More

    ಜನಸ್ನೇಹಿಯಾಗಿ ಕೆಲಸ ನಿರ್ವಹಿಸಿ

    ಸೇಡಂ: ಶಾಸಕಾಂಗ ರಚಿಸುವ ಯೋಜನೆಗಳಿಗೆ ಕಾಯಕಲ್ಪ ನೀಡುವವರು ಕಾರ್ಯಾಂಗದಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರು, ಹೀಗಾಗಿ ನೀವೆಲ್ಲರೂ ಜನಸ್ನೇಹಿಯಾಗಿ ಕೆಲಸ ಮಾಡುವುದು ಅವಶ್ಯವಾಗಿದೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.

    ಸುವರ್ಣ ಕರ್ನಾಟಕ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ/ಅರೆ ಸರ್ಕಾರಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಸಂಘದ ತಾಲೂಕು ಘಟಕ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಂವಿಧಾನದಲ್ಲಿ ನೌಕರಿ ಮಾಡುವವರಿಗೂ ಹಕ್ಕುಗಳನ್ನು ಕಲ್ಪಿಸಲಾಗಿದೆ. ಅದರಂತೆ ಕೆಲಸ ಮಾಡುವ ಅವಧಿ ನಿಗದಿಯಾಗಿರುತ್ತದೆ. ಇದರಿಂದಾಗಿ ಖಾಸಗಿ ವಲಯಕ್ಕಿಂತಲೂ ಸರ್ಕಾರಿ ನೌಕರಿ ಮಾಡುವವರಿಗೆ ಹೆಚ್ಚಿನ ಸೇವಾ ಭದ್ರತೆ ಸಿಗುತ್ತದೆ ಎಂದರು.

    ನಮ್ಮ ಸರ್ಕಾರ ನೌಕರರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುವ ನೌಕರರು ನಿಯಮ ಬದ್ಧರಾಗಿ ಸೇವೆ ಸಲ್ಲಿಸಿದರೆ ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಸಾರ್ವಜನಿಕರು ನಿಮ್ಮ ಬಳಿ ಸೇವೆ ಅರಸಿ ಬಂದಾಗ ಸರಿಯಾಗಿ ಸ್ಪಂದಿಸಿ. ಯಾವುದೇ ಕಾರಣಕ್ಕೂ ಜನರನ್ನು ಅಲೆದಾಡಿಸಬೇಡಿ. ನಾವು-ನೀವೆಲ್ಲರೂ ಜನರ ತೆರಿಗೆ ಹಣದಿಂದ ಬದುಕುತಿದ್ದೇವೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.

    ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿದರು. ನಿವೃತ್ತ ತಹಸೀಲ್ದಾರ್ ಸಿ.ಮಹಾದೇವಯ್ಯ ವಿಶೇಷ ಉಪನ್ಯಾಸ ನೀಡಿದರು.

    ರಾಜ್ಯ ತೋಟಗಾರಿಕೆ ಮಹಾಮಂಡಳಿ ನಿರ್ದೇಶಕ ಬಸವರಾಜ ಪಾಟೀಲ್ ಊಡಗಿ, ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಮಹಾಂತಪ್ಪ ಸಂಗಾವಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರತಿ, ಟಿಎಚ್‌ಒ ಡಾ.ಸಂಜೀವ ಪಾಟೀಲ್, ಅಕ್ಷರ ದಾಸೋಹದ ಉಮಾಪತಿರಾಜು, ಪ್ರಮುಖರಾದ ಜೈಭೀಮ, ಡಾ.ಪಂಡಿತ ಬಿ.ಕೆ, ಸಂತೋಷಕುಮಾರ ಶಿಂಧೆ, ಶಿವಶಂಕ್ರಯ್ಯಸ್ವಾಮಿ ಇಮಡಾಪುರ, ಅನೀಲಕುಮಾರ ಸುಬೇದಾರ, ಬಸವರಾಜ ಸಾಗರ, ಸುಮಾ ಚಿಮ್ಮನಚೋಡಕರ್, ಡಾ.ರಾಕೇಶ ಕಾಂಬಳೆ, ಪೀರಪ್ಪ ಕಟ್ಟಿಮನಿ, ಪ್ರಭಾಕರ, ಸೂರ್ಯಕಾಂತ ದಿಗ್ಗಾಂವ್, ತಿಪ್ಪಮ್ಮ ಇತರರಿದ್ದರು.

    ಸಂಘದ ತಾಲೂಕು ಅಧ್ಯಕ್ಷ ಗೋಪಾಲ ಸೇಡಂಕರ್ ಪ್ರಾಸ್ತಾವಿಕ ಮಾತನಾಡಿದರು. ಶಿವಶರಣಪ್ಪ ದೊಡ್ಡಮನಿ ಸ್ವಾಗತಿಸಿದರು. ಲಕ್ಷಣ ರಂಜೋಳಕರ್, ಶಿವಕುಮಾರ ನಿರೂಪಣೆ ಮಾಡಿದರು. ದೇವಿಂದ್ರಪ್ಪ ದಿಗ್ಗಾಂವ್ ವಂದಿಸಿದರು.

    ಎಸ್ಸಿ, ಎಸ್‌ಟಿ ನೌಕರರು ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸಿನಂತೆ ಕೆಲಸ ಮಾಡುತ್ತಿಲ್ಲ. ಮೀಸಲಾತಿಯಿಂದ ನಿಮಗೆಲ್ಲ ನೌಕರಿ ಸಿಕ್ಕಿದೆ, ಆದರೆ ಶೋಷಿತರ ಧ್ವನಿಯಾಗದೆ, ಸ್ವಾರ್ಥಕ್ಕಾಗಿ ಕೆಲಸ ಮಾಡುತ್ತಿದ್ದೀರಿ. ಇದು ಒಂದು ರೀತಿಯಲ್ಲಿ ಬಾಬಾ ಸಾಹೇಬ್ ಅವರಿಗೆ ಮೋಸ ಮಾಡಿದಂತೆ. ಈಗಿನಿಂದಲಾದರೂ ನೌಕರರೆಲ್ಲರೂ ಸೇರಿ ಸಮುದಾಯದ ಕನಿಷ್ಠ ೨೦ ಜನರಿಗೆ ಸ್ವಂತ ಖರ್ಚಿನಲ್ಲಿ ಶಿಕ್ಷಣ ನೀಡಿ, ಸಮಾಜದ ಮುಖ್ಯವಾಹಿನಿಗೆ ತನ್ನು.
    | ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ,ಉರಿಲಿಂಗ ಪೆದ್ದಿ ಮಠ, ಮೈಸೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts