More

    ಬೋರ್‌ವೆಲ್ ಡ್ರಿಲ್ಲಿಂಗ್ ದರದಲ್ಲಿ ಹೆಚ್ಚಳ

    ಕಡೂರು: ಡಿಸೇಲ್, ಕಾರ್ಮಿಕರ ಕೊರತೆ ಹಾಗೂ ಸಾಮಾಗ್ರಿ ಪರಿಕರಗಳ ಬೆಲೆ ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ಕೊಳವೆ ಬಾವಿ ಕೊರೆಯುವ ಡ್ರಿಲ್ಲಿಂಗ್ ದರವನ್ನು ರೈತರ ಅಭಿಪ್ರಾಯ ಪಡೆದು ಹೆಚ್ಚಿಸಲಾಗಿದೆ ಎಂದು ಬೋರ್‌ವೆಲ್ ಏಜೆಂಟರ್ ಸಂಘದ ಸದಸ್ಯ ವಡೇರಹಳ್ಳಿ ಅಶೋಕ್‌ತಿಳಿಸಿದರು.
    ಪಟ್ಟಣದಲ್ಲಿ ಶುಕ್ರವಾರ ಜಿಲ್ಲೆಯ ಬೋರ್‌ವೆಲ್ ಲಾರಿ ಮಾಲೀಕರು ಮತ್ತು ಏಜೆಂಟರ್‌ಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಅವರು ಮಾತನಾಡಿ, ಜಿಲ್ಲೆಯಲ್ಲಿರುವ ಎಲ್ಲ ಬೋರ್‌ವೆಲ್ ಲಾರಿಗಳ ಮಾಲೀಕರು ಹಾಗೂ ಏಜೆಂಟರ್‌ಗಳ ಸಮ್ಮುಖದಲ್ಲಿ ದರ ಹೆಚ್ಚಳದ ಬಗ್ಗೆ ಸಭೆ ನಡೆಸಲಾಗಿದ್ದು. ಸಭೆಯಲ್ಲಿ ರೈತರೊಂದಿಗೆ ಚರ್ಚೆ ನಡೆಸಿ ಬಹುತೇಕ ಬೋರ್‌ವೆಲ್ ಬಳಕೆ ಸಾಮಗ್ರಿಗಳ ದರ ಈಗಾಗಲೇ ಹೆಚ್ಚಳವಾಗಿದ್ದು ಕಾರ್ಮಿಕರ ಕೊರತೆಯಿಂದ ಲಾರಿ ಮಾಲೀಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇದರ ಪರಿಣಾಮ ಡ್ರಿಲ್ಲಿಂಗ್ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದ್ದು ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.
    ಹೊರ ರಾಜ್ಯಗಳ ಲಾರಿಗಳು ಜಿಲ್ಲೆಗೆ ಬಂದಿದ್ದು ಡ್ರಿಲ್ಲಿಂಗ್ ದರ ಹೆಚ್ಚಿಸದಿದ್ದರೆ ಹೋಗುವುದಾಗಿ ಹೇಳುತ್ತಿದ್ದಾರೆ. ನಾವು ಸಭೆ ಕರೆದು ದರ ಹೆಚ್ಚಳದ ತೀರ್ಮಾನ ಕೈಗೊಳ್ಳಲಾಗಿದೆ. ಮುಂಬರುವ ಬೇಸಿಗೆಯಲ್ಲಿ ನೂರಾರು ಜನರು ಬೋರ್‌ವೆಲ್‌ಗಳನ್ನು ಕೊರೆಸಲು ಸಿದ್ಧತೆ ನಡೆಸಿದ್ದಾರೆ. ಬೇಸಿಗೆಯ ಬೆಳೆ ಉಳಿಸಿಕೊಳ್ಳಲು ರೈತರು ಪರಿತಪಿಸುತ್ತಿರುವ ಹಿನ್ನೆಲೆಯಲ್ಲಿ ದರ ಹೆಚ್ಚಿಸುವುದು ಸೂಕ್ತವಾಗಿದೆ ಇದಕ್ಕೆ ಬೋರೆವೆಲ್ ಕೊರೆಸುವವರ ಸಹಕಾರ ಮುಖ್ಯ ಎಂದರು.
    ಬೋರ್‌ವೆಲ್ ಲಾರಿ ಮಾಲೀಕರು ಸಂಘದ ಪದಾಧಿಕಾರಿಗಳಾದ 9ನೇ ಕ್ರಾಸ್ ರಾಜಣ್ಣ, ನವೀನ್, ಮಧು, ದೇವರಾಜ್, ಹರೀಶ್, ಮಲ್ಲಿಕಾರ್ಜುನ್, ಬೀರೂರು ನವೀನ್, ಮಲ್ಲಿಕಾರ್ಜುನ್, ಉಮೇಶ್, ಪ್ರಭು, ಮಲ್ಲೇಶಪ್ಪ, ಉಪೇಂದ್ರ, ಕಿರಣ್ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts