More

    ಜೆಡಿಎಸ್ ಇನ್​ಆ್ಯಕ್ಟಿವ್ ಪಕ್ಷ, ನಾನು ಅದರ ಇನ್​ಆ್ಯಕ್ಟಿವ್ ಕಾರ್ಯಾಧ್ಯಕ್ಷ: ಮಧುಬಂಗಾರಪ್ಪ ಹೀಗೆ ಹೇಳಿದ್ದೇಕೆ?!

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಂತೆ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ. ಹುಟ್ಟುಹಬ್ಬ ಆಚರಿಸಿದ ಕಾರ್ಯಕರ್ತರಿಗೂ ಯುವಘಟಕದವರಿಗೂ ಧನ್ಯವಾದಗಳು. ವಯಸಾಗುತ್ತಿದ್ದಂತೆ ಜವಾಬ್ದಾರಿಗಳು ಹೆಚ್ಚುತ್ತವೆ ಲೋಕಸಭಾ ಚುನಾವಣೆ ಬಳಿಕ ‌ನಾನು ಮಾಧ್ಯಮಗಳಿಂದ ದೂರ ಉಳಿದೆ. ಇದು ಪಕ್ಷದ ಕಾರಣಕ್ಕಾಗಿ ಅಲ್ಲ, ವೈಯಕ್ತಿಕವಾಗಿಯೇ ನಾನು ದೂರ ಇದ್ದೆ. ಮನಸಿಗೆ ನನಗೆ‌ನೋವಾಗಿದೆ. ಕಾರ್ಯಕರ್ತರಿಗೂ ನೋವಾಗಿದೆ ಎಂದು ಜೆಡಿಎಸ್​ನ ಕಾರ್ಯಾಧ್ಯಕ್ಷ ಮಧುಬಂಗಾರಪ್ಪ ಅಲವತ್ತುಕೊಂಡಿದ್ದಾರೆ.

    ಸುದ್ದಿಗಾರರ ಜತೆ ಮಾತನಾಡಿದ ಅವರು, ಜೆಡಿಎಸ್​ ಪಕ್ಷದಲ್ಲಿ ಕಾರ್ಯಕರ್ತರಿಗೆ ಸ್ಪಂದನೆ ಇರದೇ ಇರುವುದು ಬೇಸರದ ಸಂಗತಿ. ಅದು ಕಾರ್ಯಕರ್ತರ ವಿಶ್ವಾಸವನ್ನು ಕಳೆದುಕೊಂಡಿದೆ. ಹೆಚ್.ವಿಶ್ವನಾಥ್ ಜೆಡಿಎಸ್ ಬಿಡುವಾಗ ಹಿಂದಿನ ದಿನ ನಾನು ಅವರೊಂದಿಗೆ ಇದ್ದೆ. ವಿಶ್ವನಾಥ್ ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದ್ದೆ. ವಿಶ್ವನಾಥ್ ಅವರಿಗೆ ಪಕ್ಷ ಬಿಡುವ ಸಂದರ್ಭ ಏನಾಯಿತೋ ಗೊತ್ತಿಲ್ಲ. ವಿಶ್ವನಾಥ್ ಹಾಗೂ ಕುಮಾರಸ್ವಾಮಿ ನಡುವೆ ವೈಷಮ್ಯ ಹುಟ್ಟಿಸಲು ಕೆಲವರು ಪ್ರಯತ್ನ‌ಮಾಡಿದ್ದರು ಎಂದು ಮಧು ಹೇಳಿದರು.

    ನಾಯಕರನ್ನು ಸೃಷ್ಟಿಮಾಡುವ ಪಕ್ಷ‌ ಜೆಡಿಎಸ್ ಆದರೂ ನಾಯಕರನ್ನು ಉಳಿಸಿಕೊಳ್ಳಬೇಕು. ನಾಯಕರ‌ನ್ನು‌ ಹೀಗೆ ಕಳೆದುಕೊಳ್ಳುತ್ತಾ ಹೋದರೆ ಪಕ್ಷ ಉಳಿಯುತ್ತದೆಯಾ?. ಎಂಎಲ್‌ಸಿ ಸ್ಥಾನ ರಮೇಶ್‌ಗೌಡ ನಂತಹ ಕ್ರಿಮಿನಲ್ ಗೆ ಕೊಟ್ಟಿದ್ದು ನಿಜಕ್ಕೂ ಬೇಸರದ ಸಂಗತಿ. ಕಾರ್ಯಾಧ್ಯಕ್ಷನಾದರೂ ಸೈ ಕಾರ್ಯಕರ್ತನಾಗಿಯೂ, ನನ್ನೊಂದಿಗೆ ಬಂಗಾರಪ್ಪ ಅನ್ನೋ ಹೆಸರೇ ದೊಡ್ಡ ಹುದ್ದೆ. ಬಂಗಾರಪ್ಪ ಅವರ ಹೆಸರನ್ನು ತೆಗೆದುಹಾಕುವ ಯಾವ ಹುದ್ದೆಯೂ ಇಲ್ಲ ಎಂದು ಮಧು ಬಂಗಾರಪ್ಪ ಹೇಳಿಕೊಂಡಿದ್ದಾರೆ.
    ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಕೆಲವರು ತಪ್ಪಾಗಿ ನಡೆದುಕೊಂಡಿದ್ದಾರೆ. ಅವರು ಯಾರೆಂದು ಮುಂದೆ‌ಹೇಳುತ್ತೇನೆ. ಮೈತ್ರಿ ಸರ್ಕಾರದಲ್ಲಿ ಮಂತ್ರಿಗಳಾಗಿ ಅಧಿಕಾರ ಪಡೆದವರು ಕಾರ್ಯಕರ್ತರೊಂದಿಗೆ ಸರಿಯಾಗಿ ನಡೆದುಕೊಳ್ಳಲಿಲ್ಲ. ಮತ್ತೆ ಕಾರ್ಯಕರ್ತರ ವಿಶ್ವಾಸ ಪಡೆದುಕೊಳ್ಳುವುದು ಕಷ್ಟವೇ ಇದೆ. ರಾಜಕೀಯವಾಗಿ ನನಗೆ ಬೆಳೆಯಲು ಆಸೆಯಿದೆ ಎಂದ ಮಧು ಬಂಗಾರಪ್ಪ, ನಾನು ಇನ್ ಆ್ಯಕ್ಟಿವ್ ಪಾರ್ಟಿ ಜೆಡಿಎಸ್‌ನ ನಾಯಕ ಮಾತ್ರ. ಜೆಡಿಎಸ್‌ನಲ್ಲಿ ವ್ಯವಸ್ಥೆಯೇ ಸರಿಯಿಲ್ಲ ಎಂದು ಬೇಸರಿಸಿದ್ದಾರೆ.

    ನಾನು ಇನ್ ಆ್ಯಕ್ವಿವ್ ಪಕ್ಷದ ಇನ್‌ ಆ್ಯಕ್ವಿವ್ ಕಾರ್ಯಾಧ್ಯಕ್ಷ. ಹಾಗಾಗಿ ನಾನಾಗಿಯೇ ಹುದ್ದೆಗೆ ರಾಜೀನಾಮೆ ಕೊಡುವುದಿಲ್ಲ. ಬೇಕಾದರೆ ಅವರು ಕೇಳಬಹುದು ಇಲ್ಲ‌ ನನ್ನನ್ನು ಹುದ್ದೆಯಿಂದ ತೆಗೆಯಬಹುದು ಎಂದು ಮಧು ಹೇಳಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts