More

    ನಿರ್ಲಕ್ಷೃದಿಂದ ಸೋಂಕಿತರ ಸಂಖ್ಯೆ ಹೆಚ್ಚಳ

    ಕೆ.ಆರ್.ನಗರ: ಸರ್ಕಾರ ಕರೊನಾ ಸೋಂಕು ತಡೆಗಟ್ಟಲು ಹಲವು ನಿಯಮ ರೂಪಿಸಿದ್ದರೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿರಲು ಜನರ ನಿರ್ಲಕ್ಷೃ ಮತ್ತು ನಿಯಮ ಉಲ್ಲಂಘನೆಯೇ ಕಾರಣ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ರಮೇಶ್ ಅಭಿಪ್ರಾಯಪಟ್ಟರು.

    ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಯುವ ರೈತ ವೇದಿಕೆ ವತಿಯಿಂದ ಆಯೋಜಿಸಿದ್ದ ಕರೊನಾ ವೈರಸ್ ಕುರಿತ ದುಂಡುಮೇಜಿನ ಸಭೆ ಮತ್ತು ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿ, ಜನ ಸಾಮಾನ್ಯರಲ್ಲಿ ಕೋವಿಡ್-19 ವೈರಸ್ ಹರಡುವ ಬಗ್ಗೆ ಹೆಚ್ಚು ಅರಿವಾದಾಗ ಸೋಂಕಿತರ ಪ್ರಮಾಣ ಕಡಿಮೆಯಾಗಲಿದೆ ಎಂದು ಹೇಳಿದರು.

    ಕರೊನಾ ನಿಯಂತ್ರಣದಲ್ಲಿ ಮತ್ತು ಸೋಂಕಿತರಿಗೆ ಚಿಕಿತ್ಸೆ ನೀಡಿ ಸುಧಾರಿಸುವಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮ ಹಾಗೂ ತಡೆಗಟ್ಟುವಲ್ಲಿ ಮಾದ್ಯಮಗಳ ಕಾಳಜಿ ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

    ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎನ್. ಪ್ರಸನ್ನ ಕರೊನಾ ಲೋಗೋ ಬಿಡುಗಡೆ ಮಾಡಿದರು. ಸ್ವರಾಜ್ ಇಂಡಿಯಾ ಪಕ್ಷದ ತಾಲೂಕು ಅಧ್ಯಕ್ಷ ಗರುಡಗಂಭದ ಸ್ವಾಮಿ, ಸಾಹಿತಿ ಭೇರ್ಯ ರಾಮ್‌ಕುಮಾರ್, ಶಿಕ್ಷಕರಾದ ಕಲ್ಯಾಣಪುರ ರಾಜಶೇಖರ್, ಕೆ.ಪಿ. ಭಾರತಿ, ಯುವ ರೈತ ವೇದಿಕೆ ಅಧ್ಯಕ್ಷ ರಾಮ್ ಪ್ರಸಾದ್, ನಿವೃತ್ತ ಸಿಡಿಪಿಒ ಲಿಲಾಂಬಿಕೆ, ಎಚ್.ಎನ್. ಸವಿತಾ ಸೇರಿದಂತೆ 14 ಸಾಹಿತಿಗಳು ಕರೊನಾ ಜಾಗೃತಿ ಬಗ್ಗೆ ಕವನ ವಾಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts