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರನ್ನೇ ಎಲ್ಲೂ ಇಲ್ಲದಂಗೆ ಮಾಡಿದ್ರು. ಆವಾಗ ಇವರಿಗೆ ನೆನಪಾಗಿಲ್ವಾ!? ಎಂದು ನೆಹರು ಭಾವಚಿತ್ರದ ವಿಚಾರವಾಗಿ ತಕರಾರು ತೆಗೆದವರನ್ನು ಅವರನ್ನು ಪ್ರಶ್ನಿಸಿದ್ದಾರೆ.

    ದೇಶಕ್ಕೆ ಸ್ವಾತಂತ್ರ್ಯ ಹೋರಾಟ ಮಾಡಿದ ವಲ್ಲಭಭಾಯ್ ಪಟೇಲ್ ಅವರನ್ನೂ ಮರೆಸಿದ್ರು. ಯಾವುದೇ ಒಬ್ಬರಿಂದ ಸ್ವಾತಂತ್ರ್ಯ ಬಂದಿದೆ ಎನ್ನುವ ಪರಿಕಲ್ಪನೆ ತಪ್ಪು. 75 ವರ್ಷ ರಸ್ತೆಗೆ ಎಲ್ಲೇ ಹೋದರೂ ನೆಹರು ಹೆಸರು ಇಟ್ಟಿದ್ದೇವೆ. ಜಾಹೀರಾತಿನಲ್ಲೂ ನೆಹರು ಇದ್ದಾರೆ. ಆದರೂ ಯಾಕಿಷ್ಟು ಗಾಬರಿ ಕಾಂಗ್ರೇಸ್ಸಿಗರಿಗೆ..!? ಎಂದು ಸಿಎಂ ಪ್ರಶ್ನೆ ಮಾಡಿದ್ದಾರೆ.

    ಅಂಬೇಡ್ಕರ್, ಭಗತ್ ಸಿಂಗ್, ಸುಭಾಶ್ಚಂದ್ರ ಬೋಸ್, ಚಂದ್ರಶೇಖರ್ ಅಜಾದ್ ಇವರಿಗೆ ನೆನಪಾಗಿಲ್ಲ..!? ನಿಜವಾದಂತಹ ಹೋರಾಟಗಾರರ ಸವಿನೆನಪು ಕರ್ನಾಟಕದಲ್ಲಿ ಮಾಡಿಕೊಟ್ಟಿದ್ದೇವೆ. ಅವರಿಗೆ ನಮನ ಸಲ್ಲಿಸಿದ್ದು ಕರ್ನಾಟಕದಲ್ಲಿ ಮಾತ್ರ. ಹಿಂದೆಂದೂ ನೆನಪು ಮಾಡಿಕೊಂಡ ದಾಖಲೆಗಳು ಇಲ್ಲ. ಎಲ್ಲರನ್ನು ನೆನಪು ಮಾಡಿಕೊಂಡಿದ್ದೇವೆ ಅಂತ ಅಭಿನಂದನೆ ಸಲ್ಲಿಸಬೇಕು. ದಾದಾಬಾಯಿ ನವರೋಜಿ, ಹರ್ಡೇಕರ್ ಅವರನ್ನು ನೆನಪು ಮಾಡಿಕೊಂಡಿದ್ದೇವೆ. ಅವರೆಲ್ಲ ಕಾಂಗ್ರೆಸ್​ನವರೇ, ನಾವೇನು ಭೇದಭಾವ ಮಾಡಿಲ್ಲ ಎಂದು ಸಿಎಂ ಸಮಜಾಯಿಷಿ ನೀಡಿದ್ದಾರೆ.

    ಹಿಮಪಾತಕ್ಕೆ ಸಿಲುಕಿದ್ದ ಯೋಧನ ಅವಶೇಷ 38 ವರ್ಷಗಳ ಬಳಿಕ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts