More

    ಸಹಬಾಳ್ವೆಗೆ ಮಂಡ್ಯ ಹೆಸರುವಾಸಿ: ಕಂದಾಯ ಸಚಿವ ಆರ್.ಅಶೋಕ್ ಬಣ್ಣನೆ

    ಮಂಡ್ಯ: ಸಾಮರಸ್ಯ ಮತ್ತು ಸಹಬಾಳ್ವೆಗೆ ಜಿಲ್ಲೆ ಬಹುದೊಡ್ಡ ಉದಾಹರಣೆ. ಅತ್ಯಂತ ಸಂಪನ್ನ ಜನರ ಬಹುದೊಡ್ಡ ಸಂಸ್ಕೃತಿಯೇ ಇದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
    ನಗರದ ಸರ್.ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ನಗರಸಭೆ ವತಿಯಿಂದ ಸೋಮವಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು. ಅದ್ಭುತ ಎನಿಸುವ ಮಾನವ ಸಂಪನ್ಮೂಲವಿದೆ ಜಿಲ್ಲೆಯಲ್ಲಿದೆ. ಕೃಷಿಯ ಅಭ್ಯುದಯಕ್ಕೆ, ಸಾಹಸ ಕ್ರೀಡೆಗೆ, ಉದ್ದಿಮೆಗಳ ಸ್ಥಾಪನೆಗೆ, ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ, ಪರಿಸರದ ಸಿರಿಯನ್ನು ಹೆಚ್ಚಿಸಲಿಕ್ಕೆ ಬೇಕಾದ ಎಲ್ಲ ಅವಕಾಶಗಳನ್ನು ಮಂಡ್ಯ ತನ್ನ ಮಡಿಲಿನಲ್ಲಿ ತುಂಬಿಕೊಂಡಿವೆ ಎಂದು ಬಣ್ಣಿಸಿದರು.
    ಮೈಸೂರು ಸಕ್ಕರೆ ಕಾರ್ಖಾನೆ 2019-20ನೇ ಸಾಲಿನಿಂದ ಸ್ಥಗಿತಗೊಂಡಿತ್ತು. ರಾಜ್ಯ ಸರ್ಕಾರ 2022-23ನೇ ಸಾಲಿನ ಬಜೆಟ್‌ನಲ್ಲಿ 50 ಕೋಟಿ ರೂ ಮಂಜೂರು ಮಾಡಿದೆ. ಇದರೊಂದಿಗೆ ಕಾರ್ಖಾನೆಯನ್ನು ಪ್ರಾರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಇನ್ನು ರೈತರ ಮಕ್ಕಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ರೈತ ವಿದ್ಯಾನಿಧಿ ಯೋಜನೆ ಜಾರಿಗೆ ತರಲಾಗಿದ್ದು, ಜಿಲ್ಲೆಯಲ್ಲಿ 28,988 ವಿದ್ಯಾರ್ಥಿಗಳಿಗೆ 11.96 ಕೋಟಿ ರೂ ಶಿಷ್ಯವೇತನ ನೀಡಲಾಗಿದೆ. ಅಂತೆಯೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 2,70,572 ಫಲಾನುಭವಿಗಳಿಗೆ ತಲಾ 6 ಸಾವಿರ ರೂ ಸಹಾಯಧನ ನೀಡಲಾಗಿದೆ ಎಂದರು.
    ಶಾಸಕ ಎಂ.ಶ್ರೀನಿವಾಸ್, ಸಂಸದೆ ಸುಮಲತಾ, ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಉಪಾಧ್ಯಕ್ಷೆ ಇಷ್ರತ್ ಫಾತಿಮಾ, ಮುಡಾ ಅಧ್ಯಕ ಶ್ರೀನಿವಾಸ್, ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿಲ್ಲಾ ಎಸ್ಪಿ ಎನ್.ಯತೀಶ್, ಜಿಪಂ ಸಿಇಒ ಶಾಂತಾ ಎಲ್. ಹುಲ್ಮನಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಎಸಿ ಆರ್.ಐಶ್ವರ್ಯಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts