More

    ತಂತ್ರಜ್ಞಾನದ ಅರಿವು ಹೆಚ್ಚಿಸಿಕೊಳ್ಳಿ

    ಚಿತ್ರದುರ್ಗ: ತಂತ್ರಜ್ಞಾನವನ್ನು ಹೆಚ್ಚು ಅರಿತು, ಅದನ್ನು ಸದ್ಬಳಕೆ ಮಾಡಿಕೊಳ್ಳಲು ಅಂಗವಿಕಲರು ಆಸಕ್ತಿ ತೋರಬೇಕು ಎಂದು ರಾಜ್ಯ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಮಾಜಿ ಆಯುಕ್ತ ಕೆ.ವಿ.ರಾಜಣ್ಣ ಸಲಹೆ ನೀಡಿದರು.

    ಅಂಗವಿಕಲರು ಮತ್ತು ಆರೈಕೆದಾರರ ಸಮಗ್ರ ಪುನಶ್ವೇತನದ ಬಗ್ಗೆ ಪುನಶ್ಚೇತನ ಕಾರ‌್ಯಕರ್ತರಿಗೆ ಜಿಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಅಂಗವಿಕಲ ಮಕ್ಕಳಲ್ಲಿ ಪಾಲಕರು ಆತ್ಮವಿಶ್ವಾಸ ಬಿತ್ತಲು ಶ್ರಮಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಅಂಗವಿಕಲರು ಪಡೆದುಕೊಳ್ಳ ಬೇಕು. ತಂತ್ರಜ್ಞಾನ ಆಧರಿತ ಉನ್ನತ ಶಿಕ್ಷಣವನ್ನು ತಪ್ಪದೆ ಪಡೆದುಕೊಳ್ಳಬೇಕು. ವಿಜ್ಞಾನ ಮತ್ತು ಗಣಿತದಲ್ಲಿ ಉತ್ತಮ ಮತ್ತು ಹೆಚ್ಚಿನ ಅಧ್ಯಯನ ಮಾಡುವುದೊಂದಿಗೆ ಒಳ್ಳೆಯ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಿದೆ. ಸಾಂಸ್ಕೃತಿ ಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ಅಂಗವಿಕಲರು ತಮ್ಮ ಹಕ್ಕುಗಳನ್ನು ಅರಿತು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್ ಮಾತನಾಡಿ, ಪುನಶ್ಚೇತನ ಮತ್ತು ಪುನರ್ವಸತಿ ಕಾರ‌್ಯಕರ್ತರು ಗ್ರಾಪಂ ವ್ಯಾಪ್ತಿಗಳಲ್ಲಿ ಅಂಗವಿಕಲರನ್ನು ಆಧರಿಸಿ ಪಟ್ಟಿ ಸಿದ್ದಪಡಿಸಿಕೊಂಡು ಕಾರ‌್ಯ ನಿರ್ವಹಿಸ ಬೇಕು. ಶಿಕ್ಷಣದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ, ಅವರನ್ನು ಮುಖ್ಯವಾಹಿನಿಗೆ ತರಬೇಕು. ಸೌಲಭ್ಯಗಳನ್ನು ಪಡೆದ ಫಲಾನುಭವಿಗಳ ಪಟ್ಟಿಯನ್ನು ಹೊಂದಿರಬೇಕು ಎಂದು ಹೇಳಿದರು.

    ಸಂಪನ್ಮೂಲ ವ್ಯಕ್ತಿ ನಟೇಶ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ, ನರೇಂದ್ರ ಫೌಂಡೇಶನ್ ಕಾರ‌್ಯಕ್ರಮ ಸಂಯೋಜಕ ಕೆ.ಎನ್.ಸುದೀಂದ್ರ ಕುಮಾರ್ ಇದ್ದರು. ನರಸಿಂಹಮೂರ್ತಿ ಸ್ವಾ ಗತಿಸಿದರು. ಮೈಲಾರಪ್ಪ ವಂದಿಸಿದರು. ಜಿ.ಹರಿಪ್ರಸಾದ್ ನಿರೂಪಿಸಿದರು.

    ಜಿಲ್ಲಾಆಡಳಿತ, ಜಿಪಂ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನರೇದ್ರ ಫೌಂಡೇಶನ್, ಕೇರರ್ಸ್‌ ವರ್ಲ್ಡ್‌ವೈಡ್ ಹಾಗೂ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts