More

    ಮತ್ತೀಹಳ್ಳಿ ಸರ್ಕಾರಿ ಶಾಲೆಯಲ್ಲಿ ಭೋಜನಾಲಯ ಉದ್ಘಾಟನೆ

    ಹಂಸಭಾವಿ: ಸರ್ಕಾರದ ಜತೆಗೆ ಸಂಘ ಸಂಸ್ಥೆಗಳು, ವಿವಿಧ ಕಂಪನಿಗಳು ಹಾಗೂ ಸಾರ್ವಜನಿಕರು ಮುಂದೆ ಬಂದು ತನು-ಮನ-ಧನಗಳ ಸಹಾಯ ಮಾಡಿದಾಗ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮ ಸೌಲಭ್ಯಗಳನ್ನು ಹೊಂದಲು ಸಾಧ್ಯ ಎಂದು ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕ ಮಾರುತೆಪ್ಪ ಕೆ.ಎಚ್. ಹೇಳಿದರು.

    ಸಮೀಪದ ಮತ್ತೀಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಈಸ್ಟ್- ವೆಸ್ಟ್ ಸೀಡ್ಸ್ ಪ್ರೈವೇಟ್ ಲಿ.ರವರು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ನಿರ್ವಿುಸಿದ ಭೋಜನಾಲಯವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

    ಆರ್ಗನೈಜರ್ ಎಸ್. ಆರ್. ದೊಡ್ಡನಾಗಳ್ಳಿ ಮತನಾಡಿ, ಇಂದಿನ ಖಾಸಗಿ ಶಾಲೆಗಳ ಪೈಪೋಟಿಯಲ್ಲಿ ಸರ್ಕಾರಿ ಶಾಲೆಗಳು ಕ್ಷೀಣಿಸುತ್ತಿವೆ. ಅವುಗಳಿಗೆ ಸಮಾನವಾಗಿ ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದಬೇಕು ಎಂದರು.

    ಕಂಪನಿಯ ರೀಜಿನಲ್ ಮ್ಯಾನೇಜರ್ ಸ್ವಾರಣ್ಣ ಮಾತನಾಡಿ ಇಂತಹ ಕಾರ್ಯಗಳು ನಡೆಸಬೇಕೆಂದರೆ ಪ್ರಮುಖವಾಗಿ ರೈತರು ಕಾರಣೀಕರ್ತರಾಗಿರುತ್ತಾರೆ ಏಕೆಂದರೆ ರೈತರು ಉತ್ತಮವಾದ ಬೆಳೆ ಬೆಳೆದಾಗ ಮಾತ್ರ ಕಂಪನಿಗಳು ಲಾಭದಲ್ಲಿರುತ್ತವೆ ಆದ್ದರಿಂದ ಮೊದಲನೆಯದಾಗಿ ನಾವು ರೈತರನ್ನು ಗೌರವಿಸಬೇಕು ಎಂದರು

    ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಕೋಡೆಪ್ಪ ಸಂಗಣ್ಣನವರ, ಗ್ರಾಪಂ ಸದಸ್ಯ ಪ್ರಭುಗೌಡ ಮಾತನಾಡಿದರು.

    ಈಸ್ಟ್- ವೆಸ್ಟ್ ಸೀಡ್ಸ್ ಪ್ರೈವೇಟ್ ಲಿ. ಅಧಿಕಾರಿ ಮುರುಘೕಂದ್ರ ಇಬ್ರಾಹಿಂಪುರ, ಭಗವತ್ ಜಾಧವ,ಉಜ್ಜಪ್ಪ ಹಳ್ಳಳ್ಳಿ, ಶಂಕರಪ್ಪ ನೇಕಾರ, ನಿಶಾಂಥ ರವಿ, ಗ್ರಾಮಸ್ಥರಾದ ಗೀತಾ ಚಲವಾದಿ, ಕಾವ್ಯಾ ಬತ್ತಿಕೊಪ್ಪ, ಶಿವಲೀಲಾ ಪುಟ್ಟಣ್ಣನವರ, ಸಿದ್ದಪ್ಪ ಕಾರಗೇರ, ಚಂದ್ರಪ್ಪ ರಾಗೀಕೊಪ್ಪ, ಪ್ರಕಾಶ ಬತ್ತಿಕೊಪ್ಪ, ಸೋಮಪ್ಪ ಬತ್ತಿಕೊಪ್ಪ, ಗುಡ್ಡಪ್ಪ ಚಲವಾದಿ, ಮಲ್ಲೇಶಪ್ಪ ಬತ್ತಿಕೊಪ್ಪ, ಬಸವರಾಜ ಮಾಸಣಗಿ, ಸಿ.ಆರ್.ಪಿ.ಎಂ.ಕೆ. ಹೊಳಜೋಗಿ, ಚಂದ್ರಪ್ಪ ಎಲವದಹಳ್ಳಿ, ಪರಮೇಶಪ್ಪ ಬತ್ತಿಕೊಪ್ಪ, ಎಸ್.ಡಿ.ಎಂ.ಸಿ. ಅಧ್ಯಕ್ಷ ಹನುಮಂತಪ್ಪ ದೀವಿಗಿಹಳ್ಳಿ, ಚಂದ್ರಪ್ಪ ದೀವಿಗಿಹಳ್ಳಿ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಸಿಬ್ಬಂದಿ ಮತ್ತು ಅಡುಗೆ ಸಿಬ್ಬಂದಿ ಉಪಸ್ಥಿತರಿದ್ದರು.

    ಪ್ರಧಾನ ಗುರು ಪಿ.ಜಿ. ಕಟ್ಟೀಮನಿ ಸ್ವಾಗತಿಸಿದರು. ಶಿಕ್ಷಕ ಜಗದೀಶ ಬಂಡೇರ ನಿರೂಪಿಸಿದರು. ಶಿಕ್ಷಕಿ ಮಂಜುಳಾ ಎಸ್.ಕೆ. ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts