More

    ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ ಬೆಳೆಸಿ

    ಶಿವಮೊಗ್ಗ: ಮಕ್ಕಳಲ್ಲಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಕುವೆಂಪು ವಿವಿ ಎನ್‌ಎಸ್‌ಎಸ್ ಸಂಯೋಜನಾಽಕಾರಿ ಡಾ. ಶುಭಾ ಮರವಂತೆ ಹೇಳಿದರು.
    ನಗರದ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ವೇದಿಕೆಯ ವಾರ್ಷಿಕೋತ್ಸವ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿ, ಇಂದು ಸಂಸ್ಕೃತಿ ಮರೆಯಾಗುತ್ತಿದೆ. ನಮ್ಮ ಯುವಕ- ಯುವತಿಯರು ಹಿರಿಯರಿಗೆ ಗೌರವ ಕೊಡುವುದರಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಆದರೆ ಭಾರತೀಯ ಸಂಸ್ಕೃತಿಯಲ್ಲಿ ಪರಸ್ಪರರನ್ನು ಗೌರವಿಸುವುದು ವಿಶೇಷವಾಗಿದ್ದು ಇನ್ಯಾವ ಸಂಸ್ಕೃತಿಯಲ್ಲೂ ಇದು ಕಾಣಸಿಗುವುದಿಲ್ಲ ಎಂದರು.
    ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನ ನೀಡಲಾಗಿದೆ. ವಚನಕಾರರ ಕಾಲದಲ್ಲಿ ಮಹಿಳೆಯರ ಗೌರವ ಮತ್ತಷ್ಟು ಇಮ್ಮಡಿಸಿತ್ತು. ನಮ್ಮ ಮಾತಿಗೂ ಒಂದು ಸಂಸ್ಕೃತಿ ಇದೆ ಎಂದು ಕಲಿಸಿಕೊಟ್ಟ ಕಾಲವದು. ಅಕ್ಕಮಹಾದೇವಿಯಂತಹ ವಚನಕಾರರು, ಮಹಿಳೆಯರ ಗೌರವವನ್ನು ಹೆಚ್ಚಿಸಿದ್ದರು. ಹದಿಹರೆಯ ಕಾಲದಲ್ಲಿ ಜಗತ್ತು ಸುಂದರವಾಗಿ ಕಾಣುತ್ತದೆ. ಆದರೆ ನಮ್ಮ ವಿದ್ಯಾರ್ಥಿಗಳು ಭ್ರಮೆಯಲ್ಲಿ ಬದುಕದೆ ವಾಸ್ತವದ ಸತ್ಯ ತಿಳಿದು ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂದರು.
    ಪ್ರಾಚಾರ್ಯ ಕೆ.ಎಚ್.ರಾಜು ಮಾತನಾಡಿ, ಶಿಕ್ಷಣ ಮಾನವೀಯ ಪ್ರe್ಞೆಯನ್ನು ಹೆಚ್ಚಿಸುತ್ತದೆ. ಮಹನೀಯರು ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಸ್ಥಾನಮಾನ ನೀಡಿದ್ದಾರೆ. ವಿದ್ಯಾರ್ಥಿಗಳು ಮತ್ತೊಬ್ಬರನ್ನು ಪ್ರಭಾವಿಸುವಂತಿರಬೇಕು. ದೊಡ್ಡ ಕನಸುಗಳನ್ನು ಕಾಣಬೇಕು. ಬಡತನವನ್ನು ಮೀರಿ ಬೆಳೆಯಬೇಕು. ಇಂದು ಸಾತ್ವಿಕ ಶಿಕ್ಷಣದ ಅವಶ್ಯಕತೆ ಇದೆ. ಇದಕ್ಕಾಗಿ ಒಳ್ಳೆಯ ಪುಸ್ತಕಗಳನ್ನು ಓದಬೇಕು. ಪುಸ್ತಕ ನಮ್ಮ ಅತ್ಯುತ್ತಮ ಗೆಳೆಯ ಎಂದು ಹೇಳಿದರು.
    ಕಾಲೇಜಿನ ಗೌರವಾಧ್ಯಕ್ಷ ಕೆ.ಸಿ.ನಾಗರಾಜ್, ನಿರ್ದೇಶಕ ಜಡೇದ ಸಿದ್ಧಪ್ಪ, ಜಿ.ಲತಾ, ಅಂಬಿಕಾ, ಪ್ರಿಯಾ, ವೀರೇಶ್, ಸುಪ್ರಭಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts