More

    ಮೀಸಲಾತಿ ಹೆಚ್ಚಳ ನಿರ್ಧಾರಕ್ಕೆ ಸಂಭ್ರಮ: ಕಾರಟಗಿ-ಕನಕಗಿರಿಯಲ್ಲಿ ಎಸ್ಸಿ-ಎಸ್ಟಿ ಮುಖಂಡರ ವಿಜಯೋತ್ಸವ

    ಕಾರಟಗಿ: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ-ಪಂಗಡದ ಮೀಸಲು ಹೆಚ್ಚಿಸುವ ನಿರ್ಧಾರ ಕೈಗೊಂಡ ಹಿನ್ನಲೆಯಲ್ಲಿ ಪಟ್ಟಣದ ಕನಕದಾಸ ವೃತ್ತದಲ್ಲಿ ಬಿಜೆಪಿ ಮಂಡಲದ ಎಸ್ಸಿ, ಎಸ್ಟಿ ಮೋರ್ಚಾ ಮುಖಂಡರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಶುಕ್ರವಾರ ಸಂಭ್ರಮಾಚರಿಸಿದರು.

    ಬಿಜೆಪಿ ಮುಖಂಡ ನಾಗರಾಜ ಬಿಲ್ಗಾರ್ ಮಾತನಾಡಿ, ಬಹುದಿನಗಳ ಬೇಡಿಕೆ ಈಡೇರಿಕೆಗೆ ಶ್ರೀಗಳ ನೇತೃತ್ವದಲ್ಲಿ ಸಮುದಾಯ ನಿರಂತರ ಹೋರಾಟ ನಡೆಸಿಕೊಂಡು ಬಂದಿತ್ತು. ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳುವ ಮೂಲಕ ಸಾಂವಿಧಾನಿಕ ನ್ಯಾಯ ದೊರಕಿಸಿ ಕೊಟ್ಟಿದೆ. ಸಮುದಾಯಗಳ ಹೋರಾಟಕ್ಕೆ ಸಿಕ್ಕ ಪ್ರತಿಫಲ ಇದಾಗಿದೆ. ಇದಕ್ಕೆ ಪಕ್ಷದ ರಾಜ್ಯ ನಾಯಕರ ಜತೆಗೆ ಜಿಲ್ಲೆಯ ಶಾಸಕರಾದ ಬಸವರಾಜ ದಢೇಸುಗೂರು, ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್ ಅವರ ಶ್ರಮವೂ ಇದೆ. ಮೀಸಲಾತಿ ಹೆಚ್ಚಳದಿಂದ ಸಮುದಾಯಗಳು ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿಯೂ ಸಾಧನೆಗೆ ಸಾಧ್ಯವಾಗಲಿದೆ ಎಂದರು. ಪ್ರಮುಖರಾದ ಚನ್ನಬಸಪ್ಪ ಸುಂಕದ್, ಮೌನೇಶ ದಢೇಸುಗೂರು, ಪ್ರಭುರಾಜ್ ಬೂದಿ, ಫಕೀರಪ್ಪ, ಈರಣ್ಣ ಭೇರ್ಗಿ, ಧನಂಜಯ್, ಅಯ್ಯಪ್ಪ ಬಂಡಿ, ನಾಗನಗೌಡ ತೊಂಡಿಹಾಳ, ರಮೇಶ ಹುಡೇದ್, ಮಲ್ಲಿಕಾರ್ಜುನ ಯರಡೋಣಾ, ಕನಕರಾಯ, ರಮೇಶ ಮಾವಿನಮಡುಗು, ಬಿ.ಮಂಜುನಾಥ ನಾಯಕ, ಅಂದಾನಪ್ಪ, ಹುಲಿಗೆಮ್ಮ ನಾಯಕ, ಶಶಿ ಮೇದಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts