More

    ಚೆನ್ನಂಗಿ ಶಾಲೆಯಲ್ಲಿ ಕಂಪ್ಯೂಟರ್ ಉದ್ಘಾಟನೆ

    ಸಿದ್ದಾಪುರ: ಬೆಂಗಳೂರಿನಲ್ಲಿ ನೆಲೆಸಿರುವ ದಾನಿಗಳಾದ ಪಾಲೆಕಂಡ ಮುತ್ತಪ್ಪ ಎಂಬವರು ಚೆನ್ನಂಗಿ ಶಾಲೆಗೆ ನೀಡಿರುವ ಕಂಪ್ಯೂಟರ್, ಪ್ರಿಂಟರ್ ಅನ್ನು ಶಾಲಾ ಸಭಾಂಗಣದಲ್ಲಿ ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇಕೆರೀರ ಅರುಣ್‌ಕುಮಾರ್ ಮಂಗಳವಾರ ಉದ್ಘಾಟನೆ ಮಾಡಿದರು.

    ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದ ಶಾಲೆಯಾದರೂ ಮಕ್ಕಳ ಶಿಕ್ಷಣಕ್ಕೆ ಆಸಕ್ತಿ ತೋರಿ ಶಾಲೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ದಾನಿಗಳು ಕೈಜೋಡಿಸುತ್ತಿರುವುದು ಶ್ಲಾಘನೀಯ. ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಹಿಂಬದಿಯ ತಡೆಗೋಡೆ ನಿರ್ಮಾಣ ಹಾಗೂ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಸ್ಥಳೀಯರು ಹಾಗೂ ಶಾಲೆಗೆ ನೀರಿನ ವ್ಯವಸ್ಥೆಯನ್ನು ಒದಗಿಸಲಾಗುವುದು. ಜತೆಗೆ ಶಾಲೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಮೇಕೆರೀರ ಅರುಣ್ ಕುಮಾರ್ ಭರವಸೆ ನೀಡಿದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪ್ರಕಾಶ ಅವರು ಸ್ಮಾರ್ಟ್ ಕ್ಲಾಸ್‌ಗೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಪ್ರದೇಶದ ಕಾಡಂಚಿನ ವಿದ್ಯಾರ್ಥಿಗಳು ಆಧುನಿಕ ಸೌಲಭ್ಯಗಳೊಂದಿಗೆ ಶಿಕ್ಷಣದ ಮೂಲಕ ಮುಖ್ಯ ವಾಹಿನಿಗೆ ತರಲು ಶಿಕ್ಷಕರು ಮುಂದಾಗಿದ್ದಾರೆ. ಪಾಲಕರ ಸಹಕಾರದೊಂದಿಗೆ ದಾನಿಗಳು ಕೈಜೋಡಿಸಿದ ಪರಿಣಾಮ ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸಲಾಗಿದ್ದು, ವಿದ್ಯಾರ್ಥಿಗಳು ಶಾಲೆಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
    ಶಾಲಾ ಮುಖ್ಯ ಶಿಕ್ಷಕಿ ಕೆ.ಕೆ.ಸುಶಾ ಮಾತನಾಡಿ, ಕಾಡಂಚಿನ ಚೆನ್ನಂಗಿ ಶಾಲೆಗೆ ದಾನಿಗಳಾದ ಪಾಲೆಕಂಡ ಮುತ್ತಪ್ಪ, ಪೊನ್ನಂಪೇಟೆ ಶಾರದಾಶ್ರಮ, ಅಡವಿ ಫೌಂಡೇಶನ್, ನಮ್ಮ ಕೊಡಗು ತಂಡ, ಟಾಟಾ ಸಂಸ್ಥೆ, ಗ್ರಾಮ ಪಂಚಾಯಿತಿ ಸೇರಿದಂತೆ ದಾನಿಗಳು ಹಾಗೂ ಸಂಘ ಸಂಸ್ಥೆಗಳು ಸೌಕರ್ಯ ವಿತರಣೆ ಮಾಡಿವೆ ಎಂದರು.

    ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ರೋಹಿಣಿ, ಆದಿವಾಸಿ ಮುಖಂಡ ಸಿದ್ದಪ್ಪ, ಚೆನ್ನಯ್ಯನ ಕೋಟೆ, ಹುಂಡಿ ಶಾಲಾ ಮುಖ್ಯ ಶಿಕ್ಷಕಿ ರಾಜಮ್ಮ, ಶೈಲಾ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷೆ ಈಶ್ವರಿ, ಶಿಕ್ಷಕರಾದ ಸತೀಶ್, ಮಂಜುಳಾ, ಪ್ರತಿಮಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts