More

    ಟೇಕಾಫ್​ ಆಯ್ತು ದೇಶದಲ್ಲಿನ ವಿಮಾನ ಪ್ರಯಾಣಿಕರ ಸಂಖ್ಯೆ

    ನವದೆಹಲಿ: ಅನ್​ಲಾಕ್​ ಹಿನ್ನೆಲೆಯಲ್ಲಿ ದೇಶದಲ್ಲಿ ಮತ್ತೆ ಆರಂಭವಾಗಿರುವ ವಿಮಾನಯಾನ ಚಟುವಟಿಕೆಗಳಲ್ಲಿ ಚೇತರಿಕೆ ಕಂಡು ಬಂದಿದ್ದು, ವಿಮಾನ ಪ್ರಯಾಣಿಕರ ಸಂಖ್ಯೆ ಕೂಡ ಟೇಕಾಫ್​ ಆಗಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ವಿಮಾನಯಾನ ಸಚಿವ ಹರ್​ದೀಪ್​ ಸಿಂಗ್​ ಪುರಿ, ಅಕ್ಟೋಬರ್ ಅಂತ್ಯದ ವೇಳೆಗೆ ವಿಮಾನಯಾನ ಚಟುವಟಿಕೆ ಮತ್ತಷ್ಟು ಹೆಚ್ಚಳವಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಒಂದು ದಿನದಲ್ಲಿ ಸಂಚರಿಸುವ ವಿಮಾನ ಪ್ರಯಾಣಿಕರ ಸಂಖ್ಯೆ ಅ. 11ರಂದು 1,515 ವಿಮಾನಗಳಿಂದ ಒಟ್ಟು 1,78,431ಕ್ಕೆ ತಲುಪಿದ್ದು, ದೇಶಾದ್ಯಂತದ ವಿಮಾನ ನಿಲ್ದಾಣಗಳಲ್ಲಿನ ಒಟ್ಟು ಫುಟ್​ಫಾಲ್​ ಸಂಖ್ಯೆ 3.56 ಲಕ್ಷಕ್ಕೆ ಏರಿದೆ ಎಂದು ಅವರು ತಿಳಿಸಿದ್ದಾರೆ.

    ಅಕ್ಟೋಬರ್ ಅಂತ್ಯದ ವೇಳೆಗೆ ವಿಮಾನ ಪ್ರಯಾಣಿಕರ ಸಂಖ್ಯೆ ದಿನಕ್ಕೆ 2 ಲಕ್ಷ ತಲುಪಲಿದ್ದು, ದೀಪಾವಳಿ ಹಾಗೂ ವರ್ಷಾಂತ್ಯದ ವೇಳೆಗೆ ಇದು 3 ಲಕ್ಷಕ್ಕೆ ತಲುಪುವ ಅಂದಾಜಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಲಾಕ್​ಡೌನ್​ ಹಿನ್ನೆಲೆಯಲ್ಲಿ ಮಾ. 25ರಿಂದ ಎಲ್ಲ ವಾಣಿಜ್ಯ ವಿಮಾನಗಳ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಮೇ 25ರಿಂದ ದೇಶೀಯ ವಿಮಾನಗಳ ಸಂಚಾರ ಹಂತಹಂತವಾಗಿ ಆರಂಭಗೊಂಡಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts