More

    ನೈಋತ್ಯ ರೈಲ್ವೆಯ ಆದಾಯ ಹೆಚ್ಚಳ

    ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯದ ಒಟ್ಟು ಆದಾಯ 2023ರ ಏಪ್ರಿಲ್​ನಿಂದ 2024ರ ಫೆಬ್ರವರಿ ಅವಧಿಯಲ್ಲಿ 6,970.18 ಕೋಟಿ ರೂ.ಗಳಾಗಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 6,274.16 ರೂ. ಗಳಾಗಿತ್ತು. ಅಂದರೆ ವಲಯದ ಆದಾಯದಲ್ಲಿ ಶೇ. 11.09 ರಷ್ಟು ಹೆಚ್ಚಾಗಿದೆ.

    ನೈಋತ್ಯ ರೈಲ್ವೆಯ ಮೂಲ ಪ್ರಯಾಣಿಕರ ಆದಾಯವು 2023 ರ ಏಪ್ರಿಲ್ ನಿಂದ 2024ರ ಫೆಬ್ರವರಿವರೆಗೆ 2,837.87 ಕೋಟಿ ರೂ.ಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 2,514.44 ಕೋಟಿ ರೂ.ಗಳಿತ್ತು. ಈ ಆದಾಯ ಶೇ. 12.86 ರಷ್ಟು ಹೆಚ್ಚಳವಾಗಿದೆ.

    ಸರಕು ಸಾಗಣೆ ಆದಾಯವು ಗಮನಾರ್ಹ ಬೆಳವಣಿಗೆ ಕಂಡಿದ್ದು, ಈ ಫೆಬ್ರುವರಿವರೆಗೆ 4,590.52 ಕೋಟಿ ರೂ. ತಲುಪಿದೆ. ಹಿಂದಿನ ವರ್ಷದ 4,167.88 ಕೋಟಿ ರೂ.ಗಳಿಗೆ ಹೋಲಿಸಿದರೆ ಶೇ. 10.14 ರಷ್ಟು ಗಮನಾರ್ಹ ಹೆಚ್ಚಳ ಕಂಡಿದೆ.

    ಸರಕು ಸಾಗಣೆಯು ಈ ಫಬ್ರುವರಿವರೆಗೆ 45.32 ಮಿಲಿಯನ್ ಟನ್ ಆಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ 41.73 ಮಿಲಿಯನ್ ಟನ್ ಗೆ ಹೋಲಿಸಿದರೆ ಶೇ. 8.60ರಷ್ಟು ಗಣನೀಯ ಬೆಳವಣಿಗೆ ದಾಖಲಿಸಿದೆ.

    ಬಂಡವಾಳ ವೆಚ್ಚ (ಕ್ಯಾಪೆಕ್ಸ್) ಗಮನಾರ್ಹ ಏರಿಕೆ ಕಂಡಿದ್ದು, ಇದೇ ಫೆಬ್ರುವರಿವರೆಗೆ 6,462.40 ಕೋಟಿ ರೂ. ತಲುಪಿದೆ. ಇದು ಹಿಂದಿನ ವರ್ಷದ 4,075.65 ಕೋಟಿ ರೂ.ಗಳಿಂದ ಶೇ.58.56ರಷು ್ಟಮನಾರ್ಹಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ.

    ಮೂರು ವಿಭಾಗಗಳ ವ್ಯಾಪಾರ ಅಭಿವೃದ್ಧಿ ಘಟಕಗಳ ವ್ಯಾಪಕ ಮಾರುಕಟ್ಟೆ ಉಪಕ್ರಮಗಳಿಂದಾಗಿ ಸರಕು ಸಾಗಣೆಯಲ್ಲಿ ಬೆಳವಣಿಗೆ ಸಾಧ್ಯವಾಗಿದೆ. ಸಂಪನ್ಮೂಲ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಮೂಲಕ ವ್ಯಾಗನ್ ಗಳ ಸಮಯೋಚಿತ ಪೂರೈಕೆಯನ್ನು ಸಕ್ರಿಯಗೊಳಿಸುವಲ್ಲಿ ಮತ್ತು ನಿರ್ವಹಣಾ ಸಿಬ್ಬಂದಿಯ ಅಪಾರ ಪ್ರಯತ್ನದಿಂದಾಗಿ ಸರಕು ಸಾಗಣೆಯ ಬೆಳವಣಿಗೆಯಲ್ಲಿ ಸಾಧ್ಯವಾಗಿದೆ. ನೈಋತ್ಯ ರೈಲ್ವೆ ಮಾರ್ಗಗಳ ದ್ವಿಪಥಗೊಳಿಸುವಿಕೆ ಮತ್ತು ವಿದ್ಯುದ್ದೀಕರಣವು ಸರಕು ರೈಲುಗಳ ಸಾಗಣೆ ಸಮಯ ಕಡಿಮೆ ಮಾಡಲು, ಚಲನಶೀಲತೆ ಮತ್ತು ವಿಶ್ವಾಸಾರ್ಹತೆಗೆ ಕಾರಣವಾಗಿದೆ.

    ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಅವರು ಈ ಅನುಕರಣೀಯ ಸಾಧನೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts