More

    ಮಾದಕ ವಸ್ತು ಸೇವನೆಯಿಂದ ಅಪರಾಧ ಹೆಚ್ಚಳ

    ಮೂಡಿಗೆರೆ: ತಾಲೂಕಿನಲ್ಲಿ ಮಾದಕ ವಸ್ತುಗಳಿಗೆ ಯುವಕರು ಬಲಿಯಾಗುತ್ತಿದ್ದು ಇದರಿಂದ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ. ಅಪರಾಧ ತಡೆಗೆ ಪೊಲೀಸರೊಂದಿಗೆ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಿಪಿಐ ಸೋಮೇಗೌಡ ಹೇಳಿದರು.

    ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಸಾರ್ವಜನಿಕರಿಗೆ ಅಪರಾಧ ತಡೆ ಮತ್ತು ವಿಪತ್ತು ಕಾರ್ಯಾಚರಣೆ ಬಗ್ಗೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು.
    ನಾವು ತನಿಖೆ ನಡೆಸಿದ ಬಹುತೇಕ ಕೊಲೆ ಪ್ರಕರಣಗಳು ಗಾಂಜಾ ಹಾಗೂ ಡ್ರಗ್ಸ್ ಸೇವನೆಯಿಂದ ಪ್ರಭಾವಕ್ಕೊಳಗಾಗಿ ಮಾಡಿರುವ ಅಪರಾಧಗಳು. ಕಳೆದ ತಿಂಗಳು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಕ್ಕಾಜೆ ಗ್ರಾಮದ ಯುವಕನನ್ನು ಮಂಗಳೂರಿನಲ್ಲಿ ಕೊಲೆ ಮಾಡಿ ತಾಲೂಕಿನ ದೇವರಮನೆ ಪ್ರವಾಸಿ ತಾಣದ ಅರಣ್ಯದಲ್ಲಿ ಶವ ಎಸೆದಿದ್ದ ಪ್ರಕರಣ ಇದಕ್ಕೆ ಉದಾಹರಣೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಶನಿವಾರ ಬಂಧಿಸಲಾಗಿದೆ ಎಂದು ತಿಳಿಸಿದರು.
    ಮೂಡಿಗೆರೆ ಠಾಣೆ ವ್ಯಾಪ್ತಿಯ 16 ಪ್ರದೇಶಕ್ಕೆ ಬೀಟ್ ಪೊಲೀಸರನ್ನು ನೇಮಿಸಲಾಗಿದೆ. ಪ್ರತಿ ತಿಂಗಳು 2 ಬಾರಿ ರಸ್ತೆ ಸಂಚಾರ ನಿಯಮ ಪಾಲನೆ, ದುಶ್ಚಟ ನಿಯಂತ್ರಣ ಹಾಗೂ ಅಪರಾಧ ತಡೆ ಬಗ್ಗೆ ಮಾಹಿತಿ ನೀಡಲಾಗುವುದು. ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಬೇಕು. ನಿಯಮ ಉಲ್ಲಂಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಪ್ರಾಪ್ತರು ವಾಹನ ಚಲಾಯಿಸುವ ಅನೇಕ ದೂರಗಳು ಬಂದಿವೆ. ಮಕ್ಕಳ ಬದಲು ಅವರ ಪಾಲಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
    ಮಳೆಯಿಂದ ಅನಾಹುತವಾದಲ್ಲಿ ಪರಿಸ್ಥಿತಿ ನಿಭಾಯಿಸಲು ಸಾರ್ವಜನಿಕರು ಹಾಗೂ ಸಮಾಜ ಸೇವಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
    ಪಿಎಸ್‌ಐಗಳಾದ ಆದರ್ಶ, ಕಿಶೋರ್, ಧರ್ಮಸ್ಥಳ ಶೌರ್ಯ ವಿಪತ್ತು ತಂಡದ ಪ್ರವೀಣ್ ಪೂಜಾರಿ, ದಾಮೋದರ್ ಆಚಾರ್ಯ, ಉಮೇಶ್, ಕಿಶೋರ್, ಸುನಿಲ್, ಹರೀಶ್, ಮಂಜುನಾಥ್, ಅಶ್ವಥ್, ಆಟೋ ಚಾಲಕರ ಸಂಘದ ಅಧ್ಯಕ್ಷ ನಾಗೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts