More

    ಹಳೆ ಪಿಂಚಣಿಗೆ ಒತ್ತಾಯಿಸಿ 19ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ

    ಚಿತ್ರದುರ್ಗ: ಎನ್‌ಪಿಎಸ್ ರದ್ದುಪಡಿಸಿ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ರಾಜ್ಯಸರ್ಕಾರವನ್ನು ಒತ್ತಾಯಿಸಿ ಡಿ.19ರಿಂದ ಬೆಂಗಳೂ ರಿನ ಫ್ರೀಡಂ ಪಾರ್ಕಿನಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದೆಂದು ರಾಜ್ಯಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ.ಎಸ್.ಆರ್.ಲೇಪಾಕ್ಷ ಹೇಳಿದರು.

    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,2006ರಿಂದ ಜಾರಿಯಾಗಿರುವ ಎನ್‌ಪಿಎಸ್‌ನ್ನು ವಿರೋಧಿಸಿ ನಿಗಮ,ಮಂಡ ಳಿ,ಅನುದಾನಿತ ಶಾಲಾ-ಕಾಲೇಜು ಹಾಗೂ ಸರ್ಕಾರಿ ನೌಕರರು ಈಗಾಗಲೇ ಹತ್ತಾರು ಹೋರಾಟಗಳನ್ನು ನಡೆಸಿದ್ದರೂ ರಾಜ್ಯಸರ್ಕಾರ ನಮ್ಮ ಬೇಡಿಕೆ ಕಡೆಗಣಿಸಿದೆ.

    ಲಕ್ಷಾಂತರ ನೌಕರರಿಗೆ ಮರಣಶಾಸನವಾಗಿರುವ ಎನ್‌ಪಿಎಸ್‌ನ್ನು ರದ್ದುಪಡಿಸಿ,ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ನಮ್ಮ ಏಕೈ ಕ ಬೇಡಿಕೆಯಾಗಿದೆ ಎಂದ ಅವರು, ಬೇಡಿಕೆ ಈಡೇರಿಕೆಗೆಗೆ ಆಗ್ರಹಿಸಿ ಈವರೆಗೆ ನಡೆಸಿದ ನಾನಾ ಹೋರಾಟಗಳನ್ನು ವಿವರಿಸಿ ದರು.

    ಸೇವೆಯಿಂದ ನಿವೃತ್ತರಾಗುವ ನೌಕರರಿಗೆ ಸಾಮಾಜಿಕ-ಆರ್ಥಿಕ ಶಕ್ತಿಯನ್ನು ಭರಿಸಬೇಕೆಂದು ಸುಪ್ರೀಂಕೋರ್ಟಿನ ತೀರ್ಪಿದ್ದರೂ ಸ ರ್ಕಾರ ಅದನ್ನು ಕಡೆಗಣಿಸಿದೆ. ದೇಶದ ಹಲವು ರಾಜ್ಯಗಳು ನೌಕರರ ಆಗ್ರಹಕ್ಕೆ ಮಣಿದು ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಿವೆ. ಆದ್ದರಿಂ ದ ನಮ್ಮ ಬೇಡಿಕೆಯನ್ನೂ ಈಡೇರಿಸಬೇಕೆಂದು ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದರು.

    ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ ಜಿ.ಎಸ್.ತಿಪ್ಪೇಸ್ವಾಮಿ ಮಾತನಾಡಿ,ಎನ್‌ಪಿಎಸ್ ಅಥವಾ ಒಪಿ ಎಸ್ ವ್ಯವಸ್ಥೆಯೇ ನಮ್ಮ ನೌಕರರಿಗೆ ಇಲ್ಲ. ಪಿಂಚಣಿ ಸೌಲಭ್ಯಕ್ಕಾಗಿ ಆಗ್ರಹಿಸಿ ಬೆಂಗಳೂರಲ್ಲಿ ಕಳೆದ 72ದಿನಗಳಿಂದ ಹೋರಾಟವನ್ನು ನಡೆಸಿ ಕೊಂಡು ಬಂದಿದ್ದೇವೆ ಎಂದರು. ಆರ್.ಮಾರುತೇಶ್, ಕೋಮಲ್‌ಕುಮಾರ್,ತಿಪ್ಪೇಸ್ವಾಮಿ,ಮಮತಾ,ಮಹೇಶ್ವರಪ್ಪ ಟಿ.ಕೃಷ್ಣಮೂರ್ತಿ, ರವಿಕುಮಾರ್,ಸಿ.ಹನುಮಂತಪ್ಪ ಹಾಗೂ ಪರಮೇಶ್ವರಪ್ಪ ಇದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts