More

    ಹೊಸ ಮೀಮ್ಸ್​ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ವಿರಾಟ್​ ಕೊಹ್ಲಿಯಿಂದ ಸರ್ಪ್ರೈಸ್​ ಗಿಫ್ಟ್​!

    ನವದೆಹಲಿ: ಟಿ20 ಹಾಗೂ ಏಕದಿನ ಸರಣಿ ಮುಗಿಸಿ ಟೆಸ್ಟ್​ ಸರಣಿಗಾಗಿ ಟೀಮ್​ ಇಂಡಿಯಾ ನ್ಯೂಜಿಲೆಂಡ್​ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದೆ. ಇದರ ನಡುವೆ ನಾಯಕ ವಿರಾಟ್​ ಕೊಹ್ಲಿ ತಂಡದ ಸಹ ಆಟಗಾರರಾದ ಮಹಮ್ಮದ್​ ಶಮಿ ಮತ್ತು ಯುವ ಆರಂಭಿಕ ಆಟಗಾರ ಪೃಥ್ವಿ ಷಾ ಅವರೊಡನೆ ತೆಗೆದುಕೊಂಡಿರುವ ಫೋಟೋವನ್ನು ಭಾನುವಾರ ಟ್ವೀಟ್​ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

    ಮೈದಾನದಿಂದಾಚೆಗೆ ವಿರಾಮದ ಸಮಯದಲ್ಲಿ ಕೊಹ್ಲಿ ಅವರು ಜಾಲತಾಣದಲ್ಲಿ ತಮ್ಮ ಉತ್ತಮ ಕ್ಷಣಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ. ಇದೀಗ ಕೊಹ್ಲಿ ಶೇರ್​ ಮಾಡಿರುವ ಫೋಟೋ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದು, ನೆಟ್ಟಿಗರು ಬಗೆಬಗೆಯ ಮೀಮ್ಸ್​ಗಳನ್ನು ಹರಿಬಿಡುವ ಮೂಲಕ ಜನರನ್ನು ಮತ್ತಷ್ಟು ನಗೆಗಡಲಲ್ಲಿ ತೇಲಿಸುತ್ತಿದ್ದಾರೆ.

    ಅಂಥದ್ದೇನಿದೆ ಫೋಟೋದಲ್ಲಿ ಅಂದರೆ ಕೊಹ್ಲಿ, ಶಮಿ ಮತ್ತು ಪೃಥ್ವಿ ವಿಲಕ್ಷಣ ಮುಖಭಾವದೊಂದಿಗೆ ಕ್ಯಾಮರಾಗೆ ಫೋಸ್​ ನೀಡಿದ್ದಾರೆ. ನಿಜಕ್ಕೂ ನೋಡಲು ಒಂದು ರೀತಿಯ ಕುಚೇಷ್ಟೆ ಮಾದರಿಯಲ್ಲಿದೆ. ಹೀಗಾಗಿ ಫೋಟೋ ನೋಡಿದ ನೆಟ್ಟಿಗರು ಸಹ ಮೀಮ್ಸ್​ ಮೂಲಕ ಮತ್ತಷ್ಟು ವಿನೋದವನ್ನು ಬೆರೆಸಿದ್ದಾರೆ. ಹೀಗಾಗಿ ನೋಡುಗರಿಗೆ ಫೋಟೋ ಇಷ್ಟವಾಗದೇ ಇರದು. ಇನ್ನು ಫೋಟೋ ಕುರಿತು “ಹೊಸ ಪೋಸ್ಟ್​, ಸುಂದರವಾದ ದೋಸ್ತ್​” ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

    ಇನ್ನು ಕ್ರಿಕೆಟ್​ ವಿಚಾರಕ್ಕೆ ಬಂದರೆ 5 ಪಂದ್ಯಗಳ ಟಿ20 ಸರಣಿಯನ್ನು ಟೀಮ್​ ಇಂಡಿಯಾ ವಶಪಡಿಸಿಕೊಂಡಿದೆ. ಆದರೆ, 3 ಪಂದ್ಯಗಳ ಏಕದಿನ ಸರಣಿಯನ್ನು ಕೈಚೆಲ್ಲಿದ್ದು, ಫೆ. 21 ರಿಂದ 24ರವರೆಗೂ ಮೊದಲ ಟೆಸ್ಟ್​ ಪಂದ್ಯ ನಡೆಯಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts